ಬೆಂಗಳೂರಲ್ಲಿ ಕುಡಿಯುವ ನೀರಿನ ಶಾಶ್ವತ ಸಮಸ್ಯೆ ಬಗೆಹರಿಸಲು ಸಮಿತಿ ರಚನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 18, 2024 | 3:06 PM

ಬೆಂಗಳೂರು ಕುಡಿಯುವ ನೀರಿನ ಶಾಶ್ವತ ಸಮಸ್ಯೆ ಬಗೆಹರಿಸಲು ತಜ್ಞರ ಸಮಿತಿ ರಚನೆ ಮಾಡಲು ಹೇಳಿದ್ದೇ‌ನೆ. ಕುಡಿಯುವ ನೀರು ಕುಡಿಯೋದಕ್ಕೆ ಮಾತ್ರ ಬಳಸಬೇಕು. ಕುಡಿಯುವ ನೀರು ದುರ್ಬಳಕೆ ಮಾಡಿಕೊಳ್ಳಬಾರದು. ಒಟ್ಟಾರೆ 500 ಎಂಎಲ್​ಡಿ ನೀರಿನ‌ ಕೊರತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಲ್ಲಿ ಕುಡಿಯುವ ನೀರಿನ ಶಾಶ್ವತ ಸಮಸ್ಯೆ ಬಗೆಹರಿಸಲು ಸಮಿತಿ ರಚನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಮಾರ್ಚ್​​ 18: ನಗರದಲ್ಲಿ ಕುಡಿಯುವ ನೀರಿನ ಶಾಶ್ವತ ಸಮಸ್ಯೆ ಬಗೆಹರಿಸಲು ತಜ್ಞರ ಸಮಿತಿ ರಚನೆ ಮಾಡಲು ಹೇಳಿದ್ದೇ‌ನೆ. ಕುಡಿಯುವ ನೀರು ಕುಡಿಯೋದಕ್ಕೆ ಮಾತ್ರ ಬಳಸಬೇಕು. ಕುಡಿಯುವ ನೀರು ದುರ್ಬಳಕೆ ಮಾಡಿಕೊಳ್ಳಬಾರದು. ಒಟ್ಟಾರೆ 500 ಎಂಎಲ್​ಡಿ ನೀರಿನ‌ ಕೊರತೆ ಇದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲ ಮಂಡಳಿ ಮತ್ತು ಬಿಬಿಎಂಪಿ ಇಂಧನ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದೆ. ಬೆಂಗಳೂರಲ್ಲಿ 1470 MLD ನೀರು ಮಾತ್ರ ಕಾವೇರಿ ನೀರಿನಿಂದ ಬರ್ತಿದೆ. ಉಳಿದದ್ದು ಬೋರ್ ವೆಲ್ ಮೂಲಕ‌ 14 ಸಾವಿರ ಬೋರ್ ವೆಲ್ ಇದೆ. ಅದರಲ್ಲಿ 6 ಬೋರ್ ವೆಲ್ ಡ್ರೈ ಆಗಿಬಿಟ್ಟಿದೆ ಎಂದು ತಿಳಿಸಿದರು.

2600 MLD ನೀರು ಬೆಂಗಳೂರಿಗೆ ಬೇಕು. ಆದರೆ ಬೆಂಗಳೂರಲ್ಲಿ 1470 MLD ನೀರು ಮಾತ್ರ ಬರುತ್ತಿದೆ. ಅದಕ್ಕಿಂತ ಹೆಚ್ಚು ನೀರು ಪಂಪ್ ಮಾಡುವುದಕ್ಕೆ ಆಗಲ್ಲ. ಅದರ ಕ್ಯಾಪಿಸಿಟಿ ಇಷ್ಟೇ ಇರುವುದು. ಕಳೆದ ಬಾರಿಯು ಇಷ್ಟೇ ಆಗಿದ್ದು. 110 ಹಳ್ಳಿಗಳಿಗೆ ಈ ಹಿಂದೆ ನಾನು ಇದ್ದಾಗ ನೀರು ಕೊಡಬೇಕು ಎಂದು ತೀರ್ಮಾನ ಮಾಡಿದ್ದೆ. ಆದರೆ ಹಿಂದಿನ ಸರ್ಕಾರದ ಕೋವಿಡ್ ಅಂತ ಹೇಳಿ ಮಾಡಲಿಲ್ಲ.

