AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ನೌಕರಿಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಕಲಚೇತನರ ಪ್ರತಿಭಟನೆ

ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ವಿಕಲಚೇತನರು ಪ್ರತಿಭಟನೆ ನಡೆಸಿದ್ರು. ವಿಕಲಚೇತನರು ಪಡೆದ ಶಿಕ್ಷಣ ಆಧಾರದ ಮೇಲೆ ಪ್ರತಿ ವರ್ಷ ಸರ್ಕಾರಿ ನೌಕರಿ ನೀಡುವಂತೆ ಆಗ್ರಹಿಸಿದ್ರು. ವಿಕಲಚೇತನರಿಗೆ ಸರ್ಕಾರಿ ನೌಕರಿ ಕೈಗೆಟುಕದಾಗಿದ್ದು, ಪ್ರತಿ ಇಲಾಖೆಯಲ್ಲೂ ನೌಕರಿ ನೀಡುವಂತೆ ಸರ್ಕಾರವನ್ನ ಆಗ್ರಹಿಸಿದ್ರು. ಚಿನ್ನ, ₹3 ಲಕ್ಷಕ್ಕೆ ಕನ್ನ: ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬ್ಯಾಡರಹಳ್ಳಿಯಲ್ಲಿ ದುಷ್ಕರ್ಮಿಗಳು ಮನೆಯೊಂದಕ್ಕೆ ಕನ್ನ ಹಾಕಿದ್ದಾರೆ. ರಮೇಶ್ ಅನ್ನೋರ ಮನೆ ಬಾಗಿಲು ಮುರಿದು ಒಳ ನುಗ್ಗಿ ಬೀರುವಿನಲ್ಲಿದ್ದ 3 ಲಕ್ಷ ನಗದು ದೋಚಿದ್ದಾರೆ. ಚಿನ್ನದ ಉಂಗುರನೂ […]

ಸರ್ಕಾರಿ ನೌಕರಿಗಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಕಲಚೇತನರ ಪ್ರತಿಭಟನೆ
ಸಾಧು ಶ್ರೀನಾಥ್​
|

Updated on: Dec 10, 2019 | 1:49 PM

Share

ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ವಿಕಲಚೇತನರು ಪ್ರತಿಭಟನೆ ನಡೆಸಿದ್ರು. ವಿಕಲಚೇತನರು ಪಡೆದ ಶಿಕ್ಷಣ ಆಧಾರದ ಮೇಲೆ ಪ್ರತಿ ವರ್ಷ ಸರ್ಕಾರಿ ನೌಕರಿ ನೀಡುವಂತೆ ಆಗ್ರಹಿಸಿದ್ರು. ವಿಕಲಚೇತನರಿಗೆ ಸರ್ಕಾರಿ ನೌಕರಿ ಕೈಗೆಟುಕದಾಗಿದ್ದು, ಪ್ರತಿ ಇಲಾಖೆಯಲ್ಲೂ ನೌಕರಿ ನೀಡುವಂತೆ ಸರ್ಕಾರವನ್ನ ಆಗ್ರಹಿಸಿದ್ರು.

ಚಿನ್ನ, ₹3 ಲಕ್ಷಕ್ಕೆ ಕನ್ನ: ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬ್ಯಾಡರಹಳ್ಳಿಯಲ್ಲಿ ದುಷ್ಕರ್ಮಿಗಳು ಮನೆಯೊಂದಕ್ಕೆ ಕನ್ನ ಹಾಕಿದ್ದಾರೆ. ರಮೇಶ್ ಅನ್ನೋರ ಮನೆ ಬಾಗಿಲು ಮುರಿದು ಒಳ ನುಗ್ಗಿ ಬೀರುವಿನಲ್ಲಿದ್ದ 3 ಲಕ್ಷ ನಗದು ದೋಚಿದ್ದಾರೆ. ಚಿನ್ನದ ಉಂಗುರನೂ ಕದ್ದೊಯ್ದಿದ್ದಾರೆ. ಹೊನ್ನವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಎಂಟಿಬಿ, ಶರತ್ ಬೆಂಬಲಿಗರ ಗಲಾಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬಾಣಮಾಕನಹಳ್ಳಿಯಲ್ಲಿ ಪಟಾಕಿ ಸಿಡಿಸೋ ವಿಚಾರಕ್ಕೆ 2 ಗುಂಪಿನ ಮಧ್ಯೆ ಗಲಾಟೆಯಾಗಿದೆ. ಶರತ್‌ ಬಚ್ಚೇಗೌಡ ಬೆಂಬಲಿಗರು ಪಟಾಕಿ ಸಿಡಿಸೋವಾಗ ಎಂಟಿಬಿ ನಾಗರಾಜ್ ಬೆಂಬಲಿಗರು ಆಕ್ಷೇಪಿಸಿದ್ದು, ಗಲಾಟೆಗೆ ಕಾರಣವಾಗಿದೆ. ವ್ಯಕ್ತಿಯೊಬ್ಬನ ತಲೆಗೆ ಗಾಯವಾಗಿದೆ.

