ನಗಾರಿ ಬಾರಿಸುವ ಮೂಲಕ ಬಾಬು ಜಗಜೀವನ್ ರಾಮ್ ಕಟ್ಟಡ ಉದ್ಘಾಟಿಸಿದ ಸಿದ್ದರಾಮಯ್ಯ
ಹಸಿರು ಕ್ರಾಂತಿ ಹರಿಕಾರ ಅಂತಲೂ ಗುರುತಿಸಿಕೊಳ್ಳುವ ಬಾಬು ಜಗಜೀವನ್ ರಾಮ್ ಹೆಸರಲ್ಲಿ ನಿರ್ಮಾಣವಾಗಿರುವ ಭವ್ಯ ಕಟ್ಟಡ ಉದ್ಧಾಟನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಚೇರ್ಮನ್ ಬಸವರಾಜ ಹೊರಟ್ಟಿ, ಸಚಿವರಾದ ಹೆಚ್ ಸಿ ಮಹದೇವಪ್ಪ, ಕೆಹೆಚ್ ಮುನಿಯಪ್ಪ, ಸ್ಥಳೀಯ ಶಾಸಕ ಮುನಿರತ್ನ ನಾಯ್ಡು, ಮಾಜಿ ಸಚಿವ ಹೆಚ್ ಅಂಜನೇಯ ಮೊದಲಾದವರು ಭಾಗಿಯಾಗಿದ್ದರು.
ಬೆಂಗಳೂರು: ನಗರದ ರಾಜರಾಜೇಶ್ವರಿ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಾಬು ಜಗಜೀವನ್ ರಾಮ್ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ರಕ್ಷಣಾ ಸಚಿವ ಮತ್ತು ಮೊರಾರ್ಜೀ ದೇಸಾಯಿ ಪ್ರಧಾನ ಮಂತ್ರಿಯಾಗಿದ್ದಾಗ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಬಾಬು ಜಗಜೀವನ್ ರಾಮ್ ಮತ್ತು ಸಂವಿಧಾನ ಶಿಲ್ಪಿ ಡಾ ಬಿಅರ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ವೇದಿಕೆ ಮೇಲಿದ್ದ ಇತರ ಗಣ್ಯರೊಂದಿಗೆ ಪುಷ್ಪ ನಮನ ಸಲ್ಲಿಸುವ ಮೊದಲು ಸಿದ್ದರಾಮಯ್ಯ ಅವರು ಜಗಜೀವನರಾಮ್ ಅವರ ಪುತ್ರಿ ಹಾಗೂ ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರೊಂದಿಗೆ ನಗಾರಿ ಬಾರಿಸಿದರು. ಈ ಹಂತದಲ್ಲಿ ವೇದಿಕೆ ಮೇಲಿದ್ದ ಹಲವಾರು ದಲಿತ ಸಮುದಾಯದ ನಾಯಕರು ಡೊಳ್ಳು, ನಗಾರಿ ಹಾಗೂ ತಮಟೆಗಳನ್ನು ಬಾರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ಮುಡಾ ಸೈಟ್ ಹಂಚಿಕೆಯಲ್ಲಿ ಯಾವುದೇ ಹಗರಣ ಆಗಿಲ್ಲ’: ಸಿಎಂ ಸಿದ್ದರಾಮಯ್ಯ
Latest Videos