ಇದನ್ನೂ ಓದಿ: ರಾಜ್ಯದ ರೈತರಿಗೆ ಅನ್ಯಾಯ ಎಸಗಿದ ಬಿಜೆಪಿಯನ್ನ ಯಾಕೆ ಬೆಂಬಲಿಸಬೇಕು?: ಸಿದ್ದರಾಮಯ್ಯ ಪ್ರಶ್ನೆ

ಅದು ಜೂನ್​​ನಲ್ಲಿ ಆ ಕಾಮಗಾರಿ ಮುಗಿಯುತ್ತೆ. ಕಾವೇರಿ ಮತ್ತು ಕಬಿನಿಯಲ್ಲಿ ಬೆಂಗಳೂರಿಗೆ ಎಷ್ಟು ಬೇಕು ಅಷ್ಟು ಇಟ್ಟುಕೊಂಡಿದ್ದೇವೆ. ಜೂನ್​​ನಿಂದ ಮಾನ್ಸೂನ್ ಆರಂಭವಾಗಲಿದೆ. ಕಾವೇರಿಯಲ್ಲಿ 11.4 TMC ನೀರಿದೆ
ಕಬಿನಿಯಲ್ಲಿ 9.02 TMC ನೀರಿದೆ ಎಂದು ಹೇಳಿದ್ದಾರೆ.

ಬೆಂಗಳೂರಲ್ಲಿ ಹೊಸ ಬೊರ್ ವೇಲ್ ಹಾಕಲು ಸೂಚನೆ

110 ಹಳ್ಳಿಗಳಲ್ಲಿ 51 ಹಳ್ಳಿಗಳಿಗೆ ಸಾಕಷ್ಟು ತೊಂದರೆ ಇದೆ. ಈ ಜ್ಯೂನ್ ಒಳಗಡೆ 5 ನೇ ಹಂತ ಪೂರ್ಣ ಆಗಲಿದೆ. 750 MLD ನೀರು ಸಿಗುವುದರಿಂದ ನೀರು ಸಮಸ್ಯೆ ಆಗುವುದಿಲ್ಲ. ಮೇ 15 ಕ್ಕೆ ಆಗುತ್ತೆ ಅಂತ ಇದೆ. ಈ ಕಾಮಗಾರಿ ಆದರೆ ನೀರಿನ ಬವಣೆ ಕಡಿಮೆ ಆಗಲಿದೆ. ಬೆಂಗಳೂರಲ್ಲಿ ಹೊಸ ಬೊರ್ ವೇಲ್ ಹಾಕಲು ಸೂಚಿಸಿದ್ದೆ. 315 ಬೋರ್ ವೆಲ್ ಕೊರೆಸಿದ್ದಾರೆ. 1013 ಬೋರ್ ವೆಲ್ ರೀಚಾರ್ಜ್ ಮಾಡಲಾಗುತ್ತಿದೆ‌. ಕೊಳಗೇರೆ ಹತ್ತಿರದ ಪ್ರದೇಶಗಳು ಮತ್ತು 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಇದಕ್ಕಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಸೂಚಿಸಿದ್ದೇನೆ‌‌ ಎಂದರು.

ಇದನ್ನೂ ಓದಿ: ಸಾಲು ಸಾಲು ಪರೀಕ್ಷೆಗಳ ನಡುವೆ ಶಾಲೆಗಳಲ್ಲಿ ಎದುರಾದ ನೀರಿನ ಸಮಸ್ಯೆ; ಕುಡಿಯುವ ನೀರಿನ ವ್ಯವಸ್ಥೆಗಾಗಿ ಖಾಸಗಿ ಶಾಲೆಗಳ ಒಕ್ಕೂಟದಿಂದ ಪತ್ರ

