ಮುರುಘಾ ಶರಣರ ವಿರುದ್ಧ ಷಡ್ಯಂತ್ರ ನಡೀತಿದೆ: ಮುರುಘಾ ಶರಣರ ಆಪ್ತ ಕೆಸಿ ವೀರೇಂದ್ರ

| Updated By: ವಿವೇಕ ಬಿರಾದಾರ

Updated on: Aug 31, 2022 | 2:43 PM

ಶ್ರೀಗಳು ನಿತ್ಯ ಹೇಗಿರ್ತಾರೋ ಅದೇ ರೀತಿ ಚಟುವಟಿಕೆಯಲ್ಲಿದಾರೆ ಎಂದು ಮುರುಘಾ ಶರಣರ ಆಪ್ತ ಕೆಸಿ ವೀರೇಂದ್ರ ಮುರುಘಾ ಶರಣರನ್ನು ಭೇಟಿಯಾದ ಬಳಿಕ ಹೇಳಿದ್ದಾರೆ.

ಮುರುಘಾ ಶರಣರ ವಿರುದ್ಧ ಷಡ್ಯಂತ್ರ ನಡೀತಿದೆ: ಮುರುಘಾ ಶರಣರ ಆಪ್ತ ಕೆಸಿ ವೀರೇಂದ್ರ
ಚಿತ್ರದುರ್ಗದ ಡಾ ಶಿವಮೂರ್ತಿ ಮುರುಘಾ ಶರಣರು
Follow us on

ಚಿತ್ರದುರ್ಗ: ಶ್ರೀಗಳು ನಿತ್ಯ ಹೇಗಿರ್ತಾರೋ ಅದೇ ರೀತಿ ಚಟುವಟಿಕೆಯಲ್ಲಿದಾರೆ ಎಂದು ಮುರುಘಾ ಶರಣರ ಆಪ್ತ ಕೆಸಿ ವೀರೇಂದ್ರ ಮುರುಘಾ ಶರಣರನ್ನು ಭೇಟಿಯಾದ ಬಳಿಕ ಹೇಳಿದ್ದಾರೆ. ಪೊಲೀಸರ ಫಾರ್ಮಾಲಿಟೀಸ್ ಹೇಗಿದಿಯೋ ಹಾಗೇ ತನಿಖೆ ನಡೆಯುತ್ತದೆ. ಅದರಲ್ಲಿ ನಾವು ಯಾರೂ ಭಾಗವಹಿಸುತ್ತಿಲ್ಲ. ನಿಜವಾಗಲೂ ತಪ್ಪು ನಡೆದಿದ್ದರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂಬುದು ನನ್ನ ಆಗ್ರಹ ಎಂದು ಆಗ್ರಹಿಸದರು.

ಮಕ್ಕಳು ಸಹ ನಮ್ಮ ವಿದ್ಯಾಪೀಠದ ಮಕ್ಕಳು. ಮಕ್ಕಳ ಬಗ್ಗೆ ತಪ್ಪಾಗಿದ್ದಲ್ಲಿ ನಿಜವಾಗಿಯೂ ಅದಕ್ಕೆ ಶಿಕ್ಷೆಯಾಗಬೇಕು. ಶಿಕ್ಷೆಯಾಗೇ ಆಗುತ್ತೆ, ನಮ್ಮ ದೇಶದ ಕಾನೂನು ಅಷ್ಟು ಸ್ಟ್ರಾಂಗ್ ಆಗಿದೆ‌. ಷಡ್ಯಂತ್ರ ನಡೀತಿದೆ ಅಂತ ನನ್ನ ಗಮನಕ್ಕೆ ಇತ್ತೀಚೆಗೆ ಬಂದಿದೆ. ಬೇರೆಯವರ ಗಮನಕ್ಕೆ ಅದು ನಿರಂತರವಾಗಿತ್ತು ಎಂದು ಹೇಳಿದರು.

ವೈಚಾರಿಕ ಬೆಳವಣಿಗೆ ಸಹಿಸದೇ ಮುರುಘಾ ಶರಣರ ವಿರುದ್ಧ ಷಡ್ಯಂತ್ರ: ಶರಣರು ಆರೋಪ ಮುಕ್ತರಾಗಿ ಹೊರಬರುತ್ತಾರೆ -ರಾಮನಗರದ ಮುಮ್ಮಡಿ ಶಿವರುದ್ರಸ್ವಾಮಿ

