ಈರುಳ್ಳಿ ಮಾರಾಟಕ್ಕೆ ಮೊದ್ಲು ಲೈಸೆನ್ಸ್ ತಗೊಳ್ಳಿ, ಅಕ್ರಮ ದಾಸ್ತಾನು ಮಾಡಿದ್ರೆ ಹುಷಾರ್!

|

Updated on: Dec 10, 2019 | 1:59 PM

ಮೈಸೂರು: ಈರುಳ್ಳಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಅಕ್ರಮ ದಾಸ್ತಾನು ಮಾಡುವವರ ವಿರುದ್ಧ ತಡೆ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಮೈಸೂರು ಜಿಲ್ಲೆಯಲ್ಲಿ ಪರವಾನಗಿ ಪಡೆದು ಈರುಳ್ಳಿ ಮಾರಾಟ ಮಾಡಬೇಕು ಎಂದು ಡಿಸಿ ಆದೇಶಿಸಿದ್ದಾರೆ. ಅಗತ್ಯ ವಸ್ತುಗಳ ಪರವಾನಗಿ ಆದೇಶ 1986(ತಿದ್ದುಪಡಿ 2019)ರ ಪ್ರಕಾರ ಲೈಸೆನ್ಸ್ ಪಡೆಯಬೇಕು. ನಗರ ವ್ಯಾಪಾರಿಗಳು ಡಿಸಿ ಕಚೇರಿಯಿಂದ ಲೈಸೆನ್ಸ್ ಪಡೆದೇ ಮಾರಾಟ ಮಾಡಬೇಕು. ತಾಲೂಕಿನಲ್ಲಿ ತಹಶೀಲ್ದಾರ್‌ರಿಂದ ಅನುಮತಿ ಪಡೆಯಬೇಕು. ಸರ್ಕಾರದ ಆದೇಶದಂತೆ ಸಗಟು ವ್ಯಾಪಾರಿಗಳು 250 ಕ್ವಿಂಟಾಲ್ ಈರುಳ್ಳಿ ಮಾತ್ರ ದಾಸ್ತಾನಿನಲ್ಲಿ ಸಂಗ್ರಹಿಸಬೇಕು. ಚಿಲ್ಲರೆ […]

ಈರುಳ್ಳಿ ಮಾರಾಟಕ್ಕೆ ಮೊದ್ಲು ಲೈಸೆನ್ಸ್ ತಗೊಳ್ಳಿ, ಅಕ್ರಮ ದಾಸ್ತಾನು ಮಾಡಿದ್ರೆ ಹುಷಾರ್!
Follow us on

ಮೈಸೂರು: ಈರುಳ್ಳಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಅಕ್ರಮ ದಾಸ್ತಾನು ಮಾಡುವವರ ವಿರುದ್ಧ ತಡೆ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಮೈಸೂರು ಜಿಲ್ಲೆಯಲ್ಲಿ ಪರವಾನಗಿ ಪಡೆದು ಈರುಳ್ಳಿ ಮಾರಾಟ ಮಾಡಬೇಕು ಎಂದು ಡಿಸಿ ಆದೇಶಿಸಿದ್ದಾರೆ. ಅಗತ್ಯ ವಸ್ತುಗಳ ಪರವಾನಗಿ ಆದೇಶ 1986(ತಿದ್ದುಪಡಿ 2019)ರ ಪ್ರಕಾರ ಲೈಸೆನ್ಸ್ ಪಡೆಯಬೇಕು.

ನಗರ ವ್ಯಾಪಾರಿಗಳು ಡಿಸಿ ಕಚೇರಿಯಿಂದ ಲೈಸೆನ್ಸ್ ಪಡೆದೇ ಮಾರಾಟ ಮಾಡಬೇಕು. ತಾಲೂಕಿನಲ್ಲಿ ತಹಶೀಲ್ದಾರ್‌ರಿಂದ ಅನುಮತಿ ಪಡೆಯಬೇಕು. ಸರ್ಕಾರದ ಆದೇಶದಂತೆ ಸಗಟು ವ್ಯಾಪಾರಿಗಳು 250 ಕ್ವಿಂಟಾಲ್ ಈರುಳ್ಳಿ ಮಾತ್ರ ದಾಸ್ತಾನಿನಲ್ಲಿ ಸಂಗ್ರಹಿಸಬೇಕು. ಚಿಲ್ಲರೆ ವ್ಯಾಪಾರಿಗಳು 50 ಕ್ವಿಂಟಾಲ್ ಮಾತ್ರ ದಾಸ್ತಾನು ಮಾಡಬೇಕು.

ಪರವಾನಗಿ ಇಲ್ಲದೆಯೇ ಅದಕ್ಕಿಂತ ಹೆಚ್ಚು ಸಂಗ್ರಹಿಸಿದ್ರೆ ಕಾನೂನು ಕ್ರಮಕೈಗೊಳ್ಳುವುದಾಗಿ ಮೈಸೂರು ಡಿಸಿ ಆದೇಶ ನೀಡಿದ್ದಾರೆ. ಇನ್ನು ಮುಂದೆ ಆಹಾರ ಇಲಾಖೆ ಕೂಡ ಯಾವಾಗ ಬೇಕಾದರು ಈರುಳ್ಳಿ ಅಂಗಡಿಗಳ ಮೇಲೆ ದಾಳಿ ನಡೆಸಬಹುದು. ಹೀಗಾಗಿ ಅಕ್ರಮ ದಾಸ್ತಾನು ಮಾಡಿಕೊಂಡವರಲ್ಲಿ ಆತಂಕ ಸೃಷ್ಟಿಯಾಗಿದೆ.

Published On - 1:27 pm, Tue, 10 December 19