ಅರ್ಧ ಗಂಟೆಯಲ್ಲಿ ಅಂತಿಮ ನಿರ್ಣಯ -ಸಾರಿಗೆ ನೌಕರರ ಬೇಡಿಕೆಗಳಿಗೆ ಸಿಎಂ BSY ಅಸ್ತು?

|

Updated on: Dec 13, 2020 | 2:16 PM

ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಸಿಎಂ ಅಸ್ತು ಎಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸರ್ಕಾರಿ ನೌಕರರನ್ನಾಗಿ ಪರಿಗಣನೆ ಮಾಡುವುದು ಸದ್ಯಕ್ಕೆ ಅಸಾಧ್ಯ. ಆದರೆ, ಅವರ 10 ಬೇಡಿಕೆಗಳ ಪೈಕಿ ಬಹುತೇಕ ಬೇಡಿಕೆಗಳಿಗೆ ಸಿಎಂ ಯಡಿಯೂರಪ್ಪ ಅಸ್ತು ಎಂದಿದ್ದಾರೆ ಎಂದು ತಿಳಿದುಬಂದಿದೆ.

ಅರ್ಧ ಗಂಟೆಯಲ್ಲಿ ಅಂತಿಮ ನಿರ್ಣಯ -ಸಾರಿಗೆ ನೌಕರರ ಬೇಡಿಕೆಗಳಿಗೆ ಸಿಎಂ BSY ಅಸ್ತು?
ಸಿಎಂ BSY ಜೊತೆ ಸಚಿವ ಸವದಿ ಸಭೆ
Follow us on

ಬೆಂಗಳೂರು: ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಸಿಎಂ ಅಸ್ತು ಎಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸರ್ಕಾರಿ ನೌಕರರನ್ನಾಗಿ ಪರಿಗಣನೆ ಮಾಡುವುದು ಸದ್ಯಕ್ಕೆ ಅಸಾಧ್ಯ. ಆದರೆ, ಅವರ 10 ಬೇಡಿಕೆಗಳ ಪೈಕಿ ಬಹುತೇಕ ಬೇಡಿಕೆಗಳಿಗೆ ಸಿಎಂ ಯಡಿಯೂರಪ್ಪ ಅಸ್ತು ಎಂದಿದ್ದಾರೆ ಎಂದು ತಿಳಿದುಬಂದಿದೆ.

ಯಾವ ಪ್ರಮುಖ ಬೇಡಿಕೆಗಳಿಗೆ ಸಿಎಂ ಅಸ್ತು ಎಂದಿದ್ದಾರೆ?
1. ಸಾರಿಗೆ ನೌಕರರ ವೇತನ ತಾರತಮ್ಯ ನಿವಾರಿಸುವುದು
2. ಕೊವಿಡ್‌ನಿಂದ ಮೃತಪಟ್ಟಲ್ಲಿ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ ನೀಡಲು ಸಮ್ಮತಿ
3. ಹಿರಿಯ ಅಧಿಕಾರಿಗಳ ಕಿರುಕುಳ ತಡೆಗೆ ಸೂಕ್ತ ಕ್ರಮ

‘ಅರ್ಧ ಗಂಟೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ’
ಇತ್ತ, ಅರ್ಧ ಗಂಟೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ ಎಂದು ಸಿಎಂ ಜೊತೆ ಸಭೆ ಬಳಿಕ ಸಚಿವ ಲಕ್ಷ್ಮಣ ಸವದಿ ಹೇಳಿದರು. ಬಳಿಕ ಅವರ ಬಳಿಯೇ ಹೇಳಿಕೆ ಕೊಡಿಸಿ ಇದಕ್ಕೆ ಅಂತ್ಯ ಹಾಡಬೇಕು ಎಂದು ನಿರ್ಧರಿಸಿದ್ದೇವೆ ಎಂದು ಸಹ ಹೇಳಿದರು.

ಸಿಎಂ ಪ್ರತಿಭಟನಾನಿರತ ನೌಕರರನ್ನು ಆಹ್ವಾನಿಸಿದ್ದರು, ನಾನೂ ಸಹ ಆಹ್ವಾನಿಸಿದ್ದೇನೆ. ನಂದೀಶ್ ರೆಡ್ಡಿ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಸರ್ಕಾರ, ಸಿಬ್ಬಂದಿ ಮಧ್ಯೆ ಸೇತುವೆಯಾಗಿ ನಂದೀಶ್‌ ರೆಡ್ಡಿ ಕೆಲಸ ಮಾಡುತ್ತಿದ್ದಾರೆ. ಕೊವಿಡ್ ಸಂದರ್ಭದಲ್ಲೂ ಅವರಿಗೆ ವೇತನ ನೀಡಿದ್ದೇವೆ. ಅರ್ಧ ಗಂಟೆಯಲ್ಲಿ ಕೊನೇ ಸುತ್ತಿನ ಮಾತುಕತೆ ಮುಕ್ತಾಯವಾಗುತ್ತೆ. ಬಳಿಕ ಅಂತಿಮ ಘೋಷಣೆಯನ್ನು ಮಾಡುತ್ತೇವೆ ಎಂದು ಸವದಿ ಹೇಳಿದರು.

ಸಿಎಂ ಭೇಟಿಯಾದ ಬಳಿಕ ಸಚಿವ ಸವದಿ ಯೂನಿಯನ್ ಮುಖಂಡರ ಜತೆ ಚರ್ಚೆ ನಡೆಸಲು ಮತ್ತೆ ವಿಕಾಸಸೌಧಕ್ಕೆ ತೆರಳಿದರು. ಇದೀಗ, ಯೂನಿಯನ್ ಮುಖಂಡರ ಜತೆ ಅಂತಿಮ ಸುತ್ತಿನ ಚರ್ಚೆ ನಡೆಯಲಿದೆ.