ಅಫ್ಘಾನಿಸ್ತಾನದಲ್ಲಿ ಕನ್ನಡಿಗರು ಒತ್ತಡದಲ್ಲಿದ್ದಾರೆ: ಅವರನ್ನು ರಾಜ್ಯಕ್ಕೆ ಕರೆತರಲು ನೋಡಲ್ ಅಧಿಕಾರಿ ನೇಮಿಸಿ: ಯುಟಿ ಖಾದರ್ ಮನವಿ

| Updated By: ganapathi bhat

Updated on: Aug 18, 2021 | 4:26 PM

Afghanistan: ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವ ಕೆಲಸ ಮಾಡಬೇಕು. ಅದಕ್ಕಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಮಾಡಲಾಗಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಕನ್ನಡಿಗರು ಒತ್ತಡದಲ್ಲಿದ್ದಾರೆ: ಅವರನ್ನು ರಾಜ್ಯಕ್ಕೆ ಕರೆತರಲು ನೋಡಲ್ ಅಧಿಕಾರಿ ನೇಮಿಸಿ: ಯುಟಿ ಖಾದರ್ ಮನವಿ
ಯು.ಟಿ.ಖಾದರ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನ ಸಿಲುಕಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕನ್ನಡಿಗರು ಮಾನಸಿಕ ಒತ್ತಡದಲ್ಲಿದ್ದಾರೆ. ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವ ಕೆಲಸ ಮಾಡಬೇಕು. ಅದಕ್ಕಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಮಾಡಲಾಗಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿದ್ದಾರೆ. ನಮ್ಮ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಫಘಾನಿಸ್ತಾನದ ರಾಜಧಾನಿ ಕಾಬೂಲ್​​ನಲ್ಲಿನ ಭಾರತದ ರಾಯಭಾರಿ ಕಚೇರಿಯ ಎಲ್ಲ ಸಿಬ್ಬಂದಿ ವರ್ಗವನ್ನು ಸುರಕ್ಷಿತವಾಗಿ ನಿನ್ನೆ (ಆಗಸ್ಟ್ 17) ಭಾರತಕ್ಕೆ ಕರೆತರಲಾಗಿದೆ. ಭಾರತೀಯ ವಾಯುಸೇನೆಯ ವಿಶೇಶ ವಿಮಾನವೊಂದು ರಾಯಭಾರಿ ಕಚೇರಿ ಸಿಬ್ಬಂದಿ ಮತ್ತು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ ಪಡೆಯನ್ನು ಸ್ವದೇಶಕ್ಕೆ ಕರೆತಂದಿತ್ತು. ಒಂದು ನಿರ್ದಿಷ್ಟ ಅಪಾಯದಿಂದ ಪಾರಾಗಿ ಸ್ವದೇಶಕ್ಕೆ ಮರಳುವ ಮತ್ತು ಕುಟುಂಬದ ಸದಸ್ಯರೊಂದಿಗೆ ಬೆರೆಯುವ ಸಂಭ್ರಮದ ಕುರುಹು ಅವರ ಮುಖದಲ್ಲಿ ಕಾಣುತ್ತಿತ್ತು.

ಆದರೆ ತಾಲಿಬಾನಿಗಳು 20 ವರ್ಷಗಳಾದ ಮೇಲೆ ಅಧಿಕಾರಕ್ಕೆ ಬಂದ ನಂತರ ಅಲ್ಲಿ ಸೃಷ್ಟಿಯಾಗಿರುವ ಅರಾಜಕತೆ, ಹಾಹಾಕಾರದ ನಡುವೆ ಭಾರತೀಯರನ್ನು ವಾಪಸ್ಸು ಕರೆತರುವುದು ಅಷ್ಟು ಸುಲಭವಾಗಿಲ್ಲ. ಸಿಬ್ಬಂದಿಯನ್ನು ಹೊತ್ತ ವಿಮಾನ ಮಂಗಳವಾರ ಗುಜರಾತಿನ ಜಾಮ್ನಗರದಲ್ಲಿ ಬಂದಿಳಿದ ಬಳಿಕ ಅಫಘಾನಿಸ್ತಾನದಲ್ಲಿ ಭಾರತದ ರಾಯಭಾರಿ ರುದ್ರೇಂದ್ರ ಟಂಡನ್ ಅವರು ಐ ಎ ಎಫ್​ಗೆ ಧನ್ಯವಾದಗಳನ್ನು ಸಲ್ಲಿಸಿದ್ದರು.

