ಭಾಷಣ ಮಾಡುವ ವಿಚಾರಕ್ಕೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ಕಾಂಗ್ರೆಸ್‌ನ ಮಾಜಿ ಸಚಿವರು: BSYಗೆ ಇರುಸು ಮುರುಸು

ಭಾಷಣ ಮಾಡೋ ವಿಚಾರಕ್ಕೆ ಮಾಜಿ ಸಚಿವ ರಾಯರೆಡ್ಡಿ ಕಿರಿಕ್ ಮಾಡಿದ್ದಾರೆ. ನಾನೇನು ಭಾಷಣ ಮಾಡ್ತೀನಿ ಎಂದು ಹೇಳಿಲ್ಲ ಎಂದು ಪರೋಕ್ಷವಾಗಿ ರಾಯರೆಡ್ಡಿ, ಆರ್ ವಿ.ದೇಶಪಾಂಡೆ ಅವರಿಗೆ ಟಾಂಗ್​ ನೀಡಿದ್ದಾರೆ.

ಭಾಷಣ ಮಾಡುವ ವಿಚಾರಕ್ಕೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ಕಾಂಗ್ರೆಸ್‌ನ ಮಾಜಿ ಸಚಿವರು: BSYಗೆ ಇರುಸು ಮುರುಸು
ವೇದಿಕೆ ಮೇಲೆ ಕಿರಿಕ್​ ಮಾಡಿದ ರಾಯರೆಡ್ಡಿ
Follow us
ಪೃಥ್ವಿಶಂಕರ
|

Updated on:Jan 09, 2021 | 2:20 PM

ಕೊಪ್ಪಳ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ ಭಾಷಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಮಾಜಿ ಸಚಿವರಿಬ್ಬರು ಕಿರಿಕ್‌ ಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಗ್ರಾಮದಲ್ಲಿ ನಡೆದಿದೆ.

ಘಟನೆಯಿಂದ ಸಿಎಂ B.S.ಯಡಿಯೂರಪ್ಪಗೆ ಇರುಸು ಮುರುಸಾಗಿದೆ. ಅಸಲಿಗೆ ನಡೆದದ್ದೇನೆಂದರೆ, ಗಂಟಲು ಸರಿ ಇಲ್ಲದಿದ್ದರೂ ಕಾಂಗ್ರೆಸ್‌ನ ಮಾಜಿ ಸಚಿವ ಆರ್. ವಿ.ದೇಶಪಾಂಡೆ ಭಾಷಣ ಮಾಡಿದ್ದಾರೆ. ಹೀಗಾಗಿ ಭಾಷಣ ಮಾಡೋ ವಿಚಾರಕ್ಕೆ ಮಾಜಿ ಸಚಿವ ರಾಯರೆಡ್ಡಿ ಕಿರಿಕ್ ಮಾಡಿದ್ದಾರೆ. ನಾನೇನು ಭಾಷಣ ಮಾಡ್ತೀನಿ ಎಂದು ಹೇಳಿಲ್ಲ ಎಂದು ಪರೋಕ್ಷವಾಗಿ ರಾಯರೆಡ್ಡಿ, ಆರ್. ವಿ.ದೇಶಪಾಂಡೆ ಅವರಿಗೆ ಟಾಂಗ್​ ನೀಡಿದ್ದಾರೆ.

ಆರ್.ವಿ. ದೇಶಪಾಂಡೆ ಮಾತು ಆರಂಭಿಸಿದ ಕೂಡಲೇ ಎದ್ದು ನಿಂತ ಬಸವರಾಜ್ ರಾಯರೆಡ್ಡಿ ಈ ರೀತಿ ಕಿರಿಕ್ ಮಾಡಿದ್ದಾರೆ. ಘಟನೆಯನ್ನು ಆಲಿಸಿದ ವೇದಿಕೆ ಮುಂಭಾಗದಲ್ಲಿದ್ದ ಜನ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಹಾಗೆಯೇ ರಾಯರೆಡ್ಡಿ ಬೆಂಬಲಿಗರಿಂದ ರಾಯರೆಡ್ಡಿ ಪರ ಘೋಷಣೆ ಮೊಳಗಿದೆ. ಈ ಘಟನೆಯಿಂದಾಗಿ ಮುಖ್ಯಮಂತ್ರಿಗೂ ಇರುಸು ಮುರುಸು ಉಂಟಾಗಿದೆ.

Published On - 1:59 pm, Sat, 9 January 21

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