ಕರುನಾಡಲ್ಲಿ ಸಂಡೇ ಲಾಕ್‌ಡೌನ್.. ಸ್ಟ್ರಿಕ್ಟ್ ರೂಲ್ಸ್ ಜಾರಿ!
ಬೆಂಗಳೂರು: ಸಂಚಾರ ಸ್ತಬ್ಧ.. ಅಂಗಡಿ, ಮುಂಗಟ್ಟುಗಳಿಗೆ ಬೀಗ. ವ್ಯಾಪಾರಕ್ಕೂ ನಿರ್ಬಂಧ. ಮಾಲ್, ರೆಸ್ಟೋರೆಂಟ್ಗಳಿಗೂ ನಿಷೇಧ. ದೇಗುಲ, ಚರ್ಚ್, ಮಸೀದಿಗಳ ಬಾಗಿಲು ತೆರೆಯಲ್ಲ. ಕರ್ಫ್ಯೂ ಕಟ್ಟಾಜ್ಞೆ ಮತ್ತು ಲಾಕ್‌ಡೌನ್ ಅಸ್ತ್ರದಿಂದ ಕರುನಾಡು 33 ಗಂಟೆಗಳ ಕಾಲ ಸ್ತಬ್ಧ ಆಗ್ತಿದೆ. ಹುಬ್ಬಳ್ಳಿ, ಬೆಳಗಾವಿ, ಮಂಡ್ಯ, ಮೈಸೂರು, ಮಂಗಳೂರು, ತುಮಕೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಕರ್ಫ್ಯೂ ಜಾರಿಯಾಗಿದೆ. ಕೆಲವೊಂದು ಜಿಲ್ಲೆಗಳಲ್ಲಿ ನಿನ್ನೆ ಸಂಜೆ 6 ರಿಂದ್ಲೇ ಲಾಕ್‌ಡೌನ್ ಶುರುವಾಗಿದೆ. ಈ ಮೂಲಕ 33 ಗಂಟೆ ಕರುನಾಡು ಕಂಪ್ಲೀಟ್ ಬಂದ್ ಆಗ್ತಿದೆ. ನಾಳೆ […]
ಬೆಂಗಳೂರು: ಸಂಚಾರ ಸ್ತಬ್ಧ.. ಅಂಗಡಿ, ಮುಂಗಟ್ಟುಗಳಿಗೆ ಬೀಗ. ವ್ಯಾಪಾರಕ್ಕೂ ನಿರ್ಬಂಧ. ಮಾಲ್, ರೆಸ್ಟೋರೆಂಟ್ಗಳಿಗೂ ನಿಷೇಧ. ದೇಗುಲ, ಚರ್ಚ್, ಮಸೀದಿಗಳ ಬಾಗಿಲು ತೆರೆಯಲ್ಲ. ಕರ್ಫ್ಯೂ ಕಟ್ಟಾಜ್ಞೆ ಮತ್ತು ಲಾಕ್‌ಡೌನ್ ಅಸ್ತ್ರದಿಂದ ಕರುನಾಡು 33 ಗಂಟೆಗಳ ಕಾಲ ಸ್ತಬ್ಧ ಆಗ್ತಿದೆ. ಹುಬ್ಬಳ್ಳಿ, ಬೆಳಗಾವಿ, ಮಂಡ್ಯ, ಮೈಸೂರು, ಮಂಗಳೂರು, ತುಮಕೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಕರ್ಫ್ಯೂ ಜಾರಿಯಾಗಿದೆ. ಕೆಲವೊಂದು ಜಿಲ್ಲೆಗಳಲ್ಲಿ ನಿನ್ನೆ ಸಂಜೆ 6 ರಿಂದ್ಲೇ ಲಾಕ್‌ಡೌನ್ ಶುರುವಾಗಿದೆ. ಈ ಮೂಲಕ 33 ಗಂಟೆ ಕರುನಾಡು ಕಂಪ್ಲೀಟ್ ಬಂದ್ ಆಗ್ತಿದೆ.
