ಮುರುಘಾಶ್ರೀ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್: ಜಿಲ್ಲಾ ಆಸ್ಪತ್ರೆಯಲ್ಲಿ ಬಾಲಕಿಯರಿಗೆ ಮೆಡಿಕಲ್ ಟೆಸ್ಟ್, ಶ್ರೀಗಳಿಗೆ ಎದುರಾಗುತ್ತಾ ಕಂಟಕ?

| Updated By: ಆಯೇಷಾ ಬಾನು

Updated on: Aug 28, 2022 | 7:20 PM

ಮೈಸೂರಿನ ನಜರಬಾದ್‌ ಠಾಣೆಯಲ್ಲಿ ಶ್ರೀಗಳ ವಿರುದ್ಧ ನೀಡಿದ್ದ ಹೇಳಿಕೆಯನ್ನೇ ಇಲ್ಲೂ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಅದೇ ರೀತಿ ಮ್ಯಾಜಿಸ್ಟ್ರೇಟ್‌ ಮುಂದೆಯೇ ಶ್ರೀಗಳ ವಿರುದ್ಧ ಆರೋಪ ಮಾಡಿದ್ರೆ ಮರುಘಾಶ್ರೀಗಳಿಗೆ ಸಂಕಷ್ಟ ಎದುರಾಗಲಿದೆ.

ಮುರುಘಾಶ್ರೀ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್: ಜಿಲ್ಲಾ ಆಸ್ಪತ್ರೆಯಲ್ಲಿ ಬಾಲಕಿಯರಿಗೆ ಮೆಡಿಕಲ್ ಟೆಸ್ಟ್, ಶ್ರೀಗಳಿಗೆ ಎದುರಾಗುತ್ತಾ ಕಂಟಕ?
ಸಾಂದರ್ಭಿಕ ಚಿತ್ರ
Image Credit source: The Hindu
Follow us on

ಚಿತ್ರದುರ್ಗ: ರಾಜ್ಯದ ದೊಡ್ಡ ಮಠಗಳಲ್ಲಿ ಒಂದೆನಿಸಿಕೊಂಡಿರೋ ಚಿತ್ರದುರ್ಗದ ಮುರುಘಾಮಠ(Murugha Mutt), ಕೋಟೆನಾಡಿನ ಹೆಗ್ಗುತುರು. ಆದ್ರೆ ಇದೇ ಮಠದ ಪೀಠಾಧಿಪತಿಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮುರುಘಾ ಮಠದ ಶ್ರೀಗಳ ವಿರುದ್ಧ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ ಮಾಡಿರೋ ಆರೋಪ ಕೇಳಿ ಬಂದಿದೆ. ಶ್ರೀಗಳ ವಿರುದ್ಧ ಪೊಕ್ಸೊ ಕಾಯ್ದೆಯಡಿ ಎಫ್‌ಐಆರ್‌ ದಾಖಲಾಗಿದೆ. ಈ ಕೇಸ್‌ನಲ್ಲಿ ಇವತ್ತು ಬಾಲಕಿಯ ವಿಚಾರಣೆ ನಡೆಸಿ, ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ಶ್ರೀಗಳಿಗೆ ಕಂಟಕ ಎದುರಾಗುವ ಸಾಧ್ಯತೆ ಕಾಣ್ತಿವೆ.

