AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೇರಳಿಗರಿಗೆ ಹೆದರಿ ಸಿಎಂ ಗಡಿ ಭೇಟಿ ರದ್ದು ಮಾಡಿಲ್ಲ; ಕನ್ನಡಿಗರು ಒಟ್ಟಾದ್ರೆ ತಿರುವನಂತಪುರ ತನಕ ಪಾದಯಾತ್ರೆ ಮಾಡುತ್ತೇವೆ’

UT Khader: ಈ ಹಿಂದೆ ಕಾಸರಗೋಡಿನ ಜನರ‌ನ್ನೇ ಕೇರಳದ ಬೇರೆ ಜಿಲ್ಲೆಗೆ ಹೋಗೋಕೆ ಬಿಟ್ಟಿಲ್ಲ. ಈಗ ಸರ್ಕಾರದ ವಿರುದ್ದ ಮಾತನಾಡೋರು ಆಗ ಎಲ್ಲಿ ಹೋಗಿದ್ದರು. ಇದರ ಬಗ್ಗೆ ಯಾರೂ ಸರ್ಕಾರದ ವಿರುದ್ಧ ಮಾತನಾಡಬಾರದು ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯುಟಿ ಖಾದರ್ ಹೇಳಿಕೆ ನೀಡಿದ್ದಾರೆ.

‘ಕೇರಳಿಗರಿಗೆ ಹೆದರಿ ಸಿಎಂ ಗಡಿ ಭೇಟಿ ರದ್ದು ಮಾಡಿಲ್ಲ; ಕನ್ನಡಿಗರು ಒಟ್ಟಾದ್ರೆ ತಿರುವನಂತಪುರ ತನಕ ಪಾದಯಾತ್ರೆ ಮಾಡುತ್ತೇವೆ’
ಯು.ಟಿ.ಖಾದರ್ (ಸಂಗ್ರಹ ಚಿತ್ರ)
TV9 Web
| Edited By: |