ಎಲ್ಲಿ ಸಮಸ್ಯೆ ಇರುತ್ತೆ ಅಲ್ಲಿ ಮೊದಲು ಕ್ರಮ ಕೈಗೊಳ್ಳಬೇಕು. ನೀರು ದುರ್ಬಳಕೆಗೆ ಕ್ರಮ ಕೈಗೊಳ್ಳಬೇಕು. KC ವ್ಯಾಲಿಯಿಂದ ಬೆಂಗಳೂರು ಕೆರೆ ಭರ್ತಿ ಮಾಡಲು, ಸಣ್ಣ ನೀರಾವರಿಗೆ ಸೂಚಿಸಿದ್ದೇನೆ. 14 ಕೆರೆ ಭರ್ತಿ ಮಾಡಲು ಹೇಳಿದ್ದಾನೆ. ಇದ್ರಿಂದ ಅಂತರ್ಜಾಲ ವೃದ್ಧಿಯಾಗಲಿದೆ. ಇದಕ್ಕೆ ಹಣದ ಕೊರತೆ ಇಲ್ಲ. ಕುಡಿಯುವ ನೀರಿಗೆ ಯಾವುದೇ ಹಣದ ಸಮಸ್ಯೆ ಇಲ್ಲ. ಹಣದಿಂದ ತೊಂದರೆ ಆಯ್ತು ಅಂತ ಆಗಬಾರದು. ಸಂಬಂಧ ಪಟ್ಟ ಇಲಾಖೆಯವರು ಪ್ರತಿದಿನ ಸಭೆ ಮಾಡಬೇಕು. ಪ್ರತಿ ವಾರಕ್ಕೊಮ್ಮೆ ಸಭೆ ಮಾಡಬೇಕು. ಟ್ಯಾಂಕರ್ ಹೆಚ್ಚಳ ಸೇರಿದಂತೆ ಕಂಟ್ರೋಲ್ ರೂಂ ಹೆಚ್ಚು ಮಾಡಲು ಸೂಚನೆ ನೀಡಿಲಾಗಿದೆ.

ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಪ್ರಧಾನಿ ಮೋದಿ ರಾಜ್ಯ ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪ ವಿಚಾರವಾಗಿ ಮಾತನಾಡಿದ ಅವರು, ನಾಗಮೋಹನ್ ದಾಸ್ ಕಮೀಟಿ ಇದೆ. ಇವರು ಅಲ್ಲಿ ನನ್ನ ಮೇಲೆ, ಮಂತ್ರಿಗಳ ಮೇಲೆ‌ ಬೇಕಿದ್ದರೆ ದೂರು ಕೊಡಿ. ಇವರ ಸರ್ಕಾರದ ಮೇಲೆ 40% ಆರೋಪ ಇತ್ತು. ಇವರು ಕಮೀಷನ್ ಮಾಡಿ ತನಿಖೆ ಮಾಡಿದ್ರಾ? ಕಾಂಟ್ರಾಕ್ಟ್ರ್ ಅಸೊಶಿಯೇಶನ್ ಆರೋಪ ಮಾಡಿದ್ದಾಗ ಇವರೇನು ಮಾಡಿಲ್ಲ ಎಂದು ಕಿಡಿಕಾರಿದರು.

ನರೇಂದ್ರ ಮೋದಿ ಭಾಷಣದಲ್ಲಿ ಹೇಳೋದೆಲ್ಲ ಸುಳ್ಳು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನೋ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಎಲ್ಲವೂ ಸರಿಯಿದೆ. ಕಾನೂನು ಸುವ್ಯವಸ್ಥೆ ಸರಿಯಾಗಿದೆ, ಜನ ಸುಭೀಕ್ಷರಾಗಿದ್ದಾರೆ. ರಾಜ್ಯದಲ್ಲಿ ಹಣ ಇಲ್ಲ ಎನ್ನೋ ಮೋದಿ ಆರೋಪ ವಿಚಾರವಾಗಿ ಮಾತನಾಡಿ, ಐದು ತಿಂಗಳಾಯ್ತು ಒಂದು ಪೈಸೆ ಹಣ ಕೊಟ್ಟಿಲ್ಲ. 18175 ಕೋಟಿ ರೂ. ಹಣ‌ ಕೇಳಿದ್ದೆವು ಕೊಟ್ಟಿಲ್ಲ. ಬರ ಪರಿಹಾರದ ಹಣವನ್ನು ಕೊಟ್ಟಿಲ್ಲ. 5300 ಕೋಟಿ ರೂ. ಅಪ್ಪರ್ ಭದ್ರಾ ಯೋಜನೆಗೆ ಹಣ ಕೊಡುವುದಾಗಿ ಹೇಳಿದ್ರು ಕೊಟ್ಟಿಲ್ಲ. ಸರ್ಕಾರ ಘೋಷಣೆ ಮಾಡಿರುವ ಎಲ್ಲಾ ಯೋಜನೆಗೂ ಹಣ ಇದೆ. ಕರ್ನಾಟಕ ಸರ್ಕಾರದಲ್ಲಿ ಹಣ ಇಲ್ಲ ಎಂದು ಹೇಳುವುದಕ್ಕೆ ಇವರಿಗೆ ಯಾವ ಮೊರಲ್ ರೈಟ್ಸ್ ಇದೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.