AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್​ ಸಮೇತ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಮಳೆಯಿಂದ ಅಪಾರ ನಷ್ಟ ಆಗಿದೆ ಎಂದು ಚನ್ನಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು. ಸರ್ಕಾರ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು.

ಬೈಕ್​ ಸಮೇತ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ಹಳ್ಳ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 30, 2022 | 5:22 PM

Share

ಚಿತ್ರದುರ್ಗ: ಬೈಕ್ ಸಮೇತ ಹಳ್ಳದಲ್ಲಿ ಯುವಕ ಕೊಚ್ಚಿಕೊಂಡು ಹೋಗಿರುವಂತಹ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಬಳಿ ನಡೆದಿದೆ. ಆಂಧ್ರ ಮೂಲದ ಸಣ್ಣಪ್ಪ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಯುವಕ. ಹೊಸಕೆರೆ ಕೆರೆಹಳ್ಳ ದಾಟುವ ವೇಳೆ ಘಟನೆ ನಡೆದಿದ್ದು, ಅದೃಷ್ಟವಶಾತ್ ಯುವಕ ಸಣ್ಣಪ್ಪ ಹರಿದುಕೊಂಡು ಹಳ್ಳದ ದಂಡೆಗೆ ಬಂದು ಬಚಾವ್ ಆಗಿದ್ದಾನೆ. ಕೊಚ್ಚಿಕೊಂಡು ಹೋಗುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅದೇ ರೀತಿಯಾಗಿ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೊರ್ಲಕುಂಟೆ ಬಳಿ ಹಳ್ಳ ದಾಟಲು ಹೋಗಿ ವ್ಯಕ್ತಿ ಓರ್ವ ಗುಂಡಿಗೆ ಬಿದ್ದಿರುವಂತಹ ಘಟನೆ ನಡೆದಿದೆ. ಅದೃಷ್ಟವಶಾತ್ ಹನುಮಂತ ಬಚಾವ್ ಆಗಿದ್ದಾನೆ. ಬೈಕಿನಲ್ಲಿ ಹಳ್ಳ ದಾಟುವ ವೇಳೆ ದುರ್ಘಟನೆ ನಡೆದಿದೆ. ನೀರಿನ ರಭಸಕ್ಕೆ ಬೈಕ್ ಸಮೇತ ವ್ಯಕ್ತಿ ಗುಂಡಿಗೆ ಬಿದಿದ್ದಾನೆ. ಹರಿದುಕೊಂಡು ಹಳ್ಳದ ದಂಡೆಗೆ ಬಂದು ಬಚಾವ್ ಆಗಿದ್ದಾನೆ. ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಮನಗರ ಜಿಲ್ಲೆಯಲ್ಲಿ ಮಳೆಯಿಂದ ಅಪಾರ ನಷ್ಟವಾಗಿದೆ: ಅಧ್ಯಕ್ಷ ಡಿ.ಕೆ.ಶಿವಕುಮಾರ್

ರಾಮನಗರ: ಜಿಲ್ಲೆಯಲ್ಲಿ ಮಳೆಯಿಂದ ಅಪಾರ ನಷ್ಟ ಆಗಿದೆ ಎಂದು ಚನ್ನಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು. ಸರ್ಕಾರ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಉತ್ತರ ಕರ್ನಾಟಕದ ಮಾದರಿಯಲ್ಲೇ ಪರಿಹಾರ ನೀಡಬೇಕು. ರಾಮನಗರ ಜಿಲ್ಲೆಗೂ ಅದೇ ರೀತಿ ಪರಿಹಾರ ನೀಡಬೇಕು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿದೆ. ಸೂಕ್ತವಾದ ಯೋಜನೆ ಮಾಡದೇ ಹೆದ್ದಾರಿ ನಿರ್ಮಿಸಲಾಗಿದೆ. ಅವೈಜ್ಞಾನಿಕ ಪ್ಲ್ಯಾನ್​ ನೀಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

