ಬೆಂಗಳೂರು: ಹಣದ ವಹಿವಾಟಿನ ಬಗ್ಗೆ ಹೇಳಿಕೆ ನೀಡಿದ್ದ ವಿಚಾರವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಇಡಿಗೆ ದೂರು ನೀಡಲಾಗಿದೆ. ಕಾಂಗ್ರೆಸ್ ಮುಖಂಡ ಮನೋಹರ್‌ರಿಂದ ಇಡಿಗೆ ದೂರು ನೀಡಲಾಗಿದೆ. ಶಾಂತಿನಗರದಲ್ಲಿನ ಇಡಿ ಕಚೇರಿಗೆ ಮನೋಹರ್ ದೂರು ಕೊಟ್ಟಿದ್ದಾರೆ. ಸಚಿವ ಸಿ.ಪಿ.ಯೋಗೇಶ್ವರ್ 9 ಕೋಟಿ ರೂ. ಸಾಲ ಮಾಡಿದ್ದರು. ಸಿ.ಪಿ.ಯೋಗೇಶ್ವರ್ ಸಾಲ ಮಾಡಿದ್ದರು ಎಂದು ರಮೇಶ್ ಜಾರಕಿಹೊಳಿ ಈ ಹಿಂದೆ ಹೇಳಿದ್ದರು. ಸರ್ಕಾರ ರಚನೆಗೆ ಸಾಲ ಮಾಡಿದ್ದಾಗಿ ರಮೇಶ್ ಹೇಳಿದ್ದರು. ಇದರ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆಯಾದ ಹಿನ್ನೆಲೆಯಲ್ಲಿ ಇಡಿ ಜಂಟಿ ನಿರ್ದೇಶಕರಿಗೆ ಮನೋಹರ್ ದೂರು ನೀಡಿದ್ದಾರೆ.
ಇತ್ತ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ 5-20 ಕೋಟಿ ಹಣದ ವಹಿವಾಟು ನಡೆದಿದರುವ ಆರೋಪದಡಿ ಬೆಂಗಳೂರು ಜಿಲ್ಲಾ ಕೇಂದ್ರ ಕಾಂಗ್ರೆಸ್ನಿಂದ ಇಡಿಗೆ ದೂರು ನೀಡಲಾಗಿದೆ. ಆರೋಪ ಮಾಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲಾಗಿದೆ. ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು ದೂರು ಕೊಟ್ಟಿದ್ದಾರೆ.
ದೃಶ್ಯದಲ್ಲಿರುವ ಯುವತಿಗೆ 2 ಫ್ಲ್ಯಾಟ್ ನೀಡಿರುವುದಾಗಿ ಬಹಿರಂಗವಾಗಿ ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ. ಆದ್ದರಿಂದ, 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕೇಸ್ ದಾಖಲಿಸಿ. ದೂರು ದಾಖಲಿಸಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಕಾಂಗ್ರೆಸ್ ಘಟಕದಿಂದ ದೂರು ನೀಡಲಾಗಿದೆ.
ಇದನ್ನೂ ಓದಿ: ದಯಮಾಡಿ ರೇಪ್ ಅನ್ನೋ ಶಬ್ದ ಬಳಸಬೇಡಿ.. ನಿಮಗೆ ಶೋಭೆ ತರಲ್ಲ -ಸಿದ್ದರಾಮಯ್ಯಗೆ ಬಾಲಚಂದ್ರ ಜಾರಕಿಹೊಳಿ ಮನವಿ
Published On - 5:51 pm, Tue, 23 March 21