ಅಫ್ಘಾನಿಸ್ತಾನದ ಇಂದಿನ ಕೆಲ ಬೆಳವಣಿಗೆಗಳು ಇಲ್ಲಿವೆ:

ಹಕ್ಕಾನಿ-ಕರ್ಜೈ ಭೇಟಿ
ತಾಲಿಬಾನ್ ನಾಯಕ ಅನಸ್ ಹಕ್ಕಾನಿ ಮತ್ತು ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಬುಧವಾರ ಪರಸ್ಪರ ಭೇಟಿಯಾಗಿ ಸರ್ಕಾರ ರಚನೆ ಕುರಿತು ಚರ್ಚಿಸಿದರು.

ಫೋಟೊ ಬದಲಾವಣೆ
ತಜಕಿಸ್ತಾನದ ಅಫ್ಘಾನ್ ರಾಯಭಾರ ಕಚೇರಿಯಲ್ಲಿದ್ದ ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಅವರ ಫೋಟೊ ಜಾಗದಲ್ಲಿ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವ ಅಮರುಲ್ಲಾ ಸಲೇಹಾ ಅವರ ಭಾವಚಿತ್ರ ಹಾಕಲಾಗಿದೆ.

ಮಾತು ನಂಬಬೇಡಿ ಎಂದ ಬ್ರಿಟನ್
ತಾಲಿಬಾನಿಗಳ ಮಾತಿನ ಮೇಲೆ ವಿಶ್ವಾಸ ಇರಿಸಲು ಆಗದು. ಅವರ ಕೆಲಸ ನೋಡಿ ನಿರ್ಧಾರಕ್ಕೆ ಬರಬೇಕು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೆ ನೀಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ 40 ಮಂದಿ ಸಾವು
ಕಾಬೂಲ್​ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಂಡು ಹಾರಿಸಲಾಗಿದ್ದು, 40 ಮಂದಿ ಸಾವನ್ನಪ್ಪಿದ್ದಾರೆ. ಕಿಕ್ಕಿರಿದು ಸೇರಿದ್ದ ಜನರನ್ನು ಚೆದುರಿಸಲು ವಿಮಾನ ನಿಲ್ದಾಣದಲ್ಲಿ ಗುಂಡು ಹಾರಿಸಲಾಯಿತು ಎಂದು ಹೇಳಲಾಗಿದೆ. ಗುಂಡು ಹಾರಿಸಿದ್ದು ಅಮೆರಿಕ ಸೇನೆ ಎಂದು ತಾಲಿಬಾನ್ ಹೇಳಿದೆ.

ಇದನ್ನೂ ಓದಿ: ‘ಕೇರಳಿಗರಿಗೆ ಹೆದರಿ ಸಿಎಂ ಗಡಿ ಭೇಟಿ ರದ್ದು ಮಾಡಿಲ್ಲ; ಕನ್ನಡಿಗರು ಒಟ್ಟಾದ್ರೆ ತಿರುವನಂತಪುರ ತನಕ ಪಾದಯಾತ್ರೆ ಮಾಡುತ್ತೇವೆ’

ಅಫ್ಘಾನಿಸ್ತಾನ ತಾಲಿಬಾನ್ ವಶ: ನರೇಂದ್ರ ಮೋದಿ ಈ ಪರಿಸ್ಥಿತಿ ಊಹಿಸಿದ್ದರು; ಹಾಗಾಗಿ ಭಾರತದಲ್ಲಿ ಸಿಎಎ ಜಾರಿ: ಪ್ರತಾಪ್ ಸಿಂಹ

Published On - 4:21 pm, Wed, 18 August 21