ಅಧಿಕಾರ ಬಿಟ್ಟುಕೊಟ್ರೂ SIM ಬಿಡೆನು: ಖಾಕಿಗಳ ಕಿತ್ತಾಟದಲ್ಲಿ ಜನರ ಕಷ್ಟ ಕೇಳೋರು ಯಾರು?

| Updated By: ಸಾಧು ಶ್ರೀನಾಥ್​

Updated on: Nov 30, 2020 | 11:11 AM

ಅಧಿಕಾರ ಬಿಟ್ಟುಕೊಟ್ರೂ ಸಿದ್ದರಾಜು ತಮ್ಮ ಅಧಿಕೃತ ಮೊಬೈಲ್​ ಸಿಮ್ ಕಾರ್ಡ್​ನ ಹಸ್ತಾಂತರಿಸಿಲ್ಲ ಎಂದು ಹೇಳಲಾಗಿದೆ. ಜೊತೆಗೆ, ಕಳೆದ 2 ತಿಂಗಳಿಂದ ಆ ನಂಬರ್ ಸ್ವಿಚ್ ಆಫ್​ ಕೂಡ ಆಗಿದೆಯಂತೆ.

ಅಧಿಕಾರ ಬಿಟ್ಟುಕೊಟ್ರೂ SIM ಬಿಡೆನು: ಖಾಕಿಗಳ ಕಿತ್ತಾಟದಲ್ಲಿ ಜನರ ಕಷ್ಟ ಕೇಳೋರು ಯಾರು?
ದೇವನಹಳ್ಳಿ ಪೊಲೀಸ್​ ಠಾಣೆ
Follow us on

ದೇವನಹಳ್ಳಿ: ಇಬ್ಬರು ಖಾಕಿ ಅಧಿಕಾರಿಗಳು ಶೀತಲ ಸಮರದಿಂದ ಸಾರ್ವಜನಿಕರು ಕಷ್ಟ ಅನುಭವಿಸುತ್ತಿರುವ ಘಟನೆ ದೇವನಹಳ್ಳಿ ಪಟ್ಟಣ ಪೊಲೀಸ್​ ಠಾಣೆಯಲ್ಲಿ ಬೆಳಕಿಗೆ ಬಂದಿದೆ.

ಹೌದು, ಕಳೆದ ಒಂದೂವರೆ ವರ್ಷದಿಂದ ದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ಇನ್​ಸ್ಪೆಕ್ಟರ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದರಾಜುರನ್ನು ಕಳೆದ ಎರಡು ತಿಂಗಳ ಹಿಂದೆ ಕೆ.ಜಿ.ಹಳ್ಳಿ ಗಲಾಟೆ ಬಂದೋಬಸ್​ಗೆಂದು ನಿಯೋಜಿಸಲಾಗಿತ್ತು. ಜೊತೆಗೆ, ದೇವನಹಳ್ಳಿ ಠಾಣೆಗೆ ಪ್ರಭಾರ ಇನ್​ಸ್ಪೆಕ್ಟರ್​ ಆಗಿ ಮೊಹಮ್ಮದ್ ರಫೀಕ್​ರನ್ನ ಹಿರಿಯ ಅಧಿಕಾರಿಗಳು ನೇಮಕ ಮಾಡಿದ್ದರು.

ಆದರೆ, ಅಧಿಕಾರ ಬಿಟ್ಟುಕೊಟ್ರೂ ಸಿದ್ದರಾಜು ತಮ್ಮ ಅಧಿಕೃತ ಮೊಬೈಲ್​ ಸಿಮ್ ಕಾರ್ಡ್​ನ ಹಸ್ತಾಂತರಿಸಿಲ್ಲ ಎಂದು ಹೇಳಲಾಗಿದೆ. ಜೊತೆಗೆ, ಕಳೆದ 2 ತಿಂಗಳಿಂದ ಆ ನಂಬರ್ ಸ್ವಿಚ್ ಆಫ್​ ಕೂಡ ಆಗಿದೆಯಂತೆ. ಇತ್ತ, ಸಿಮ್ ಬಗ್ಗೆ ಕೇಳಿದ್ರೆ ನಾನು ಆವತ್ತೇ ಮೊಹಮ್ಮದ್ ರಫೀಕ್​ಗೆ ಕೊಟ್ಟಿದ್ದೀ‌ನಿ ಎಂದು ಇನ್​​ಸ್ಪೆಕ್ಟರ್ ಸಿದ್ದರಾಜು ಹೇಳುತ್ತಿದ್ದಾರೆ. ಆದ್ರೆ ನನಗೆ ಸಿಮ್ ಕೊಟ್ಟೇ ಇಲ್ಲ.. ಅವರ‌ ಬಳಿಯೇಯಿದೆ ಅಂತಾ ಇನ್​ಸ್ಪೆಕ್ಟರ್​ ರಫೀಕ್​ ವಾದ.

ಈ ನಡುವೆ, ಜನ ತಮ್ಮ ಸಂಕಷ್ಟ ಹೇಳಿಕೊಳ್ಳಲು ಠಾಣೆಯ ಅಧಿಕೃತ ಮೊಬೈಲ್​ ನಂಬರ್​ಗೆ ಕರೆ ಮಾಡಿದ್ರೆ ನೋ ರೆಸ್ಪಾನ್ಸ್. ಹಾಗಾಗಿ, ನಮ್ಮ ಗೋಳು ಕೇಳೋರು ಯಾರು ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇಬ್ಬರು ಅಧಿಕಾರಿಗಳ ಶೀತಲ ಸಮರದ ನಡುವೆ ಸಿಲುಕಿ ನಾವು ಕಷ್ಟ ಅನುಭವಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಒಂದೇ ಸಬ್​ ರಿಜಿಸ್ಟ್ರಾರ್ ಕುರ್ಚಿಗಾಗಿ.. ಒಂದೇ ರೂಂನಲ್ಲಿ 2 ಚೇರ್​ ಹಾಕಿ ಕುಳಿತ ಅಧಿಕಾರಿಗಳು!