ನಾಳೆ ಬೆಳಗ್ಗೆ 5 ಗಂಟೆವರೆಗೂ ಕರ್ನಾಟಕ ಲಾಕ್! ಕೊರೊನಾ ಹೊಡೆತಕ್ಕೆ ಕರುನಾಡು ಅಕ್ಷರಶಃ ನಲುಗಿ ಹೋಗಿದೆ. ಕಳೆದೊಂದು ವಾರದಿಂದ ಸಾವಿರಕ್ಕೂ ಹೆಚ್ಚು ಕೇಸ್ಗಳು ಬರ್ತಿವೆ. ಹೀಗಾಗಿ ಸರ್ಕಾರ ಭಾನುವಾರದ ಲಾಕ್‌ಡೌನ್\ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ನಿನ್ನೆ ರಾತ್ರಿ 8 ಗಂಟೆಯಿಂದ ನಾಳೆ ಬೆಳಗ್ಗೆ 5 ಗಂಟೆವರೆಗೂ ಕರ್ನಾಟಕದಲ್ಲಿ ಲಾಕ್‌ಡೌನ್ ಇರಲಿದೆ. ಸಂಡೇ ಕರ್ಫ್ಯೂ ಬೇರೆ ಇರೋದ್ರಿಂದ 33 ಗಂಟೆ ರಾಜ್ಯ ಸ್ತಬ್ಧ ಆಗಲಿದೆ. ಹೀಗಾಗಿ 33 ಗಂಟೆಗಳ ಅವಧಿಯಲ್ಲಿ ಯಾವುದಕ್ಕೆಲ್ಲಾ ಅನುಮತಿ ಇರಲಿದೆ ಅನ್ನೋದನ್ನ ನೋಡೋದಾದ್ರೆ.
ರಾಜ್ಯದಲ್ಲಿ ಏನೇನ್ ಇರಲ್ಲ? ಇನ್ನು ಸಂಡೇ ಲಾಕ್ಡೌನ್ನಿಂದ ಸಂಚಾರ ಕಂಪ್ಲೀಟ್ ಬಂದ್ ಆಗ್ತಿದ್ದು, ಕೆಎಸ್ಆರ್ಟಿಸಿ, ಬಿಎಂಟಿಸಿ, ಆಟೋ, ಟ್ಯಾಕ್ಸಿ, ಕ್ಯಾಬ್, ಖಾಸಗಿ ಬಸ್ಗಳು ರಸ್ತೆಗಿಳಿಯಲ್ಲ. ಹಾಗೇ ಅಂಗಡಿಗಳು, ಬೀದಿ ಬದಿ ವ್ಯಾಪಾರ ಸ್ಥಗಿತವಾಗಲಿದೆ. ಲಾಡ್ಜ್, ಬಾರ್, ರೆಸ್ಟೋರೆಂಟ್ಗಳು ಸೇರಿದಂತೆ ಮದ್ಯದ ಅಂಗಡಿಗಳು ಸಂಪೂರ್ಣವಾಗಿ ಕ್ಲೋಸ್ ಆಗಿರಲಿವೆ. ಹಾಗೇ ಸಲೂನ್, ಬ್ಯೂಟಿ ಪಾರ್ಲರ್ ಕೂಡ ತೆರೆಯಲ್ಲ. ಇತ್ತ ದೇವಸ್ಥಾನ, ಮಸೀದಿ, ಚರ್ಚ್ಗಳು ಬಾಗಿಲು ಓಪನ್ ಇರಲ್ಲ. ಇದ್ರ ಜೊತೆಗೆ ಜಾತ್ರೆ, ಸಭೆ, ಸಮಾರಂಭಗಳನ್ನ ನಡೆಸದಂತೆ ನಿರ್ಬಂಧ ಹೇರಲಾಗಿದೆ.
ಹೀಗೆ ಬಹುತೇಕ ಚಟುವಟಿಕೆಗಳು ಇಂದು ಇರೋದಿಲ್ಲ. ಆದ್ರೆ ಕರ್ಫ್ಯೂ ಹಾಗೂ ಲಾಕ್ಡೌನ್ನಲ್ಲಿ ಕೆಲವೊಂದು ಅತ್ಯಗತ್ಯ ವಲಯಗಳಿಗೆ ಅನುಮತಿ ನೀಡಲಾಗಿದೆ. ಹಾಗಿದ್ರೆ ಇವತ್ತು ಯಾವ್ಯಾವ ವಲಯಗಳಿಗೆ ಅನುಮತಿ ಇದೆ ಅನ್ನೋದನ್ನ ನೋಡೋದಾದ್ರೆ.