ಚಿತ್ರದುರ್ಗ: ಜಿಲ್ಲೆಯ ಮುರುಘರಾಜೇಂದ್ರ ಬೃಹನ್ಮಠ (ಮುರುಘಾಮಠ) ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಮತ್ತೊಂದೆಡೆ ಇಂದು ಸಂತ್ರಸ್ತರು ನ್ಯಾಯಾಲಯದಲ್ಲಿ ಸೆಕ್ಷನ್ 164ರ ಅಡಿ ಹೇಳಿಕೆ ದಾಖಲಿಸಲಿದ್ದಾರೆ. ಇದರ ನಡುವೆ ಚಿತ್ರದುರ್ಗದ ಮುರುಘಾಮಠದಲ್ಲಿ ಸ್ವಾಮೀಜಿಗಳು ಸುದ್ದಿಗೋಷ್ಠಿ ನಡೆಸಿದ್ದಾರೆ. ಶಾಂತವೀರಶ್ರೀ, ಮಾದಾರ ಚನ್ನಯ್ಯಶ್ರೀ, ಮಾಚಿದೇವಶ್ರೀ ಸೇರಿ 20ಕ್ಕೂಹೆಚ್ಚು ಮಠಾಧೀಶರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ.

ಮುರುಘಾಶ್ರೀ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ವಿಚಾರಕ್ಕೆ ಸಂಬಂಧಿಸಿ ಸುದ್ದಿಗೋಷ್ಠಿ ನಡೆಸಿರುವ ಸ್ವಾಮೀಜಿಗಳು, ಮುರುಘಾ ಶರಣರ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಮುರುಘಾ ಶರಣರು ಆರೋಪ ಮುಕ್ತರಾಗಿ ಹೊರಬರಲಿದ್ದಾರೆ ಎಂದು ರಾಮನಗರ ಜಿಲ್ಲೆ ಮರಳಗವಿ ಮಠದ ಮುಮ್ಮಡಿ ಶಿವರುದ್ರಸ್ವಾಮಿ ತಿಳಿಸಿದ್ದಾರೆ.

ವೈಚಾರಿಕ ಬೆಳವಣಿಗೆ ಸಹಿಸದೇ ಸ್ವಾಮೀಜಿ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳಿಂದ ಶ್ರೀಮಠಕ್ಕೆ ಕಪ್ಪು ಮಸಿ ಬಳಿಯುವ ಯತ್ನ ನಡೆದಿದೆ. ವೈಚಾರಿಕ ಕ್ರಾಂತಿಯಿಂದ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ. ಇದನ್ನು ಸಹಿಸದ ಕೆಲವು ಶಕ್ತಿಗಳಿಂದ ಷಡ್ಯಂತ್ರ ನಡೆಯುತ್ತಿದೆ ಎಂದರು.

ಶ್ರೀಗಳಿಗೆ ಕಪ್ಪು ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಮುರುಘಾ ಶ್ರೀಗಳು ತಪ್ಪು ಮಾಡಿಲ್ಲ, ಅವರು ನಿರಪರಾಧಿ. ಶಿವಮೂರ್ತಿ ಮುರಘಾ ಶರಣರು ಆರೋಪಮುಕ್ತರಾಗುತ್ತಾರೆ. ಮುರುಘಾ ಶ್ರೀಗಳು ವೈಚಾರಿಕ ಕ್ರಾಂತಿಯಿಂದ ಕೂಡಿದವರು. ಸ್ವಾಮೀಜಿಗೆ ಎಲ್ಲ ಮಠಾಧೀಶರು ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಸತ್ಯವೇ ಜಯವಾಗುತ್ತೆ, ಶ್ರೀಗಳು ಆರೋಪ ಮುಕ್ತರಾಗುತ್ತಾರೆ. ಮಠದ ಅಭಿವೃದ್ಧಿಗೆ ಶಿವಮೂರ್ತಿ ಮುರುಘಾ ಶರಣರು ಶ್ರಮಿಸ್ತಾರೆ. ಶ್ರೀಗಳ ಹೋರಾಟಕ್ಕೆ ನಮ್ಮ ಬೆಂಬಲ, ಸಹಕಾರ ಇರುತ್ತದೆ. ಮಕ್ಕಳು ದೇವರ ಸಮಾನ, ಮಕ್ಕಳ ಬಗ್ಗೆ ನಮಗೆ ಗೌರವವಿದೆ. ಪ್ರಕರಣದ ತನಿಖೆಯ ನಂತರ ಸತ್ಯಾಂಶ ಬಯಲಾಗುತ್ತದೆ. ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಏನೂ ಹೇಳಲಾಗಲ್ಲ. ದಯವಿಟ್ಟು ಎಲ್ಲರೂ ಕ್ಷಮಿಸಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:43 pm, Wed, 31 August 22