Updated on: Aug 13, 2021 | 3:16 PM

Share

ಮಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇರಳ ಗಡಿ ಭೇಟಿ ರದ್ದು ವಿಚಾರಕ್ಕೆ ಸಂಬಂಧಿಸಿ ಕೆಲವು ಸುದ್ದಿಗಳು ಗಡಿಭಾಗದಲ್ಲಿ ಹರಿದಾಡುತ್ತಿದೆ. ಕೇರಳಿಗರ ಪ್ರತಿಭಟನೆ ಎಚ್ಚರಿಕೆ ಹಿನ್ನಲೆ ಭೇಟಿ ರದ್ದು ಮಾಡಲಾಗಿದೆ. ಕೇರಳಿಗರಿಗೆ ಹೆದರಿ ಬೊಮ್ಮಾಯಿ ಗಡಿಗೆ ಬಂದಿಲ್ಲ ಎಂದು ಕೆಲವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಎಂ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಯು.ಟಿ. ಖಾದರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ‌. ಸಿಎಂ ಬಸವರಾಜ ಬೊಮ್ಮಾಯಿ ಯಾರ ಬೆದೆರಿಕೆಗೂ ಬಗ್ಗಿ ಗಡಿ ಭೇಟಿ ರದ್ದು ಮಾಡಿಲ್ಲ. ಕನ್ನಡಿಗರು ಒಟ್ಟಾದ್ರೆ ಸಿಎಂರನ್ನು ಪಾದಾಯತ್ರೆ ಮೂಲಕ ಕರೆದುಕೊಂಡು ಹೋಗ್ತೇವೆ‌. ತಲಪಾಡಿ ಗಡಿಯಿಂದ ತಿರುವನಂತಪುರದ ತನಕ ಪಾದಯಾತ್ರೆ ಮಾಡುತ್ತೇವೆ. ಅಷ್ಟು ಧೈರ್ಯ ಕರ್ನಾಟಕದ ಜನರಲ್ಲಿದೆ ಎಂದು ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಜನರ ಆರೋಗ್ಯ ದೃಷ್ಟಿಯಿಂದ ಸಿಎಂ ಆದೇಶ ಮಾಡುತ್ತಾರೆ. ಗಡಿ ಭಾಗದ ನಿರ್ಧಾರಗಳನ್ನು ಅಧಿಕಾರಿಗಳು ಚರ್ಚಿಸಿ ತೀರ್ಮಾನ ಮಾಡುತ್ತಾರೆ‌. ಈ ಹಿಂದೆ ಕಾಸರಗೋಡಿನ ಜನರ‌ನ್ನೇ ಕೇರಳದ ಬೇರೆ ಜಿಲ್ಲೆಗೆ ಹೋಗೋಕೆ ಬಿಟ್ಟಿಲ್ಲ. ಈಗ ಸರ್ಕಾರದ ವಿರುದ್ದ ಮಾತನಾಡೋರು ಆಗ ಎಲ್ಲಿ ಹೋಗಿದ್ದರು. ಇದರ ಬಗ್ಗೆ ಯಾರೂ ಸರ್ಕಾರದ ವಿರುದ್ಧ ಮಾತನಾಡಬಾರದು ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯುಟಿ ಖಾದರ್ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಭಯೋತ್ಪಾದಕ ಕೃತ್ಯ ಸಂಬಂಧ ಮಂಗಳೂರಿನಲ್ಲಿ ಒಬ್ಬರ ಬಂಧನವಾಗಿತ್ತು. ಆ ಬಗ್ಗೆಯೂ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಇವತ್ತು ಉಳ್ಳಾಲ ವ್ಯಾಪ್ತಿಯಲ್ಲಿ ಮಾತ್ರ ಭಯೋತ್ಪಾದನೆ ಚಟುವಟಿಕೆ ನಡೆದಿಲ್ಲ. ಇಲ್ಲಿನ ಜನರು ಪರಸ್ಪರ ಭಾವೈಕ್ಯತೆ ಮತ್ತು ಪ್ರೀತಿಯಿಂದ ಬದುಕ್ತಿದಾರೆ. ದೇಶವನ್ನು ಪ್ರೀತಿಸುವ ದೇಶಪ್ರೇಮಿ ಜನರು ಈ ಭಾಗದಲ್ಲಿ ಇದ್ದಾರೆ‌. ದೇಶದ್ರೋಹದ ಕೆಲಸವನ್ನು ಯಾರೂ ಕ್ಷಮಿಸಲ್ಲ, ಯಾರೂ ಬೆಂಬಲಿಸಲ್ಲ. ಉಳ್ಳಾಲದ ನಾಗರಿಕರು ಇದನ್ನ ಒಪ್ಪಲ್ಲ. ಎನ್​ಐಎ ಅಂತಲ್ಲ, ಯಾರೂ ಬಿಡಲ್ಲ. ಮೊನ್ನೆ ಘಟನೆಯಲ್ಲಿ ಎನ್​ಐಎ ಬಂದು ಒಬ್ಬನನ್ನ ಅರೆಸ್ಟ್ ಮಾಡಿದ್ದಾರೆ. ಹೀಗಾಗಿ ತನಿಖೆ ನಡೆಯುವಾಗ ಅದರ ಬಗ್ಗೆ ಯಾರೂ ಮಾತನಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅದರ ತನಿಖೆ ನಡೆದು ಸಮಗ್ರವಾದ ವಿಚಾರ ಬೆಳಕಿಗೆ ಬರಲಿ. ಎನ್​ಐಎ ಬಂದಿರೋದು ಗಂಭೀರ ವಿಚಾರ, ಈ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಈ ಬಗ್ಗೆ ರಾಜಕೀಯ ಮಾಡಿ ಯಾರೂ ಗೊಂದಲ ಸೃಷ್ಟಿಸಬಾರದು. ಇದನ್ನ ರಾಜಕೀಯ ಮಾಡಲು ಹೋದ್ರೆ ಕ್ಷೇತ್ರದ ಜನ ಯಾರೂ ಕ್ಷಮಿಸಲ್ಲ. ಅಪರಾಧಿ ಆಗಿದ್ರೆ ಉಳ್ಳಾಲದ ಜನರು ಅವರನ್ನ ಯಾವತ್ತೂ ಕ್ಷಮಿಸಲ್ಲ. ಅವರು ನಿರಪರಾಧಿ ಆಗಿದ್ರೆ ಯಾಕೆ ಅವರ ಮೇಲೆ ಆರೋಪ ಬಂತು ಅನ್ನೋದ್ರ ಬಗ್ಗೆ ತನಿಖೆ‌ ನಡೆಯಲಿ. ಎನ್​ಐಎ ಘಟಕ ಮಂಗಳೂರಿನಲ್ಲಿ ಆಗಲಿ, ಅದು ಸಂತೋಷದ ವಿಚಾರ. ಅದರ ಜೊತೆಗೆ ‌ನಾರ್ಕೋಟೀಕ್ ಮತ್ತು ಸೈಬರ್ ಸೆಲ್ ಕೂಡ ಆಗಲಿ ಎಂದು ಆಗ್ರಹಿಸಿದ್ದಾರೆ.

