ತೆಪ್ಪದಲ್ಲಿ ತೆರಳುವಾಗ ದಿಕ್ಕು ತಪ್ಪಿ ಪರದಾಡುತ್ತಿದ್ದ ಮೂವರ ರಕ್ಷಣೆ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಗ್ರಾಮೀಣ ಭಾಗದಲ್ಲಿ ಬೆಂಜರಿ ಎಂದು ಕರೆಯಲ್ಪಡುವ ರಸೆಲ್ಸ್ ವೈಪರ್ ಹಾವು ಕಂಡುಬಂದಿದ್ದು, ಹಾವು ಮತ್ತು ಮರಿಗಳನ್ನು ಸ್ಥಳೀಯರು ಕೊಂದು ಹಾಕಿದ್ದಾರೆ.

ತೆಪ್ಪದಲ್ಲಿ ತೆರಳುವಾಗ ದಿಕ್ಕು ತಪ್ಪಿ ಪರದಾಡುತ್ತಿದ್ದ ಮೂವರ ರಕ್ಷಣೆ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ರಕ್ಷಣೆ ಮಾಡಲಾದ ಮೂವರು ಯುವಕರು
Edited By:

Updated on: May 23, 2022 | 8:12 AM

ಚಿತ್ರದುರ್ಗ: ತೆಪ್ಪದಲ್ಲಿ ತೆರಳಿ ದಿಕ್ಕು ತಪ್ಪಿದ್ದ ಮೂವರು ಯುವಕರ ರಕ್ಷಣೆ ಮಾಡಿರುವಂತಹ ಘಟನೆ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಡ್ಯಾಂ ಹಿನ್ನೀರಿನಲ್ಲಿ ನಡೆದಿದೆ. ಹಿರಿಯೂರಿನ ಸಂಪತ್, ಧನುಷ್, ಯೋಗೀಶ್ ಎಂಬುವವರನ್ನು ಕ್ರೀಡಾ ಇಲಾಖೆ ಸಿಬ್ಬಂದಿಯಿಂದ ರಕ್ಷಣೆ ಮಾಡಲಾಗಿದೆ. ನಿನ್ನೆ ಸಂಜೆ ವೇಳೆ ತೆಪ್ಪದಲ್ಲಿ ತೆರಳಿದ್ದ ಯುವಕರು, ಕ್ರೀಡಾ ಇಲಾಖೆಯಿಂದ ಜಲಕ್ರೀಡೆಗೆ ಬಳಸುವ ತೆಪ್ಪದಲಿ ತೆರಳಿದ್ದರು. ಕತ್ತಲು ಆವರಿಸಿದರೂ ಯುವಕರು ಮರಳಿ ಬಂದಿಲ್ಲ. ನಿನ್ನೆ ಸಂಜೆ ಏಳು ಗಂಟೆ ಬಳಿಕ ಮೂವರು ಯುವಕರ ರಕ್ಷಣೆ ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ದಿಶಾ ಪಟಾನಿಯ ತಂಟೆಗೆ ಬಂದವರ ಮೈ ಮೂಳೆ ಮುರಿಯೋದು ಗ್ಯಾರಂಟಿ; ಈ​ ವಿಡಿಯೋ ನೋಡಿ

ಜಮೀನಿನಲ್ಲಿ ಬೆಂಜರಿ ಎಂದು ಕರೆಯಲ್ಪಡುವ ರಸೆಲ್ಸ್ ವೈಪರ್ ಪತ್ತೆ:

ಹಂಪನೂರು ಬಳಿಯ ಜಮೀನಿನಲ್ಲಿ ಹಾವು ಮತ್ತು 50 ಮರಿಗಳು ಪತ್ತೆಯಾಗಿರುವಂತಹ ಘಟನೆ ನಡೆದಿದೆ. ತಾಲೂಕಿನ ಹಂಪನೂರು ಗ್ರಾಮದ ಬಳಿಯ ಜಮೀನಲ್ಲಿ ಘಟನೆ ಕಂಡುಬಂದಿದ್ದು, ಹಂಪನೂರಿನ ಜ್ಯೋತಿ ಪ್ರಕಾಶ್, ಮಹಾದೇವ ಎಂಬುವರ ಜಮೀನಿನಲ್ಲಿ ಪತ್ತೆಯಾಗಿವೆ. ಗ್ರಾಮೀಣ ಭಾಗದಲ್ಲಿ ಬೆಂಜರಿ ಎಂದು ಕರೆಯಲ್ಪಡುವ ರಸೆಲ್ಸ್ ವೈಪರ್ ಹಾವು ಕಂಡುಬಂದಿದ್ದು, ಹಾವು ಮತ್ತು ಮರಿಗಳನ್ನು ಸ್ಥಳೀಯರು ಕೊಂದು ಹಾಕಿದ್ದಾರೆ. ಜಮೀನು ಮತ್ತು ಗ್ರಾಮದಲ್ಲಿ ಹಾವು ಹರಡುವ ಭೀತಿಯಿಂದ ಸ್ಥಳೀಯರು ಕೊಂದು ಹಾಕಲಾಗಿದೆ ಎನ್ನಲಾಗುತ್ತಿದೆ. ಹಾವು, ಮರಿಗಳ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:11 am, Mon, 23 May 22