ಬೆಂಗಳೂರು: ಕೊರೊನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ಸರ್ಕಾರ ಸಂಡೇ ಲಾಕ್ಡೌನ್ ಘೋಷಿಸಿದೆ. ಆದ್ರೆ ರಾಜ್ಯದ ಹಲವು ಕಡೆ ಆದೇಶದ ಉಲ್ಲಂಘನೆಯಾಗಿದೆ. ಇದಕ್ಕೆ ಕ್ಯಾರೇ ಎನ್ನದ ಮಂದಿ ಎಂದಿನಂತೆ ವಾಕಿಂಗ್ ಮಾಡ್ತಿದ್ದಾರೆ.
ಬೆಂಗಳೂರಿನಲ್ಲಿ ಸಂಡೇ ಲಾಕ್ಡೌನ್ಗೆ ಕ್ಯಾರೇ ಎನ್ನದ ಸಿಟಿ ಮಂದಿ ರಸ್ತೆಗಳಲ್ಲೇ ವಾಕಿಂಗ್ ಮಾಡುತ್ತಿದ್ದಾರೆ. ಲಾಲ್ ಬಾಗ್ ಕ್ಲೋಸ್ ಆಗಿದೆ. ಆದ್ರೂ ಕೂಡ ಲಾಲ್ ಬಾಗ್ ಬಳಿ ರಸ್ತೆಗಳಲ್ಲಿ ಜನರ ವಾಕಿಂಗ್ ಮಾಡ್ತಿದ್ದಾರೆ. ಮನೆಯಿಂದ ಹೊರಗೆ ಬರದಂತೆ ಕಟ್ಟುನಿಟ್ಟಾಗಿ ಸೂಚನೆ ಇಡೂದ್ರೂ ವಾಕಿಂಗ್ ನೆಪದಲ್ಲಿ ಸಾರ್ವಜನಿಕರು ಹೊರಗೆ ಬರುತ್ತಿರುದ್ದಾರೆ.
ಕಲಬುರಗಿಯಲ್ಲಿ ಸಂಡೇ ಲಾಕ್ಡೌನ್ ಇದ್ದರೂ ಆಟೋ ಸಂಚಾರ ಎಂದಿನಂತಿದೆ. ಲಾಕ್ ಡೌನ್ ಉಲ್ಲಂಘಿಸಿ ಆಟೋಗಳು ಓಡಾಡುತ್ತಿವೆ. ಜೊತೆಗೆ ಕೊರೊನಾ ಅಟ್ಟಹಾಸ ಹೆಚ್ಚಿದ್ದರು ಇಲ್ಲಿನ ಜನ ರಸ್ತೆಗಿಳಿದಿದ್ದಾರೆ.
ಮೈದಾನದಲ್ಲಿ ಯುವಕರ ಕ್ರಿಕೆಟ್
ಕೊಪ್ಪಳದಲ್ಲಿ ಭಾನುವಾರ ಲಾಕ್ಡೌನ್ ಉಲ್ಲಂಘಿಸಿ ಕೆಲ ಯುವಕರು ಗವಿಮಠದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ. ಜತೆಗೆ ಗುಂಪು ಗುಂಪಾಗಿ ಜನರು ವಾಕಿಂಗ್ ಮಾಡುತ್ತಿದ್ದಾರೆ. ಮೈದಾನದಲ್ಲೇ ವ್ಯಾಯಾಮ ಮಾಡುತ್ತಿದ್ದಾರೆ.
ಗದಗದಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡು ಬಂದಿದೆ. ಎಂದಿನಂತೆ ಸಾರ್ವಜನಿಕರು ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಯೋಗ, ವಾಯುವಿಹಾರ, ವಾಕಿಂಗ್ ಮಾಡಲು ಬಂದಿದ್ದಾರೆ. ದೈಹಿಕ ಅಂತರ ಮರೆತು ಗುಂಪು ಗುಂಪಾಗಿ ಓಡಾಡುತ್ತಿದ್ದಾರೆ.