ಲವ್ ಜಿಹಾದ್, ಹೆಸರು ಬದಲಾವಣೆ ಚರ್ಚೆಯ ಬಗ್ಗೆಯೂ ಖಾದರ್ ಪ್ರತಿಕ್ರಿಯೆ ಲವ್ ಜಿಹಾದ್ ಮತ್ತೊಂದು ಇನ್ನೊಂದು ಅಂತ ಅಜೆಂಡಾ ಇಟ್ಟು ಪ್ರತಿಭಟನೆ ಯಾಕೆ ಮಾಡ್ತೀರಾ? ಹಾಗಿದ್ರೆ ಲವ್ ಜಿಹಾದ್ ವಿರುದ್ದ ಕಾನೂನು ತರಲು ಸಾಯುವವರೆಗೆ ಉಪವಾಸ ಮಾಡಿ. ಅದು ಬಿಟ್ಟು ಹೊರಗಿನವರು ನನ್ನ ಉಳ್ಳಾಲ ಕ್ಷೇತ್ರಕ್ಕೆ ಬಂದು ಯಾಕೆ ಸಮಸ್ಯೆ ಮಾಡ್ತೀರಾ? ಮುಸ್ಲಿಂ ಸಹೋದರಿ ಹಿಂದೂ ಸಹೋದರನನ್ನ ಮದುವೆ ಆಗಿಲ್ವಾ? ಹೀಗೆ ಮದುವೆ ಆದವರು ರಾಜಕೀಯಕ್ಕೆ ಬಂದು ಜನಪ್ರತಿನಿಧಿ ಆದವರೂ ಇದ್ದಾರೆ. ನಿಮಗೆ ಬದ್ದತೆ ಇದ್ರೆ ಬಿಜೆಪಿ ಕಚೇರಿ ಮುಂದೆ ಲವ್ ಜಿಹಾದ್ ಕಾನೂನು ತರಲು ನಾಳೆಯಿಂದ ಪ್ರತಿಭಟಿಸಿ. ಈ ಸಂಘಟನೆಯವರ ಬಣ್ಣ ಮೊದಲು ಬಯಲಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿ.ಟಿ. ರವಿ ಹುಕ್ಕಾಬಾರ್ ಹೇಳಿಕೆಗೆ ಮಾಜಿ ಸಚಿವ ಖಾದರ್ ತಿರುಗೇಟು ನೀಡಿದ್ದಾರೆ. ಕೋಮುವಾದದ ಅಫೀಮಿನಲ್ಲಿರುವರು ಆ ಸಂಸ್ಕೃತಿ ಬಿಂಬಿಸ್ತಾರೆ. ಹುಕ್ಕಾಬಾರ್ ಅಫೀಮ್ ಅಲ್ವಾ, ಅದಕ್ಕೆ ಆ ಬಗ್ಗೆ ಮಾತಾಡ್ತಾರೆ. ಬಡವರಿಗೆ ಊಟ ಕೊಡುವುದು ಕಾಂಗ್ರೆಸ್​ ಪಕ್ಷದ ಸಂಸ್ಕೃತಿ. ಅದ್ರೆ ಇವರಿಗೆ ಅದೇ ಸಂಸ್ಕೃತಿ, ಹೀಗಾಗಿ ಅದನ್ನೇ ಮಾತಾಡ್ತಾರೆ. ವಾಜಪೇಯಿ ವಸತಿ ಯೋಜನೆಯಲ್ಲಿ ಬಿಜೆಪಿ ಏನೂ ಮಾಡ್ತಿಲ್ಲ. ವಾಜಪೇಯಿ ಯೋಜನೆಗೆ ಅನುದಾನ ಕೊಡದೇ ಅಪಮಾನ ಮಾಡುತ್ತಿದ್ದಾರೆ. ದಯವಿಟ್ಟು ವಾಜಪೇಯಿ ಹೆಸರಿನ ಯೋಜನೆಗೆ ಹಣ ಕೊಡಿ ಎಂದು ಹೇಳಿದ್ದಾರೆ.

ವಾಜಪೇಯಿ ಆರೋಗ್ಯ ಯೋಜನೆ ಹೆಸರು ಬದಲಾವಣೆ ಬಗ್ಗೆಯೂ ಚರ್ಚೆಯಿತ್ತು. ಆದ್ರೆ ನಮ್ಮ ಸರ್ಕಾರ ಬದಲಾಯಿಸುವ ಕೆಲಸ ಮಾಡಿಲ್ಲ. ವಾಜಪೇಯಿ ಅವರಿಗೂ ಈ ದೇಶದಲ್ಲಿ ಅತ್ಯಂತ ಗೌರವವಿದೆ. ಅವರ ಹೆಸರಿನಲ್ಲಿನ ಒಳ್ಳೇ ಯೋಜನೆ ಹೆಸರು ಬದಲಿಸಲಿಲ್ಲ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ. ಖಾದರ್​ ತಿಳಿಸಿದ್ದಾರೆ.

ಇದನ್ನೂ ಓದಿ: ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ದಕ್ಷಿಣ ಕನ್ನಡ ಗಡಿ ಭಾಗದ ಭೇಟಿಯನ್ನು ದಿಢೀರ್​ ರದ್ದುಪಡಿಸಿದ ಸಿಎಂ ಬೊಮ್ಮಾಯಿ

World Organ Donation Day 2021: ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತೇನೆ, ನೀವೂ ಹಾಕಿ – ಸಿಎಂ ಬೊಮ್ಮಾಯಿ

(Congress Leader UT Khader on CM Basavaraj Bommai visit Cancellation to Kerala Karnataka Border)

ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್