ಅಫ್ಘಾನಿಸ್ತಾನ ತಾಲಿಬಾನ್ ವಶ: ನರೇಂದ್ರ ಮೋದಿ ಈ ಪರಿಸ್ಥಿತಿ ಊಹಿಸಿದ್ದರು; ಹಾಗಾಗಿ ಭಾರತದಲ್ಲಿ ಸಿಎಎ ಜಾರಿ: ಪ್ರತಾಪ್ ಸಿಂಹ

Pratap Simha: ಷರಿಯಾ, ತಾಲಿಬಾನ್ ಮಾನವ ವಿರೋಧಿ ಎಂದು ಸಾಬೀತು ಆಗಿದೆ. ಆಫ್ಘನ್ ಘಟನೆಯ ಬಳಿಕ ಇದು ಸಾಬೀತಾಗಿದೆ. ಕೇವಲ ಅಫ್ಘಾನಿಸ್ತಾನದಲ್ಲಿ ಮಾತ್ರ ಇಂತಹ ಪರಿಸ್ಥಿತಿ ಇಲ್ಲ. ಭಾರತದಲ್ಲೂ ಇದೇ ಮನಸ್ಥಿತಿಯ ಜನರಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಅಫ್ಘಾನಿಸ್ತಾನ ತಾಲಿಬಾನ್ ವಶ: ನರೇಂದ್ರ ಮೋದಿ ಈ ಪರಿಸ್ಥಿತಿ ಊಹಿಸಿದ್ದರು; ಹಾಗಾಗಿ ಭಾರತದಲ್ಲಿ ಸಿಎಎ ಜಾರಿ: ಪ್ರತಾಪ್ ಸಿಂಹ
ಪ್ರತಾಪ್ ಸಿಂಹ
Follow us
| Updated By: ganapathi bhat

Updated on:Aug 18, 2021 | 3:35 PM

ಮೈಸೂರು: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಿರುವ ವಿಚಾರವಾಗಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಬುಧವಾರ (ಆಗಸ್ಟ್ 18) ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂತಹ ಪರಿಸ್ಥಿತಿ ಮೊದಲೇ ಊಹಿಸಿದ್ದರು. ಹೀಗಾಗಿಯೇ ಭಾರತದಲ್ಲಿ ಸಿಎಎ ಕಾಯ್ದೆ ಜಾರಿಗೊಳಿಸಿದರು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಷರಿಯಾ, ತಾಲಿಬಾನ್ ಮಾನವ ವಿರೋಧಿ ಎಂದು ಸಾಬೀತು ಆಗಿದೆ. ಆಫ್ಘನ್ ಘಟನೆಯ ಬಳಿಕ ಇದು ಸಾಬೀತಾಗಿದೆ. ಕೇವಲ ಅಫ್ಘಾನಿಸ್ತಾನದಲ್ಲಿ ಮಾತ್ರ ಇಂತಹ ಪರಿಸ್ಥಿತಿ ಇಲ್ಲ. ಭಾರತದಲ್ಲೂ ಇದೇ ಮನಸ್ಥಿತಿಯ ಜನರಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಇತರ ಕಡೆಗಳಲ್ಲೂ ಇಂತಹ ಅನಾಹುತಗಳಾಗಬಹುದು. ಎಲ್ಲರೂ ಸೇರಿ ಇದನ್ನು ಎದುರಿಸಬೇಕಾಗಿದೆ. ಆಫ್ಘನ್‌ನ ಇತ್ತೀಚಿನ ಬೆಳವಣಿಗೆ ಅಪಾಯಕಾರಿಯಾಗಬಹುದು. ಮುಸ್ಲಿಂ ರಾಷ್ಟ್ರಗಳಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯರಿಗೆ ಸಿಎಎ ಕಾಯ್ದೆಯನ್ನು ಏಕೆ ಜಾರಿಗೆ ತರಲಾಯಿತು ಎಂಬುದು ಈಗ ಅರ್ಥವಾಗಬೇಕು. ಮೋದಿಯವರು ಪರಿಸ್ಥಿತಿಯನ್ನು ಮೊದಲೇ ಅರ್ಥ ಮಾಡಿಕೊಂಡು ಸಿಎಎ ಕಾಯ್ದೆಯನ್ನು ಜಾರಿಗೊಳಿಸಿದರು. ಪ್ರತಿಯೊಬ್ಬ ಭಾರತೀಯರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಇವತ್ತು ಆಫ್ಘಾನಿಸ್ತಾನದ ಸುತ್ತಮುತ್ತ ಹಲವಾರು ಮುಸ್ಲಿಂ ರಾಷ್ಟ್ರಗಳಿದ್ದರೂ ಅವರನ್ನು ಕರೆಸಿಕೊಳ್ಳುತ್ತಿಲ್ಲ. ಸಿಎಎ ಜಾರಿಗೆ ತಂದದ್ದು ಆಫ್ಘಾನಿಸ್ತಾನದ ಕಾರಣಕ್ಕಾಗಿ ಮಾತ್ರವಲ್ಲ. ಇತರ ಕಡೆಗಳಲ್ಲಿ ಈ ರೀತಿಯ ಅನಾಹುತಗಳಾಗಬಹುದು. ಎಲ್ಲರೂ ಸೇರಿ ಇದನ್ನು ಎದುರಿಸಬೇಕಾಗಿದೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ದಿನದ 18 ಗಂಟೆ ಕೆಲಸ ಮಾಡುತ್ತಾರೆ; ಒಂದು ಸೂಟ್​ಕೇಸ್ ಬಟ್ಟೆ ಮಾತ್ರ ಅವರ ಆಸ್ತಿ: ಶೋಭಾ ಕರಂದ್ಲಾಜೆ

ರಾಷ್ಟ್ರೀಯ ಹೆದ್ದಾರಿ 275 ಯೋಜನೆ ತನ್ನದು ಅಂತ ಸಂಸದ ಪ್ರತಾಪ್ ಸಿಂಹ ಸಾಬೀತು ಮಾಡಿದರೆ ಅವರು ಹೇಳಿದಂತೆ ಕೇಳುತ್ತೇನೆ: ಲಕ್ಷ್ಮಣ, ಕೆಪಿಸಿಸಿ ವಕ್ತಾರ

Published On - 3:33 pm, Wed, 18 August 21

ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