ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದ ಮೊಬೈಲ್ ಟವರ್: ಶಾರ್ಟ್ ಸರ್ಕ್ಯೂಟ್ ಶಂಕೆ
ಇಂಡಸ್ ಕಂಪನಿಯ ಮೊಬೈಲ್ ನೆಟ್ವರ್ಕ್ ಟವರ್ ಬೆಂಕಿಗಾಹುತಿ ಆಗಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿ ನಡೆದಿದೆ. ಜನರೇಟರ್ ರೂಮ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆ ಇಡೀ ಟವರ್ಗೆ ಬೆಂಕಿ ವ್ಯಾಪಿಸಿತ್ತು. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವುದಾಗಿ ಶಂಕಿಸಲಾಗಿದೆ.
ಆನೇಕಲ್, ಮಾರ್ಚ್ 18: ಇಂಡಸ್ ಕಂಪನಿಯ ಮೊಬೈಲ್ ನೆಟ್ವರ್ಕ್ ಟವರ್ ಬೆಂಕಿಗಾಹುತಿ (Fire) ಆಗಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿ ನಡೆದಿದೆ. ಜನರೇಟರ್ ರೂಮ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆ ಇಡೀ ಟವರ್ಗೆ ಬೆಂಕಿ ವ್ಯಾಪಿಸಿತ್ತು. ಜನರೇಟರ್ಗೆ ತುಂಬಿಸಿದ್ದ ಡಿಸೇಲ್ಗೆ ಬೆಂಕಿ ತಗುಲಿ ಟವರ್ ಹೊತ್ತಿ ಉರಿದಿತ್ತು. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವುದಾಗಿ ಶಂಕಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ವಾಹನದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಜಿಗಣಿ ಪೊಲೀಸ್ ಠಾಣೆ ಸಿಬ್ಬಂದಿಗಳು ದೌಡಾಯಿಸಿದ್ದಾರೆ.
ಇದ್ದಕ್ಕಿದ್ದಂತೆ ನಡು ರಸ್ತೆಯಲ್ಲಿ ಹೊತ್ತಿ ಉರಿದ ಕಾರು
ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದ್ದಕ್ಕಿದ್ದಂತೆ ನಡು ರಸ್ತೆಯಲ್ಲಿ ಕಾರು ಹೊತ್ತಿ ಉರಿದಿರುವಂತಹ ಘಟನೆ ನಡೆದಿದೆ. ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ ಮುಂದೆ ಘಟನೆ ನಡೆದಿದೆ. ನಿಂತಿರುವ ಕಾರಿನಲ್ಲಿ ಬೆಂಕಿ ಕಂಡು ಜನ ಆತಂಕಗೊಂಡರು. ಬೆಂಕಿ ಹತ್ತಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಗಾಯತ್ರಿ ಅಸೋಸಿಯೇಟ್ ಗೋದಾಮಿನಲ್ಲಿ ಅಗ್ನಿ ಅವಘಡ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಾಂತಿ ನಗರದ ನಿವಾಸಿ ನಾಗನ್ಕಾಯ್ ಎಂಬುವವರಿಗೆ ಬೆಲೆನೋ ಕಾರು ಸೇರಿದೆ. ಮಗನ ಪರೀಕ್ಷೆ ಇದ ಕಾರಣ ಮಗನನ್ನು ಕರಕೊಂಡು ತಂದೆ ಬಂದಿದ್ದರು. ಸಮಯ ಇರುವ ಕಾರಣ ವಿಶಾಲ ಮಾರ್ಟನಲ್ಲಿ ಬಟ್ಟೆ ಖರೀದಿಗೆ ಕಾರ ಪಾರ್ಕಿಂಗ್ ಮಾಡಿ ಹೋದಾಗ ಘಟನೆ ನಡೆದಿದೆ.
ಟಿಂಬರ್ ಮಳಿಗೆಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ಮೌಲ್ಯದ ಪದಾರ್ಥಗಳು ಬೆಂಕಿಗಾಹುತಿ
ಮೈಸೂರಿನ ಆಂದೋಲನ ವೃತ್ತ ಬಳಿ ಟಿಂಬರ್ ಮಳಿಗೆಗೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಮಳಿಗೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಪದಾರ್ಥಗಳು ನಾಶವಾಗಿವೆ. ಯೂಸ್ರಾ ಎಂಟರ್ಪ್ರೈಸಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಕುವೆಂಪುನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಭೂ ಭಾಗ ಬೆಂಕಿಗಾಹುತಿ
ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಾರಂಪಳ್ಳಿ ಸ್ಪಂದನಾ ಸ್ಟೋರ್ಸ್ ಸನಿಹ ಸಾಕಷ್ಟು ಭೂ ಭಾಗ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಗಾಳಿಯ ರಭಸಕ್ಕೆ ಬೆಂಕಿಯ ಕೆನ್ನಾಲಿಗೆ ಹತ್ತಿರವಿರುವ ಪೊದೆ ಗಿಡಗಂಟಿಗಳಿಗೆ ತಾಗಿ ಸುಟ್ಟು ಭಸ್ಮವಾಗಿದೆ.
ಇದನ್ನೂ ಓದಿ: ಉಡುಪಿಯಲ್ಲಿ ರಣ ಬಿಸಿಲು: ಅಗ್ನಿಶಾಮಕ ವಾಹನಗಳು ಗುಜರಿ ಸೇರಿವೆ, ಅಗ್ನಿ ಅವಘಡಕ್ಕೆ ಮುಂಚೆ ಎಚ್ಚೆತ್ತುಕೊಳ್ಳಬೇಕಿದೆ!
ಕಾಲಿ ಇರುವ ಜಾಗದಲ್ಲಿ ಸಾಕಷ್ಟು ಗಿಡಗಂಟಿಗಳು ಕುರುಚಲು ಪದಗಳು ಬೆಳೆದಿದ್ದ ಹಿನ್ನೆಲೆಯಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಯುವಕರು ಬೆಂಕಿನಂಬಿಸುವ ಕಾರ್ಯ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.