Murugha mutt Swamiji Pocso case: ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲಿಸಲು ಸಮಯ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ಪೊಲೀಸರು

| Updated By: ಆಯೇಷಾ ಬಾನು

Updated on: Aug 29, 2022 | 4:22 PM

CRPC ಸೆಕ್ಷನ್ 161ರಡಿ ಪೊಲೀಸ್ ಟೀಮ್ ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲಿಸಿದ್ದರು. ಹೇಳಿಕೆ ದಾಖಲು ನಂತರ ವೈದ್ಯಕೀಯ ಪರೀಕ್ಷೆಯೂ ಮುಗಿದಿದೆ. ಈಗ ಜಡ್ಜ್ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಲು ಸಜ್ಜಾಗಿದ್ದಾರೆ.

Murugha mutt Swamiji Pocso case: ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲಿಸಲು ಸಮಯ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ಪೊಲೀಸರು
ಮುರುಘಾ ಮಠಕ್ಕೆ ಪೊಲೀಸ್ ಸರ್ಪಗಾವಲು
Follow us on

ಚಿತ್ರದುರ್ಗ: ಮುರುಘಾ ಶರಣರ (Murugha mutt Swamiji) ವಿರುದ್ಧ ಪೋಕ್ಸೋ ಕೇಸ್​ ದಾಖಲು ವಿಚಾರಕ್ಕೆ ಸಂಬಂಧಿಸಿ ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲಿಸಲು ಸಮಯ ಕೋರಿಕೆ ಚಿತ್ರದುರ್ಗ ನ್ಯಾಯಾಲಯಕ್ಕೆ ಪೊಲೀಸರು ಮನವಿ ಸಲ್ಲಿಸಿದ್ದಾರೆ.

CRPC ಸೆಕ್ಷನ್ 161ರಡಿ ಪೊಲೀಸ್ ಟೀಮ್ ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲಿಸಿದ್ದರು. ಹೇಳಿಕೆ ದಾಖಲು ನಂತರ ವೈದ್ಯಕೀಯ ಪರೀಕ್ಷೆಯೂ ಮುಗಿದಿದೆ. ಈಗ ಜಡ್ಜ್ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಲು ಸಜ್ಜಾಗಿದ್ದಾರೆ. ಆದ್ರೆ ಈ ವೇಳೆ ಪೊಲೀಸ್ ಅಧಿಕಾರಿಗಳು ಹೇಳಿಕೆ ದಾಖಲಿಸಲು ನ್ಯಾಯಾಧೀಶರ ಸಮಯ ಕೋರಿದ್ದಾರೆ.

CRPC ಸೆಕ್ಷನ್ 164ರ ಅಡಿ ಸಂತ್ರಸ್ತೆಯರ ಹೇಳಿಕೆ ಕೊಡಿಸಲು ಸಜ್ಜಾಗಿದ್ದಾರೆ. ದೌರ್ಜನ್ಯ ಆಗಿದೆ ಎಂದು ಜಡ್ಜ್‌ ಮುಂದೆ ಆರೋಪಿಸಿದರೆ ಬಂಧನವಾಗುವುದು ಪಕ್ಕಾ. ಪೋಕ್ಸೋ ಕೇಸ್‌ ಆಗಿರೋದ್ರಿಂದ ಶ್ರೀಗಳ ಬಂಧನ ಅನಿವಾರ್ಯವಾಗುತ್ತದೆ. ಸದ್ಯಕ್ಕೆ ಚಿತ್ರದುರ್ಗ ಮಠದಲ್ಲಿಲ್ಲೇ ಡಾ.ಶಿವಮೂರ್ತಿ ಶರಣರಿದ್ದು ಚಿತ್ರದುರ್ಗ ಬಾಲಮಂದಿರದಲ್ಲಿ ಸಂತ್ರಸ್ತ ಬಾಲಕಿಯರಿಗೆ ಆಶ್ರಯ ನೀಡಲಾಗಿದೆ.

ಪೊಲೀಸರು ಪ್ರಕರಣವನ್ನ ವಿಳಂಬ ಮಾಡುತ್ತಿದ್ದಾರೆ

ಇನ್ನು ಮತ್ತೊಂದೆಡೆ ಮೈಸೂರಿನ ಒಡನಾಡಿ ಸಂಸ್ಥೆಯ ಸರಸ್ವತಿ ಈ ಬಗ್ಗೆ ಮಾತನಾಡಿದ್ದು, ನಮ್ಮ ಒಡನಾಡಿ ಸಂಸ್ಥೆಯ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ. ನಿನ್ನೆಯತನಕ ನಮ್ಮಗೆ ಸಂತ್ರಸ್ತರ ಜೊತೆ ಇರಲು ಅವಕಾಶ ನೀಡಿದ್ರು. ಇಂದು ಮಕ್ಕಳನ್ನ ಭೇಟಿಯಾಗಲು ಅವಕಾಶ ನೀಡುತ್ತಿಲ್ಲ. ಪ್ರಕರಣ ಬೆಳಕಿಗೆ ಬಂದು ನಾಲ್ಕು ದಿನವಾಗಿದೆ‌. ನಿನ್ನೆಯ ವಿಚಾರಣೆ ವೇಳೆಯೂ ಸಂತ್ರಸ್ತರು ಹೇಳಿಕೆ ನೀಡಿದ್ದಾರೆ. CWC ಯವರು ನಿನ್ನೆಯ ತನಕ ನಮಗೆ ಬೆಂಬಲ ನೀಡಿದ್ರು. ಇಂದು ನಮ್ಮನ್ನ ದೂರವಿಟ್ಟಿದ್ದಾರೆ. ಸಂತ್ರಸ್ತರಿಂದ ಆದಷ್ಟು ಬೇಗ 164 ಅಡಿಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಬೇಕು. ಸಂತ್ರಸ್ತರಿಂದ ಸ್ಥಳ ಮಹಜರ್ ಆಗಬೇಕಿದೆ. ಆದ್ರೆ ಜಿಲ್ಲಾಢಳಿತ ಜಿಲ್ಲಾ ಪೊಲೀಸರು ಪ್ರಕರಣವನ್ನ ವಿಳಂಬ ಮಾಡುತ್ತಿದ್ದಾರೆ ಎಂದು ಸರಸ್ವತಿ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸಂತ್ರಸ್ತ ಬಾಲಕಿಯರನ್ನು ಸ್ಥಳ ಮಹಜರಿಗೆ ಕರೆದೊಯ್ದ ತಂಡ

ಚಿತ್ರದುರ್ಗ ನಗರದಲ್ಲಿ ಸಿಡಬ್ಲ್ಯೂಸಿ ತಂಡ, ಸಂತ್ರಸ್ತ ಬಾಲಕಿಯರನ್ನು ಸ್ಥಳ ಮಹಜರಿಗೆ ಕರೆದೊಯ್ದಿದೆ. ಬಾಲಮಂದಿರದಿಂದ ಮುರುಘಾಮಠಕ್ಕೆ ಸಂತ್ರಸ್ತರನ್ನು ಕರೆದುಕೊಂಡು ಹೋಗಲಾಗಿದೆ. ಜಿಲ್ಲಾಧಿಕಾರಿ. CWC. ಮೈಸೂರಿನ ಒಡನಾಡಿ ತಂಡ ಸಾಥ್ ಜೊತೆ ಹೋಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:52 pm, Mon, 29 August 22