ಬಾಲಮಂದಿರಲ್ಲಿ ಸತತ ನಾಲ್ಕು ಗಂಟೆ ಹೇಳಿಕೆ ದಾಖಲು

ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ಆಗಸ್ಟ್ 16ರಂದು ಕೇಸ್‌ ದಾಖಲಿಸಿ ಒಡನಾಡಿ ಸಂಸ್ಥೆಯ ಬಾಲಕಿಯರ ಕೇಂದ್ರದಲ್ಲೇ ಆಶ್ರಯ ಪಡೆದಿದ್ದ ಸಂತ್ರಸ್ತೆಯರು, ಇವತ್ತು(ಆಗಸ್ಟ್ 28) ಬೆಳಗ್ಗೆ 4 ಗಂಟೆ ಸುಮಾರಿಗೆ ಚಿತ್ರದುರ್ಗಕ್ಕೆ ಆಗಮಿಸಿದ್ರು. ಬೆಳಗ್ಗೆ 4 ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಬಾಲಕಿಯರನ್ನ ಸರ್ಕಾರಿ ಬಾಲಮಂದಿರದಲ್ಲೇ ಇರಿಸಲಾಗಿತ್ತು. ಬೆಳಗ್ಗೆ 10 ಗಂಟೆಗೆ ಅಲ್ಲೇ ಬಾಲಕಿಯರಿಂದ ಹೇಳಿಕೆ ಪಡೆಯಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಡಬ್ಲ್ಯೂಸಿ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಎಲ್ಲರ ಸಮ್ಮುಖದಲ್ಲಿ ಬಾಲಕಿಯರ ವಿಚಾರಣೆ ನಡೆದಿದೆ. ದೂರುದಾರರಾಗಿರೋ ಇಬ್ಬರು ಬಾಲಕಿಯರನ್ನ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಹೇಳಿಕೆ ಪಡೆಯಲಾಯ್ತು. ಈ ವೇಳೆ ಮಹಿಳಾ ಸಿಬ್ಬಂದಿಯೇ ಬಾಲಕಿಯರಿಂದ ಹೇಳಿಕೆ ದಾಖಲಿಸಿಕೊಂಡಿದ್ದು, ಅವರ ಪೋಷಕರನ್ನೂ ಅಲ್ಲಿಗೆ ಕರೆಸಲಾಗಿತ್ತು. ಈ ಎಲ್ಲಾ ಪ್ರಕ್ರಿಯೆಯನ್ನ ವಿಡಿಯೋ ರೆಕಾರ್ಡ್‌ ಕೂಡಾ ಮಾಡಲಾಗಿದೆ.

ಮುರುಘಾಶ್ರೀ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜಿಲ್ಲಾಸ್ಪತ್ರೆಯಲ್ಲೇ ಮೆಡಿಕಲ್‌ ಟೆಸ್ಟ್‌

ಇನ್ನು ಬಾಲಮಂದಿರದಲ್ಲಿ ವಿಚಾರಣೆ ಮುಗಿಯುತ್ತಿದ್ದಂತೆ ಌಂಬುಲೆನ್ಸ್‌ನಲ್ಲೇ ಸಂತ್ರಸ್ತೆಯರನ್ನ ಜಿಲ್ಲಾಸ್ಪತ್ರೆಗೆ ಕರೆದೊಯ್ಯುಲಾಯ್ತು. ಈ ವೇಳೆ ಬಾಲಕಿಯರ ಜೊತೆ ಪೋಷಕರೂ ಇದ್ರು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯೆ ಡಾಕ್ಟರ್‌ ಉಮಾ ಮೆಡಿಕಲ್‌ ಟೆಸ್ಟ್‌ ನಡೆಸಿದ ಬಳಿಕ ವಾಪಸ್‌ ಬಾಲಮಂದಿರಕ್ಕೆ ಕರೆತರಲಾಯ್ತು. ಸದ್ಯ ಈಗ ಟೆಸ್ಟ್ ರಿಪೋರ್ಟ್ ಬಂದ ಬಳಿಕ ಮ್ಯಾಜಿಸ್ಟ್ರೇಟ್‌ ಮುಂದೆ ಸಂತ್ರಸ್ತೆಯರನ್ನ ಹಾಜರು ಪಡಿಸಲಾಗುತ್ತೆ. ಅಲ್ಲಿ 164 ರ ಅಡಿ ಬಾಲಕಿಯರ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತೆ. ಜಿಲ್ಲಾಸ್ಪತ್ರೆಗೆ ಎಸ್‌ಪಿ ಕೆ.ಪರಶುರಾಮ್‌, ASP ಕುಮಾರಸ್ವಾಮಿ ಭೇಟಿ ನೀಡಿ ಪ್ರಕರಣದ ತನಿಖಾಧಿಕಾರಿ ಅನಿಲ್‌ಕುಮಾರ್‌ರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ಮೈಸೂರಿನ ನಜರಬಾದ್‌ ಠಾಣೆಯಲ್ಲಿ ಶ್ರೀಗಳ ವಿರುದ್ಧ ನೀಡಿದ್ದ ಹೇಳಿಕೆಯನ್ನೇ ಇಲ್ಲೂ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಅದೇ ರೀತಿ ಮ್ಯಾಜಿಸ್ಟ್ರೇಟ್‌ ಮುಂದೆಯೇ ಶ್ರೀಗಳ ವಿರುದ್ಧ ಆರೋಪ ಮಾಡಿದ್ರೆ ಮರುಘಾಶ್ರೀಗಳಿಗೆ ಸಂಕಷ್ಟ ಎದುರಾಗಲಿದೆ.

