ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ 205 ಬೆಡ್‌ಗಳ ಕೊವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಿದ್ದಾರೆ. ಕೆಂಗೇರಿ ಬಳಿಯ ಬಿಜಿಎಸ್ ಗ್ಲೋಬಲ್ ಮೆಡಿಕಲ್ ಕಾಲೇಜಿನಲ್ಲಿ ಆಕ್ಸಿಜನ್, ವೆಂಟಿಲೇಟರ್ ಮತ್ತು ಸಾಮಾನ್ಯ ಬೆಡ್ಗಳಿರುವ 205 ಹಾಸಿಗೆಗಳ ಕೊವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಲಾಗಿದೆ.
ಮೈಸೂರಿನ ಹಸಿರು ಪ್ರತಿಷ್ಠಾನದಿಂದ ಬಿಜಿಎಸ್ ಮೆಡಿಕಲ್ ಕಾಲೇಜಿಗೆ 2 ಸಾವಿರ ಗಿಡಗಳನ್ನು ಹಸ್ತಾಂತರಿಸಲಾಗಿದೆ. ಮೆಡಿಕಲ್ ಕಾಲೇಜು ಆವರಣದಲ್ಲಿ ಸಿಎಂ ಯಡಿಯೂರಪ್ಪ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಗಿಡ ನೆಟ್ಟಿದ್ದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಈ ಶುಭ ಸಮಯದಲ್ಲಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿ @BSYBJP ರವರು ಇಂದು ಬಿ.ಜಿ.ಎಸ್ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಂಡ್ ಹಾಸ್ಪಿಟಲ್ ವತಿಯಿಂದ, ಕೆಂಗೇರಿಯಲ್ಲಿರುವ ಬಿ.ಜಿ.ಎಸ್ ಮೆಡಿಕಲ್ ಕಾಲೇಜ್ ನಲ್ಲಿ, 210 ಆಕ್ಸಿಜಿನೇಟೆಡ್ ಹಾಸಿಗೆೆಗಳು, 43 ICU ಹಾಸಿಗೆಗಳು, 30 HDU ಹಾಸಿಗೆಗಳು, 100 ಸಾಮಾನ್ಯ ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದರು. (1/2) pic.twitter.com/I8ymrBOt45
— CM of Karnataka (@CMofKarnataka) May 17, 2021
ಇನ್ನು ಇದೇ ವೇಳೆ ಕೆಂಗೇರಿಯಲ್ಲಿ ನಿರ್ಮಿಸಿರುವ ಟ್ರಯಾಜ್ ಸೆಂಟರನ್ನು ಸಿಎಂ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಕೆಂಗೇರಿ ಉಪನಗರದಲ್ಲಿರೋ ಅಂಬೇಡ್ಕರ್ ಸೆಂಟರ್ ಉದ್ಘಾಟನೆ ಮಾಡಲು ಬಂದಿದ್ದೇನೆ. 24 ಗಂಟೆ ವೈದ್ಯರು ಉಪಸ್ಥಿತಿಯಲ್ಲಿರಲಿದ್ದಾರೆ. ರೋಗಿಯ ಪರಿಸ್ಥಿತಿ ನೋಡಿ ಸಾಮಾನ್ಯ, ಐಸಿಯು ಬೆಡ್ ಬಗ್ಗೆ ವೈದ್ಯರು ನಿರ್ಧರಿಸುತ್ತಾರೆ. ಸೆಂಟರ್‌ನಲ್ಲಿ ಒಂದು ಆಂಬ್ಯುಲೆನ್ಸ್ ಇರಲಿದೆ. ಟ್ರಯಾಜ್ ಸೆಂಟರ್ನಲ್ಲಿ ಸಮರ್ಥ ರೀತಿಯಲ್ಲಿ ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಂತರ, ಮೈಸೂರಿನ ಹಸಿರು ಪ್ರತಿಷ್ಠಾನದ ವತಿಯಿಂದ ಎರಡು ಸಾವಿರ ಸಸಿಗಳನ್ನು ಶ್ರೀ ಆದಿಚುಂಚನಗಿರಿ ಮಠಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಹಕಾರ ಸಚಿವ @STSomashekarMLA, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. (2/2)#KarnatakaFightsCorona pic.twitter.com/wICbofHllQ
— CM of Karnataka (@CMofKarnataka) May 17, 2021
ಸಿಎಂ ಜೊತೆ ಮಹಿಳೆಯರ ಸೆಲ್ಫಿ ಕ್ರೇಜ್
ಕೆಂಗೇರಿ ಉಪನಗರದಲ್ಲಿ ಟ್ರಯಾಜ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮದ ಬಳಿಕ ಕಾರು ಹತ್ತಿದ್ದ ಸಿಎಂಗೆ ಮಹಿಳೆಯರು ಮನವಿ ಮಾಡಿಕೊಂಡಿದ್ದು ಮನವಿಗೆ ಸ್ಪಂದಿಸಿ ಕಾರಿನಿಂದ ಇಳಿದು ಸಿಎಂ ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ. ಬಳಿಕ ಸಿಎಂ ಜೊತೆ ಸೆಲ್ಫಿ ತೆಗೆಸಿಕೊಳ್ಳುಲು ಮಹಿಳೆಯರು ಮುಗಿಬಿದ್ದಿದ್ದು ಮಹಿಳೆಯರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸೆಲ್ಫಿ ಪಡೆಯಲು ಬಂದ ಮಹಿಳೆಯರನ್ನು ಪೊಲೀಸರು ತಡೆದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.