Mallikarjun Kharge: ಹಿರಿಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಒಲಿದ ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಮಾನ

|

Updated on: Feb 12, 2021 | 11:24 AM

ದೆಹಲಿ: ಹಿರಿಯ ಕಾಂಗ್ರೆಸ್​ ನಾಯಕ, ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನಮಾನ ಒಲಿದಿದೆ. 78 ವರ್ಷದ ಖರ್ಗೆ ಅವರನ್ನು (Mallikarjun Kharge) ಕಾಂಗ್ರೆಸ್ ಹೈಕಮಾಂಡ್ ಈ ಸ್ಥಾನಕ್ಕೆ ಆಯ್ಕೆ ಮಾಡಿದೆ. ಖರ್ಗೆ ಅವರು ಈ ಹಿಂದೆ ಲೋಕಸಭೆಯಲ್ಲಿ ಕಾಂಗ್ರೆಸ್​ ಪಕ್ಷದ ನಾಯಕರಾಗಿದ್ದರು. ಪ್ರಸ್ತುತ ವಿಪಕ್ಷ ನಾಯಕರಾಗಿರುವ (Leader of Opposition) ಗುಲಾಂ ನಬಿ ಆಜಾದ್ ಅವರು (Ghulam Nabi Azad) ಫೆಬ್ರವರಿ 15ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ ಖರ್ಗೆ ಹೆಸರನ್ನು ಕಾಂಗ್ರೆಸ್ […]

Mallikarjun Kharge: ಹಿರಿಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಒಲಿದ ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಮಾನ
ಹಿರಿಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಒಲಿದ ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಮಾನ
Follow us on

ದೆಹಲಿ: ಹಿರಿಯ ಕಾಂಗ್ರೆಸ್​ ನಾಯಕ, ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನಮಾನ ಒಲಿದಿದೆ. 78 ವರ್ಷದ ಖರ್ಗೆ ಅವರನ್ನು (Mallikarjun Kharge) ಕಾಂಗ್ರೆಸ್ ಹೈಕಮಾಂಡ್ ಈ ಸ್ಥಾನಕ್ಕೆ ಆಯ್ಕೆ ಮಾಡಿದೆ. ಖರ್ಗೆ ಅವರು ಈ ಹಿಂದೆ ಲೋಕಸಭೆಯಲ್ಲಿ ಕಾಂಗ್ರೆಸ್​ ಪಕ್ಷದ ನಾಯಕರಾಗಿದ್ದರು. ಪ್ರಸ್ತುತ ವಿಪಕ್ಷ ನಾಯಕರಾಗಿರುವ (Leader of Opposition) ಗುಲಾಂ ನಬಿ ಆಜಾದ್ ಅವರು (Ghulam Nabi Azad) ಫೆಬ್ರವರಿ 15ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ ಖರ್ಗೆ ಹೆಸರನ್ನು ಕಾಂಗ್ರೆಸ್ ಪಕ್ಷವು ಸಭಾಪತಿಗೆ ನೀಡಿದೆ.