ಮುರುಘಾಮಠಕ್ಕೆ ವಿವಿಧ ಮಠಾಧೀಶರ ಆಗಮನ

ಅತ್ತ ಬಾಲಕಿಯರ ವಿಚಾರಣೆ ನಡೆದಿದ್ರೆ, ಇತ್ತ ಮಠದಲ್ಲೇ ಇರೋ ಮುರುಘಾಶ್ರೀಗಳು, ಇವತ್ತು ಬೆಳಗ್ಗೆ ಎಂದಿನಂತೆ ಕತೃ ಗದ್ದುಗೆ ದರ್ಶನ ಮಾಡಿದ್ರು. ಬಳಿಕ ಭಕ್ತರನ್ನ ಭೇಟಿಯಾದ್ರು. ಇಂದು ಕೂಡಾ ವಿವಿಧ ಮಠಾಧೀಶರು, ರಾಜಕೀಯ ನಾಯಕರು ಶ್ರೀಗಳನ್ನ ಭೇಟಿಯಾಗಿ ಧೈರ್ಯ ತುಂಬಿದ್ರು.

ಮುರುಘಾ ಮಠಕ್ಕೆ ಆಗಮಿಸಿದ ಸಾಲುಮರದ ತಿಮ್ಮಕ್ಕ

ದತ್ತು ಪುತ್ರ ಉಮೇಶ್ ಜೊತೆ ಸಾಲುಮರದ ತಿಮ್ಕಕ್ಕ ಶಿವಮೂರ್ತಿ ಮುರುಘಾ ಶರಣರ ಭೇಟಿಗೆ ಆಗಮಿಸಿದ್ದಾರೆ.

ಸ್ವಾಮೀಜಿ- ಬಸವರಾಜನ್‌ ನಡುವೆ ರಹಸ್ಯ ಸಂಧಾನ?

ಈ ಕೇಸ್‌ನಲ್ಲಿ ಒಂದ್ಕಡೆ ಕಾನೂನು ಹೋರಾಟ ನಡೆಯುತ್ತಿದ್ರೆ ಇನ್ನೊಂದ್ಕಡೆ ಸಂಧಾನದ ಸರ್ಕಸ್‌ ಕೂಡಾ ಆಗ್ತಿದೆ. ಅದ್ರಲ್ಲೂ ಮಠದ ಆಡಳಿತಾಧಿಕಾರಿ ಬಸವರಾಜನ್‌ ಈ ಪಿತೂರಿಯ ಸೂತ್ರದಾರ ಅಂತಾ ಸ್ವಾಮೀಜಿ ಪರ ವಕೀಲರು ಆರೋಪಿಸುತ್ತಿದ್ದಾರೆ. ಇದ್ರ ನಡುವೆ ಚಿತ್ರದುರ್ಗ ಬಳಿಯ ಗ್ರಾಮವೊಂದರಲ್ಲಿ ಸ್ವತಃ ಮರುಘಾಶ್ರೀ ಹಾಗೂ ಎಸ್.ಕೆ ಬಸವರಾಜನ್‌ ಇವತ್ತು ಬೆಳಗಿನ ಜಾವ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದ್ದು, ಸಂಧಾನ ಸಕ್ಸಸ್‌ ಆಗಿದೆ ಅಂತಾ ಕೆಲವರು ಹೇಳಿದ್ರೆ, ಸಂಧಾನ ವಿಫಲವಾಗಿದೆ ಅಂತಾ ಮತ್ತೆ ಕೆಲವರು ಹೇಳ್ತಿದ್ದಾರೆ.

Published On - 7:20 pm, Sun, 28 August 22