ಹಾಸನ: ಜಿಲ್ಲೆಯಲ್ಲಿ ಮೂಲ ಕಾಂಗ್ರೆಸ್ಸಿಗರು (Congress) ಸ್ವ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಬಿಜೆಪಿಯಿಂದ (BJP) ಕಾಂಗ್ರೆಸ್ಗೆ ವಲಸೆ ಹೋದ ಇ.ಎಚ್. ಲಕ್ಷ್ಮಣ ಅವರನ್ನು ಹಾಸನ ಜಿಲ್ಲಾಧ್ಯಕ್ಷ ನೇಮಕ ಮಾಡಿದ್ದು. ಈ ವಿಚಾರವಾಗಿ ಮೊನ್ನೆ (ಡಿ. 8) ಕೈ ಕಾರ್ಯಕರ್ತರು, ನಾಯಕರ ವಿರುದ್ಧ ಮೌನ ಪ್ರತಿಭಟನೆ ಮಾಡಿದ್ದರು. ಇಂದು (ಡಿ.9) ಈ ಸಂಬಂಧ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷ ದೃವನಾರಯಣ್ (Dhruvanarayan) ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆದಿದೆ. ಸಭೆಯಲ್ಲಿ ಕಾರ್ಯರಕರ್ತರು ನಾಯಕರಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ನೀವು ಕೆಟ್ಟು ಕೆರ ಹಿಡಿದು ಹೋಗಿದ್ದೀರಿ. ಈಗಾಗಲೇ ಗೆದ್ದಿರುವ ಹಾಗೆ ಸರ್ಕಾರ ರಚನೆ ಮಾಡಲು ರೆಡಿ ಆಗಿದ್ದೀರಾ? ಪಕ್ಷದ ಅದ್ಯಕ್ಷರನ್ನು ಆಯ್ಕೆ ಮಾಡಲು ಡೀಲ್ ಆಗಿದೆಯಾ? ಇದೇ ರೀತಿ ಮುಂದುವರಿದರೆ ಎಲ್ಲೂ ಗೆಲ್ಲಲ್ಲ. ಹಾಸನ ಜಿಲ್ಲೆಗೆ ಸರಿಯಾದ ಒಬ್ಬ ಯಜಮಾನನ್ನು ನೇಮಕ ಮಾಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಹೊಸಕೋಟೆ: ಕೈ ಪಕ್ಷದಲ್ಲಿ ಭಿನ್ನಮತ ಸ್ಫೋಟ; ಶಾಸಕ ಶರತ್ ಬಚ್ಚೇಗೌಡಗೆ ಟಿಕೆಟ್ ನೀಡದಂತೆ ಮುಖಂಡರ ಒತ್ತಾಯ
ಎ.ಮಂಜು ಅವರನ್ನು ಮಂತ್ರಿ ಮಾಡಿ ಅಂತ ಜಿಲ್ಲೆಯ ಎಲ್ಲಾ ಮುಖಂಡರು ದೆಹಲಿಗೆ ಹೋದರು. ಮಂಜು ಅವರನ್ನು ಮಂತ್ರಿಮಾಡಿದರೇ ದೇವೇಗೌಡರ ಫ್ಯಾಮಿಲಿ ತಗೆದುಬಿಡುತ್ತಾರೆ. ಆ ಪಕ್ಷ ನಿರ್ಮೂಲನೆ ಮಾಡುತ್ತಾರೆ ಅಂದುಕೊಂಡು ಎಲ್ಲರೂ ಮಂತ್ರಿ ಮಾಡಲು ಓಡಾಡಿದರು. ಅವನು ಮಂತ್ರಿಯಾಗಿ ಬಂದ ಜಾವಗಲ್ ಮಂಜುನಾಥ್ರನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ. ಆ ಮನುಷ್ಯನ ಹತ್ತಿರ ಜೇಬಿನಲ್ಲಿ ಒಂದು ಕಾಸು ಇರಲಿಲ್ಲ. ಅವನು ಆ ಕಡೆ ಈ ಕಡೆ ನೆಗೆದಾಡಿ ಆರು ವರ್ಷ ತಳ್ಳಿದ ನಾವು ಒಂದು ಎಲೆಕ್ಷನ್ ಗೆಲ್ಲಲಿಲ್ಲ ಎಂದು ಅಸಮಾಧನಾ ವ್ಯಕ್ತಪಡಿಸಿದರು.
ಪಕ್ಷ ಕಟ್ಟುವ ಮೂಲ ಕಾಂಗ್ರೆಸ್ಸಿಗರಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಿ. ಇಲ್ಲಾಂದ್ರೆ ಒಬ್ಬರು ಎಂಎಲ್‌ಎ ಆಗಲ್ಲ ಎಂದು ಎಚ್ಚರಿಗೆ ನೀಡದರು. ಆದರೆ ಇತ್ತ ಕಾರ್ಯಕರ್ತರ ಆಕ್ರೋಶಕ್ಕೆ ಉತ್ತರಿಸಲಾಗದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಮೊಬೈಲ್ ನೋಡುತ್ತ ಕುಳಿತಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:26 pm, Fri, 9 December 22