ಧಾರಾಕರ ಮಳೆಗೆ ಜಿಲ್ಲೆಯ ರೈತರು ತತ್ತರ: 

ಚಿಕ್ಕಬಳ್ಳಾಪುರ: ನಿನ್ನೆ ತಡರಾತ್ರಿ ಸುರಿದ ಧಾರಾಕರ ಮಳೆಗೆ ಚಿಕ್ಕಬಳ್ಲಾಪುರ ಜಿಲ್ಲೆಯ ರೈತರು ತತ್ತರಿಸಿದ್ದಾರೆ. ಹಗಲು ರಾತ್ರಿ ಕಷ್ಟ ಪಟ್ಟು ಬೆಳೆದ ಸೇವಂತಿ ತೋಟ ಸಂಫೂರ್ಣ ಜಲಾವೃತವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಚೊಕ್ಕಹಳ್ಳಿಯ ರೈತ ಮುನಿರಾಜು ಎರಡು ಲಕ್ಷ ಬಂಡವಾಳ ಹಾಕಿ ಬೆಳೆದ ಸೇವಂತಿ ನೀರು ಪಾಲಾಗಿದೆ.

ಸಿಂಗಯ್ಯನಕೆರೆ ಕೋಡಿ ಒಡೆದು ಹೊರ ಬರ್ತಿರುವ ಮೀನು

ಬೆಂಗಳೂರು: ಸಿಂಗಯ್ಯನಕೆರೆ ಕೋಡಿ ಒಡೆದು ಮೀನುಗಳು  ಹೊರ ಬರ್ತಿರುವಂತಹ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ನೆಲಗುಳಿ ಗೇಟ್ ಬಳಿ ಕಂಡುಬಂದಿದೆ. ಕೆರೆಯಲ್ಲಿ ಬರ್ತಿರುವ ಮೀನು ಹಿಡಿದು ಸ್ಥಳೀಯರು ಮಾರಾಟ ಮಾಡುತ್ತಿದ್ದಾರೆ. ಕನಕಪುರ ಮುಖ್ಯರಸ್ತೆಯಲ್ಲಿ ಹೋಗ್ತಿರೊ ಜನರಿಂದ ಮೀನು ಖರೀದಿ ಮಾಡಲಾಗುತ್ತಿದೆ. ರಗು ಮೀನು, ಕ್ಯಾಟ್ಲಾಕ್ ಸೇರಿದಂತೆ ಹಲವು ಮೀನು ಹಿಡಿದು ಮಾರಾಟ ಮಾಡಲಾಗುತ್ತಿದೆ.

ಮಳೆ ನೀರು ತಂದ ಅವಾಂತರ:

ಮೈಸೂರು: ಟಿ ನರಸೀಪುರ ತಾಲ್ಲೂಕಿನಲ್ಲಿ ಮಳೆ ಮುಂದುವರೆದಿದ್ದು, ಪಟ್ಟಣದ ಮಿನಿ ವಿಧಾನಸೌದದ ನೆಲ ಮಹಡಿಗೆ ಮಳೆ ನೀರು ನುಗ್ಗಿದೆ. ಕಡತಗಳ ಕೊಠಡಿಯಲ್ಲಿ ಮಳೆ ನೀರು ನುಗ್ಗಿದ್ದು, ಕಡತಗಳನ್ನ ತಾಲ್ಲೂಕು ಕಚೇರಿ ಸಿಬ್ಬಂದಿ ಸ್ಥಳಂತರಿಸಿದರು.

ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ, ಎಸಿ ಭೇಟಿ

ಗದಗ: ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ ಎನ್, ಎಸಿ ಅನ್ನಪೂರ್ಣ ಭೇಟಿ ನೀಡಿ ಪರಿಶೀಲಿಸಿದರು. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆ ಸೇರಿದಂತೆ ಹಲವು ಕಡೆ ಭೇಟಿ ನೀಡಿದ್ದು, ಶೆಟ್ಟಿಕೆರೆ ಭರ್ತಿಯಾಗಿ, ಕೊಡಿ ಬಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಪರಿಹಾರ ಭರವಸೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.