ಹಸು ಕೊಂದ ಹುಲಿ: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ‌ ಕಾರ್ಮಾಡುವಿನಲ್ಲಿ ಹುಲಿ ದಾಳಿ ನಡೆಸಿ ಹಸುವೊಂದನ್ನ ಕೊಂದು ಹಾಕಿದೆ. ರೈತ ಮಧು ಮಂಜುನಾಥ್ ಅನ್ನೋರು ಕೊಟ್ಟಿಗೆಯಲ್ಲಿ ಹಸು ಬಿಗಿದಿದ್ರು. ಬೆಳಂಬೆಳಗ್ಗೆ ಹುಲಿ ಅಟ್ಯಾಕ್ ಮಾಡಿದ್ದು, ಹಸು ಬಲಿ ಪಡೆದಿದೆ. ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರಿದ್ದು, ಜನರನ್ನ ಅತಂಕಕ್ಕೆ ದೂಡಿದೆ.

ಪತ್ನಿ ಹತ್ಯೆಗೈದ ಪತಿ: ಬಾಗಲಕೋಟೆಯ ವಾಂಬೆ ಕಾಲೋನಿಯಲ್ಲಿ ಪತಿಯೇ ಪತ್ನಿಯನ್ನ ಹತ್ಯೆಗೈದಿದ್ದಾನೆ. ಪತಿ ಲಾಲ್ ಸಾಬ್ ಎಂಬಾತ ಪತ್ನಿ ರಮೀಜಾ ಜತೆ ಜಗಳ ತೆಗೆದು ಕಲ್ಲಿನಿಂದ ತಲೆ, ಮುಖ ಜಜ್ಜಿ ಕೊಲೆಗೈದಿದ್ದಾನೆ. ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತಾ ಹತ್ಯೆಗೈದಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕತ್ತು ಹಿಸುಕಿ ಕೊಲೆ: ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಗಂಡನೇ ಹೆಂಡತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಿತ್ಯ ಕುಡಿದು ಬಂದು ಗಲಾಟೆ ಮಾಡ್ತಿದ್ದ ಪತಿ ಶಂಕರ್, ರಾತ್ರಿ ಮದ್ಯದ ನಶೆಯಲ್ಲಿ ಜಗಳ ತೆಗೆದು ಪತ್ನಿ ಕಾವ್ಯಾಳನ್ನ ಹತ್ಯೆ ಮಾಡಿದ್ದಾನೆ. ಬಳಿಕ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ.

ನರ ರೂಪದ ರಾಕ್ಷಸರು..! ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಾದ್ಯಂತ ಮಹಿಳೆಯರಿಬ್ಬರ ಮೇಲೆ ಕೆಲವರು ಹಲ್ಲೆ ಮಾಡ್ತಿರೋ ವಿಡಿಯೋ ವೈರಲ್ ಆಗಿದೆ. ಚಿಂದಿ ಆಯುವ ಮಹಿಳೆಯರು ಕಳ್ಳತನ ಮಾಡಿದ್ದಾರೆ ಅಂತಾ ಥಳಿಸಿದ್ದಾರೆ. ಮಹಿಳೆಯರು ಕಣ್ಣೀರಿಟ್ರೂ ಮನಬಂದಂತೆ ಹೊಡೆಯಲಾಗಿದೆ.