ನನ್ನ ಸಂಪರ್ಕದಲ್ಲಿದ್ದವರೆಲ್ಲಾ ಕ್ವಾರಂಟೈನ್ ಆಗಿ, ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ: ಬಿ.ಎಸ್.ಯಡಿಯೂರಪ್ಪ ಮನವಿ

|

Updated on: Apr 16, 2021 | 5:34 PM

ನನ್ನ ಸಂಪರ್ಕದಲ್ಲಿರುವವರೆಲ್ಲರೂ ಕ್ವಾರಂಟೈನ್​ ಆಗಿ ಎಂದು ಟ್ವೀಟರ್​ನಲ್ಲಿ ಪೋಸ್ಟ್​ ಹಂಚಿಕೊಳ್ಳುವುದರ ಮೂಲಕ ಮುಖಮಂತ್ರಿ ಬಿಎಸ್​.ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.

ನನ್ನ ಸಂಪರ್ಕದಲ್ಲಿದ್ದವರೆಲ್ಲಾ ಕ್ವಾರಂಟೈನ್ ಆಗಿ, ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಿ: ಬಿ.ಎಸ್.ಯಡಿಯೂರಪ್ಪ ಮನವಿ
ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ
Follow us on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್​ ವರದಿ ದೃಢವಾಗಿದೆ. ಈ ಹಿನ್ನೆಲೆಯಲ್ಲಿ, ನನ್ನ ಸಂಪರ್ಕದಲ್ಲಿ ಇದ್ದವರೆಲ್ಲರೂ ಕ್ವಾರಂಟೈನ್​ ಆಗಿ. ಜೊತೆಗೆ ಕೊವಿಡ್​ ಟೆಸ್ಟ್​ ಮಾಡಿಕೊಳ್ಳಿ ಎಂದು ಟ್ವಿಟರ್​​ನಲ್ಲಿ ಪೋಸ್ಟ್​ ಹಂಚಿಕೊಳ್ಳುವುದರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ. 

ಜ್ವರದ ಹಿನ್ನಲೆಯಲ್ಲಿ ನಾನು ಇಂದು ತಪಾಸಣೆಗೆ ಒಳಪಟ್ಟಾಗ ಕೊವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ರೋಗ ಲಕ್ಷಣಗಳು ಅಲ್ಪ ಪ್ರಮಾಣದಲ್ಲಿ ಇರುವುದರಿಂದ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್​ನಲ್ಲಿದ್ದು, ಒಮ್ಮೆ ಪರೀಕ್ಷಿಸಿಕೊಳ್ಳಿ ಎಂದು ಕೋರುತ್ತೇನೆ ಎಂದು ಬರೆದುಕೊಂಡಿದ್ದಾರೆ.

ವಿಷಯ ತಿಳಿದ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ, ಕೊರೊನಾ ಸೊಂಕಿನಿಂದ ಪೀಡಿತರಾಗಿರುವ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಶೀಘ್ರ ಗುಣಮುಖರಾಗುವಂತೆ ಕೋರುತ್ತೇನೆ. ಕೊರೊನಾದಿಂದ ಚೇತರಿಸಿಕೊಂಡು ಎಂದಿನಂತೆ ಆಡಳಿತದಲ್ಲಿ ಸಕ್ರಿಯರಾಗುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಬೇಗ ಗುಣಮುಖರಾಗಲೆಂದು ಆಶಿಸುತ್ತೇನೆ. ನಿಮ್ಮ ಉತ್ತಮ ಆರೋಗ್ಯಕ್ಕಾಗಿ ರಾಜ್ಯದ ಜನತೆಯ ಪ್ರಾರ್ಥನೆ ನಿಮ್ಮೊಂದಿಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಟ್ವೀಟ್ ಮಾಡಿ ಆಶಿಸಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪಗೆ ಕೊರೊನಾ ಪಾಸಿಟಿವ್; ಬೆಳಗಾವಿ ನಾಯಕರಿಗೂ ಶುರುವಾಯ್ತು ಢವಢವ!

ಲಸಿಕೆ ಪಡೆದಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಏಕೆ ಬಂತು ಕೊರೊನಾ: ರಾಜ್ಯ ಕಾಂಗ್ರೆಸ್ ಪ್ರಶ್ನೆ

(All those in my contacts become quarantine to say chief minister BS Yediyurappa appeal)