ತುಮಕೂರು: ಕೊವಿಡ್ ಲಸಿಕೆಗೆ ಹಿಂದೇಟು; ಬಡಾವಣೆ ಜನರ ನೀರು, ವಿದ್ಯುತ್ ಸ್ಥಗಿತಗೊಳಿಸಿದ ಅಧಿಕಾರಿಗಳು
40 ಕ್ಕೂ ಹೆಚ್ಚು ಮನೆಗಳ 100 ಕ್ಕೂ ಹೆಚ್ಚು ಜನರು ಕೊವಿಡ್ ಲಸಿಕೆ ಹಾಕಿಕೊಳ್ಳಲು ನಿರಾಕರಿಸಿದ್ದರಿಂದ ಪುರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನೀರು ಮತ್ತು ವಿದ್ಯುತ್ ಸ್ಥಗಿತಗೊಳಿಸಿ ಶಿಕ್ಷೆ ವಿಧಿಸಿದ್ದಾರೆ.
ತುಮಕೂರು: ಕೊವಿಡ್ ಲಸಿಕೆ ಕುರಿತು ಎಷ್ಟೇ ಜಾಗೃತಿ ಅಭಿಯಾನಗಳನ್ನು ಮಾಡಿದರೂ ಜನರು ಮಾತ್ರ ಈಗಲೂ ಲಸಿಕೆ ಪಡೆಯುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಲಸಿಕೆ (Coronavaccine) ನೀಡಲು ಸಿಬ್ಬಂದಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ತುಮಕೂರು ಅಧಿಕಾರಿಗಳು ಕೊರೊನಾ ಲಸಿಕೆ ನೀಡಲು ಹೊಸ ಪ್ರಯೋಗ ಮಾಡಿದ್ದು, ಪಾವಗಡ ಪಟ್ಟಣದ ಕನುಮಲಚೆರವು ಬಡಾವಣೆಯಲ್ಲಿ ನೀರು ಮತ್ತು ವಿದ್ಯುತ್ ಸ್ಥಗಿತಗೊಳಿಸಿದ್ದಾರೆ.
40 ಕ್ಕೂ ಹೆಚ್ಚು ಮನೆಗಳ 100 ಕ್ಕೂ ಹೆಚ್ಚು ಜನರು ಕೊವಿಡ್ ಲಸಿಕೆ ಹಾಕಿಕೊಳ್ಳಲು ನಿರಾಕರಿಸಿದ್ದರಿಂದ ಪುರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನೀರು ಮತ್ತು ವಿದ್ಯುತ್ ಸ್ಥಗಿತಗೊಳಿಸಿ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ ತುಮಕೂರು ಜಿಲ್ಲೆಯಲ್ಲಿ ಇನ್ನೂ 3 ಲಕ್ಷ ಜನರು ಮೊದಲ ಡೋಸ್ ಲಸಿಕೆ ಪಡೆದಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ.
ಕೊವಿಡ್ ಲಸಿಕೆಗೂ ನೀರು, ವಿದ್ಯುತ್ ಸಂಪರ್ಕ ಕಡಿತಕ್ಕೂ ಸಂಬಂಧ ಇಲ್ಲ. ಡೆಪಾಸಿಟ್ ಕೊಡದೆ ನೀರಿನ ಸಂಪರ್ಕ ಪಡೆದಿದ್ದರಿಂದ ಕಡಿತಗೊಳಿಸಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಅರ್ಚನಾ ಮಾತ್ರ ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನೂ ಓದಿ: ಕೊರೊನಾ ಇಳಿಕೆ ಬೆನ್ನಲ್ಲೇ 2ನೇ ಡೋಸ್ ಲಸಿಕೆಗೆ ಜನರು ಹಿಂದೇಟು, ಸಿಂಗಾಪುರ ಮಾಡೆಲ್ ಪ್ರಸ್ತಾಪ ಮಾಡಿದ ತಾಂತ್ರಿಕ ಸಲಹಾ ಸಮಿತಿ
ಸರ್ಟಿಫಿಕೇಶನ್ ಸಿಕ್ಕ ತಕ್ಷಣ ಮಕ್ಕಳಿಗೆ ಕೊರೊನಾ ಲಸಿಕೆ: ಉಡುಪಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