ಅಗಲಿದ ಡಿಬಿ ಚಂದ್ರೇಗೌಡರಿಗೆ ಅಂತಿಮ ನಮನ ಸಲ್ಲಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕರಾದರು

|

Updated on: Nov 08, 2023 | 3:06 PM

ಪೂಜೆ ಮಾಡುವ ಮೊದಲು ಮತ್ತು ಮಾಡುವಾಗಲೂ ಸಿದ್ದರಾಮಯ್ಯ ಗತಿಸಿದ ನಾಯಕನ ಮುಖವನ್ನು ತದೇಕದೃಷ್ಟಿಯಿಂದ ನೋಡುತ್ತಾರೆ. ಸಿದ್ದರಾಮಯ್ಯ ಮತ್ತು ಚಂದ್ರೇಗೌಡ ಸಮಕಾಲೀನರಾದರೂ ದಿವಂಗತರು ಮುಖ್ಯಮಂತ್ರಿಯವರಿಗಿಂತ ಸುಮಾರು ಹತ್ತು ವರ್ಷಗಳಷ್ಟು ದೊಡ್ಡವರು.

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ಚಿಕ್ಕಮಗಳೂರಿಗೆ ತೆರಳಿ ನಿನ್ನೆ ಬೆಳಗಿನ ಜಾವ ನಿಧನರಾದ ಡಿಬಿ ಚಂದ್ರೇಗೌಡ (DB Chandre Gowda) ಅವರಿಗೆ ಅಂತಿಮ ನಮನ ಸಲ್ಲಿಸಿದರು. ಜನತಾ ಪಾರ್ಟಿಯ (Janata Party) ಸದಸ್ಯರಾಗಿದ್ದಾಗ ಸಿದ್ದರಾಮಯ್ಯ ಮತ್ತು ಚಂದ್ರೇಗೌಡ ನಡುವೆ ಬೆಳೆದ ಗೆಳೆತನ, ಸಲುಗೆ, ಆತ್ಮೀಯತೆ ಕೊನೆಯವರೆಗೂ ಇತ್ತು. ಚಂದ್ರೇಗೌಡರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸುವಾಗ ಸಿದ್ದರಾಮಯ್ಯ ಭಾವುಕರಾಗುವುದನ್ನು ದೃಶ್ಯಗಳಲ್ಲಿ ಗಮನಿಸಬಹುದು. ಚಂದ್ರೇಗೌಡರ ದೇಹವಿದ್ದ ಪೆಟ್ಟಿಗೆ ಮೇಲೆ ಹೂಮಾಲೆ ಹಾಕಿದ ಬಳಿಕ ಸಿದ್ದರಾಮಯ್ಯ ಪಾರ್ಥೀವ ಶರೀರಕ್ಕೆ ಪೂಜೆ ಮಾಡುತ್ತಾರೆ. ಪೂಜೆ ಮಾಡುವ ಮೊದಲು ಮತ್ತು ಮಾಡುವಾಗಲೂ ಸಿದ್ದರಾಮಯ್ಯ ಗತಿಸಿದ ನಾಯಕನ ಮುಖವನ್ನು ತದೇಕದೃಷ್ಟಿಯಿಂದ ನೋಡುತ್ತಾರೆ. ಸಿದ್ದರಾಮಯ್ಯ ಮತ್ತು ಚಂದ್ರೇಗೌಡ ಸಮಕಾಲೀನರಾದರೂ ದಿವಂಗತರು ಮುಖ್ಯಮಂತ್ರಿಯವರಿಗಿಂತ ಸುಮಾರು ಹತ್ತು ವರ್ಷಗಳಷ್ಟು ದೊಡ್ಡವರು. ಅಂತಿಮ ನಮನ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ಚಂದ್ರೇಗೌಡರ ಪತ್ನಿ, ಪುತ್ರಿಯರು ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