ಅಖಾಡಕ್ಕಿಳಿದ ಪೊಲೀಸರು
ಇನ್ನು ಗದಗದಲ್ಲಿ ಸಂಡೇ ಲಾಕ್ಡೌನ್ ರೂಲ್ಸ್ ಬ್ರೇಕ್ ಹಾಕುತ್ತಿರುವ ಜನರಿಗೆ ಪಾಠ ಕಲಿಸಲು ಬೆಳ್ಳಂಬೆಳಗ್ಗೆ ಪೊಲೀಸರು ಅಖಾಡಕ್ಕಿಳಿದಿದ್ದಾರೆ. ನಿಯಮ ಉಲ್ಲಂಘಿಸೋರಿಗೆ ಎಚ್ಚರಿಕೆ ನೀಡಿ ಕಳಿಸುತ್ತಿದ್ದಾರೆ. ಬೇಕಾಬಿಟ್ಟಿ ಓಡಾಡುತ್ತಿರುವ ಜನರಿಗೆ ಖಾಕಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರ ಹದ್ದಿನ ಕಣ್ಣಿಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘನೆಯಾಗಿದೆ. ನಗರದ ಲಕ್ಷ್ಮೀ ಚಿತ್ರಮಂದಿರ ಬಳಿ ತರಕಾರಿ, ಹಾಲು, ಹೂ ಹಣ್ಣು, ದಿನಸಿ ಖರೀದಿಯಲ್ಲಿ ಜನ ಬ್ಯುಸಿಯಾಗಿದ್ದಾರೆ. ಅನಗತ್ಯವಾಗಿ ಓಡಾಡುತ್ತಿದ್ದಾರೆ. ಲಾಕ್ಡೌನ್ ಇದ್ರೂ ಖರೀದಿಗೆ ಮುಗಿ ಬಿದ್ದಿದ್ದಾರೆ.
ಮಹಾಮಾರಿ ಹರಡದಂತೆ ತಡೆಯಲು ವಿಧಿಸಿರುವ ಲಾಕ್ಡೌನ್ಗೆ ಮೈಸೂರಿನಲ್ಲಿ ಜನ ಕ್ಯಾರೆ ಎನ್ನುತ್ತಿಲ್ಲ. ಬೆಳಗ್ಗೆ ವಾಕಿಂಗ್ ಜಾಗಿಂಗ್ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಗೇಟಿಗೆ ಬೀಗ ಹಾಕಿದರು ಒಳಗೆ ಹೋಗಿ ವ್ಯಾಯಾಮ ಮಾಡುತ್ತಿದ್ದಾರೆ. ಓವಲ್ ಮೈದಾನಕ್ಕೆ ಬೀಗ ಹಾಕಿದ್ರೂ ಗುಂಪು ಗುಂಪಾಗಿ ಕ್ರಿಕೆಟ್, ವ್ಯಾಯಾಮದಲ್ಲಿ ಜನ ತೊಡಗಿಕೊಂಡಿರುವ ದೃಶ್ಯ ಕಂಡು ಬಂದಿದೆ.
ಮಂಡ್ಯd ಕಾವೇರಿ ವನದ ರಸ್ತೆ, ಸರ್ಕಾರಿ ಮಹಾವಿದ್ಯಾಲಯದ ಗ್ರೌಂಡ್ ಸೇರಿದಂತೆ ಪಾರ್ಕ್ ಗಳಿಗೆ ಜನ ವಾಕಿಂಗ್ ನೆಪ ಮಾಡಿ ರಸ್ತೆಗಿಳಿದಿದ್ದಾರೆ. ಇನ್ನು ಮಂಡ್ಯ ಮಾರುಕಟ್ಟೆಯಲ್ಲಿ ಜನ ತರಕಾರಿ ಖರೀದಿಗೆ ಮುಗಿಬಿದ್ದಿದ್ದಾರೆ.