ರಾಜ್ಯದಲ್ಲಿ ಏನೇನ್ ಇರುತ್ತೆ? ಇನ್ನು ಜನ್ರ ಅಗತ್ಯತೆಗಳಲ್ಲಿ ಒಂದಾದ ಆಸ್ಪತ್ರೆ, ಮೆಡಿಕಲ್ ಸ್ಟೋರ್, ಌಂಬುಲೆನ್ಸ್ ಸೇವೆಯಲ್ಲಿ ಯಾವುದೇ ರೀತಿ ವ್ಯತ್ಯಯ ಆಗೋದಿಲ್ಲ. ಹಾಗೇ ಹಾಲು, ಹಣ್ಣು, ತರಕಾರಿ, ಮಾಂಸ ಮಾರಾಟ ಎಂದಿನಂತೆ ಇರಲಿದೆ. ದಿನಸಿ ಅಂಗಡಿ, ಪ್ರಾವಿಜನ್ ಸ್ಟೋರ್ಸ್ ಓಪನ್ ಇರಲಿದ್ದು, ಪೆಟ್ರೋಲ್ ಬಂಕ್ ಸಹ ಕಾರ್ಯ ನಿರ್ವಹಿಸಲಿವೆ. ಇನ್ನು ಹೋಟೆಲ್ಗಳಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶ ಇರುತ್ತೆ. ಅಲ್ಲದೇ ಮದುವೆಗಳ ವಿಚಾರಕ್ಕೆ ಬಂದ್ರೆ ಈ ಮೊದಲೇ ಮದ್ವೆ ಫಿಕ್ಸ್ ಆಗಿದ್ರೆ ಕೇಂದ್ರದ ಮಾರ್ಗಸೂಚಿಯಂತೆ ಮದ್ವೆ ನಡೆಸಬಹುದು. ಇದರ ಜೊತೆಗೆ ವೈದ್ಯಕೀಯ ಸಿಬ್ಬಂದಿ ಹಾಗೂ ಮಾಧ್ಯಮದವರು ಸಂಡೇ ಕರ್ಫ್ಯೂ ವೇಳೆ ಸಂಚರಿಸಲು ಅನುಮತಿ ನೀಡಲಾಗಿದೆ.
ಒಟ್ನಲ್ಲಿ ಕೊರೊನಾ ದಿನ ದಿನಕ್ಕೂ ಸ್ಫೋಟವಾಗ್ತಿದ್ದು, ಸರ್ಕಾರ ಭಾನುವಾರದ ಲಾಕ್‌ಡೌನ್ ಅಸ್ತ್ರ ಹೂಡಿದೆ. ನಿನ್ನೆ ರಾತ್ರಿಯಿಂದಲೇ ಸಂಡೇ ಲಾಕ್‌ಡೌನ್ ಜಾರಿಯಾಗಿದೆ. ಸೋಮವಾರ ಬೆಳಗ್ಗೆ ಅಂದ್ರೆ ನಾಳೆ 5 ಗಂಟೆವರೆಗೂ ಯಾರೂ ಕೂಡ ಹೊರಗೆ ಹೆಜ್ಜೆ ಊರಂಗಿಲ್ಲ. ಬೇಕಾಬಿಟ್ಟಿ ಓಡಾಡುವಂತಿಲ್ಲ. ಸುಖಾಸುಮ್ಮನೆ ಹೊರಗೆ ಕಾಲಿಟ್ರೆ ಕೇಸ್ ಬೀಳೋದ್ರ ಜೊತೆ ಗಾಡಿಯೂ ಸೀಜ್ ಆಗಲಿದೆ. ಹೀಗಾಗಿ ಎಚ್ಚರಿಕೆಯಿಂದ ಇದ್ರೆ ಒಳ್ಳೆಯದು.