ಜೈಲಲ್ಲಿದ್ದ ಪೋಕ್ಸೋ ಪ್ರಕರಣದ ಆರೋಪಿ ದಿಢೀರ್​ ಸಾವು; ತನಿಖೆಗೆ ಸಂಬಂಧಿಕರ ಆಗ್ರಹ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 04, 2024 | 2:26 PM

ಪೋಕ್ಸೋ ಪ್ರಕರಣದ ಆರೋಪಿ ಸುಮಾರು 3ವರ್ಷದಿಂದ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿದ್ದನು. ಆದ್ರೆ, ನಿನ್ನೆ(ಏ.03) ಬೆಳಗಿನ ಜಾವ ದಿಢೀರನೆ ಸಾವಿಗೀಡಾಗಿದ್ದು, ಸಂಬಂಧಿಕರಲ್ಲಿ ಅನುಮಾನ ಮೂಡಿಸಿದೆ. ಆದ್ರೆ, ಜಿಲ್ಲಾ ಕಾರಾಗೃಹದ ಜೈಲರ್ ಶ್ರೀಮಂತ್ ಪಾಟೀಲ್ ಮಾತ್ರ ‘ಎದೆನೋವು ಎಂಬ ಕಾರಣಕ್ಕೆ ಜಿಲ್ಲಾಸ್ಪತ್ರೆಗೆ ಕರೆತಂದಿದ್ದೆವು. ವೈದ್ಯರು ಬ್ರಾಡ್ ಡೆಡ್ ಎಂದು ತಿಳಿಸಿದ್ದಾರೆ ಎಂದಿದ್ದಾರೆ.

ಜೈಲಲ್ಲಿದ್ದ ಪೋಕ್ಸೋ ಪ್ರಕರಣದ ಆರೋಪಿ ದಿಢೀರ್​ ಸಾವು; ತನಿಖೆಗೆ ಸಂಬಂಧಿಕರ ಆಗ್ರಹ
ಪೋಕ್ಸೋ ಪ್ರಕರಣದ ಆರೋಪಿ​ ಸಾವು; ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ
Follow us on

ಚಿತ್ರದುರ್ಗ, ಏ.04: ಜಿಲ್ಲೆಯ ಹೊಳಲ್ಕೆರೆ(Holalkere) ತಾಲೂಕಿನ ಕಾಗಳಗೆರೆ ಗ್ರಾಮದ ರಮೇಶ್ (36) ಫೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದನು. ಮೊನ್ನೆಯಷ್ಟೇ ಕುಟುಂಬಸ್ಥರಿಗೆ ಕರೆ ಮಾಡಿ ಮಾತನಾಡಿದ್ದನಂತೆ. ಯುಗಾದಿ ಹಬ್ಬದ ಬಳಿಕ ಭೇಟಿಗೆ ಬನ್ನಿ ಎಂದು ತಾಯಿ, ತಂಗಿ ಮತ್ತು ಸಹೋದರರಿಗೆ ಹೇಳಿದ್ದನಂತೆ. ಆದ್ರೆ, ನಿನ್ನೆ(ಏ.03) ಬೆಳಗಿನ ಜಾವ ಜಿಲ್ಲಾ ಕಾರಾಗೃಹದ ಜೈಲರ್ ಶ್ರೀಮಂತ್ ಪಾಟೀಲ್ ಕರೆ ಮಾಡಿ ರಮೇಶ್ ಸಾವಿಗೀಡಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಆದ್ರೆ, ಜೈಲಿನಲ್ಲಿ ಏನೋ ಮೋಸ ನಡೆದಿದೆ. ಈ ಸಾವಿನ ಬಗ್ಗೆ ನಮಗೆ ಅನುಮಾನಗಳಿವೆ. ಹೀಗಾಗಿ, ರಮೇಶ್
ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಮೃತನ ಸಹೋದರಿ ಮತ್ತು ಸಂಬಂಧಿಕರು ಆಗ್ರಹಿಸಿದ್ದಾರೆ. ಜಿಲ್ಲಾ ಕಾರಾಗೃಹದಲ್ಲಿ
ಹಲ್ಲೆ ನಡೆದಿದೆಯೇ ಎಂಬ ಅನುಮಾನವೂ ಇದೆ. ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಬಗ್ಗೆ ಕೂಲಂಕುಷ
ತನಿಖೆ ನಡೆಯಬೇಕಿದೆ.

ಇದನ್ನೂ ಓದಿ:ಹಾವೇರಿ: ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಬೊಲೆರೊ ಡಿಕ್ಕಿ: ಮೂವರು ಸೇರಿ 20 ಕುರಿಗಳು ಸಾವು

ಬೆಂಗಳೂರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ

ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈಯಲಾಗಿದೆ. ಎರಡು ದಿನಗಳ ಹಿಂದೆ ಅಮೃತಹಳ್ಳಿಯ ಕಾಫಿ ಬೋರ್ಡ್ ಬಳಿ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಯಚೂರು ಮೂಲದ 55 ವರ್ಷದ ಮಹಿಳೆ ಕೊಲೆಯಾದ ದುರ್ದೈವಿ‌. ಗಾರೆ ಕೆಲಸ ಮಾಡುತ್ತಿದ್ದ ‌ಮಹಿಳೆಯನ್ನು ಎಳೆದೊಯ್ದು
ರಾತ್ರಿ ವೇಳೆ ನಿರ್ಮಾಣ ಹಂತದ ಕಟ್ಟಡದಲ್ಲಿ ಅತ್ಯಾಚಾರ ಎಸಗಿ ಕೊಲೆಗೈಯಲಾಗಿದೆ. ಮರು ದಿನ ಬೆಳಿಗ್ಗೆ ಕಟ್ಟಡದ ಮಾಲೀಕ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಖಾಸಗಿ ಭಾಗದಲ್ಲಿ ವಿಕೃತಿ ಮೆರೆದು ಕೊಲೆ ಮಾಡಲಾಗಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈಗಾಗಲೇ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Thu, 4 April 24