ಸಿಎಂ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಮಾಸ್ಕ್​, ಗ್ಲೌಸ್ ಖರೀದಿಗೆ 6 ಲಕ್ಷ ಅನುದಾನ ಬಿಡುಗಡೆಗೊಳಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲೆ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಯಲ್ಲಿ ಮಾಸ್ಕ್ ಮತ್ತು ಗ್ಲೌಸ್ ಕೊರತೆ ಬಗ್ಗೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಸಂಜೆಯ ಒಳಗೆ ಈ ಕುರಿತು ವರದಿ ನೀಡಲು ಖಡಕ್ ಸೂಚನೆ ನೀಡಿದ್ದರು.

ಸಿಎಂ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಮಾಸ್ಕ್​, ಗ್ಲೌಸ್ ಖರೀದಿಗೆ 6 ಲಕ್ಷ ಅನುದಾನ ಬಿಡುಗಡೆಗೊಳಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
ಬಸವರಾಜ ಬೊಮ್ಮಾಯಿ
Follow us
TV9 Web
| Updated By: guruganesh bhat

Updated on:Aug 12, 2021 | 11:34 PM

ಮಂಗಳೂರು: ಮಾಸ್ಕ್ ಮತ್ತು ಗ್ಲೌಸ್ ಕೊರೆತಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತರಾಟೆಗೆ ತೆಎಗದುಕೊಂಡ ಬೆನ್ನಲ್ಲೇ 6 ಲಕ್ಷ ಹಣದಲ್ಲಿ ತುರ್ತುಗಾಗಿ ಮಾಸ್ಕ್, ಗ್ಲೌಸ್ ಖರೀದಿ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಣ ಬಿಡುಗಡೆ ಮಾಡಿದ್ದಾರೆ. ಜಿಲ್ಲಾ, ತಾಲೂಕು ಮಟ್ಟದಲ್ಲಿ ಜನರಿಕ್ ಡಿಪಾರ್ಟ್ಮೆಂಟ್​ನಿಂದ ಎನ್-95 ಮಾಸ್ಕ್ ಮತ್ತು ಗ್ಲೌಸ್ ಖರೀದಿಸಲು ಸೂಚಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಯಲ್ಲಿ ಮಾಸ್ಕ್ ಮತ್ತು ಗ್ಲೌಸ್ ಕೊರತೆ ಬಗ್ಗೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಸಂಜೆಯ ಒಳಗೆ ಈ ಕುರಿತು ವರದಿ ನೀಡಲು ಖಡಕ್ ಸೂಚನೆ ನೀಡಿದ್ದರು.

ಉಡುಪಿ ಜನರು ಹೃದಯ ವೈಶಾಲ್ಯವುಳ್ಳವರು ಉಡುಪಿ ಭಾಗದ ಜತೆ ನನಗೆ ಉಡುಪಿ ಶ್ರೀಕೃಷ್ಣನನ್ನು ಹೊರತುಪಡಿಸಿದರೆ ಸಂಬಂಧವಿರಲಿಲ್ಲ. ಆದ್ರೂ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಉಡುಪಿಗೆ ನನ್ನನ್ನು ಉಸ್ತುವಾರಿ ಮಾಡಿದ್ದರು. ಉಡುಪಿಗೆ ಏಕೆ ನನ್ನ ಉಸ್ತುವಾರಿ ಮಾಡಿದ್ದರೆಂದು ಗೊತ್ತಿರಲಿಲ್ಲ. ಉಡುಪಿ ಜನರು ಹೃದಯ ವೈಶಾಲ್ಯವುಳ್ಳವರು. ಕಷ್ಟಕ್ಕೆ ಪರಿಹಾರ ಕೇಳ್ತಾರೆ ವಿನಃ ವೈಯಕ್ತಿಕವಾಗಿ ಏನೂ ಕೇಳಲ್ಲ. ಉಡುಪಿಯ ಉಸ್ತುವಾರಿಯಿಂದ ಮುಕ್ತಗೊಳಿಸಿ ಎಂದು ಕೇಳಿದ್ದೆ. ಆದರೆ ಸಿಎಂ ಆಗಿ ಉಸ್ತುವಾರಿಯಿಂದ ಮುಕ್ತನಾಗುವೆನೆಂದು ಭಾವಿಸಿರಲಿಲ್ಲ. ಉಡುಪಿಯ ಜನತೆ ಸದಾ ನನ್ನ ಹೃದಯದಲ್ಲಿ ಇರುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಮನದಾಳದ ಮಾತುಗಳನ್ನು ಹಂಚಿಕೊಂಡರು.

ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇಕಡಾ 2.60ರಷ್ಟಿದೆ. ದಕ್ಷಿಣ ಕನ್ನಡ ಜಿಲ್ಲೆ ಗಡಿಯಲ್ಲಿ ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚು ನಿಗಾ ವಹಿಸಲಾಗಿದೆ. ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಜತೆ ನಿಕಟ ಸಂಪರ್ಕದಲ್ಲಿದ್ದೇವೆ. ಜಿಲ್ಲೆಯ ನಾಲ್ಕು ಕಡೆ ಆಕ್ಸಿಜನ್ ಪ್ಲ್ಯಾಂಟ್ ಸ್ಥಾಪಿಸುತ್ತೇವೆ. ಮೈಕ್ರೋ ಕಂಟೇನ್ಮೆಂಟ್ ಜೋನ್ ರಚನೆಗೂ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೊವಿಡ್ ಸೋಂಕಿತ ವ್ಯಕ್ತಿಯ ಅಕ್ಕಪಕ್ಕದ ನಾಲ್ಕು ಮನೆ ಸೀಲ್ ಮಾಡಲಾಗುವುದು. ಪಾಸಿಟಿವ್ ವ್ಯಕ್ತಿಯ ಸಂಪರ್ಕದ 20 ಜನರನ್ನು ಟ್ರ್ಯಾಕ್ ಮಾಡಬೇಕು. ಜಿಲ್ಲೆಯಲ್ಲಿ 1.75 ಲಕ್ಷ ಮಕ್ಕಳ ಸಾಮರ್ಥ್ಯದ ಕ್ಯಾಂಪ್ ಮಾಡಲಾಗಿದೆ. ಕೊವಿಡ್ 3ನೇ ಅಲೆ ತಡೆಗಟ್ಟಲು ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 2ನೇ ವಾರದಲ್ಲಿ ಸಂಪೂರ್ಣ ಚಿತ್ರಣ ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸೆಪ್ಟೆಂಬರ್ ತಿಂಗಳಲ್ಲಿ ವಿಧಾನಸಭಾ ಅಧಿವೇಶನ ಸೆಪ್ಟೆಂಬರ್ ತಿಂಗಳಲ್ಲಿ ವಿಧಾನಸಭಾ ಅಧಿವೇಶನ ನಡೆಸುತ್ತೇವೆ ಎಂದು ಉಡುಪಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.  ಹೂವಿನ ವ್ಯಾಪಾರಿಗಳ ಪ್ರತಿಭಟನೆಯ ಕುರಿತು ಸಹ ಪ್ರತಿಕ್ರಿಯಿಸಿದ ಸಿಎಂ,  ಹೂವಿನ ವ್ಯಾಪಾರಿಗಳಿಗೆ ತೊಂದರೆ ಕೊಡಬೇಕು ಎಂಬುದು ನನ್ನ ಉದ್ದೇಶವಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಮಾತ್ರ ಹೂಗುಚ್ಚ ಹಾರ ತುರಾಯಿ ಬೇಡ ಎಂದಿದ್ದೇನೆ. ಹೂವಿನ ವ್ಯಾಪಾರವನ್ನು ಖಾಸಗಿಯಾಗಿ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: 

Assembly Session: ಸೆಪ್ಟೆಂಬರ್​ನಲ್ಲಿ ವಿಧಾನಸಭಾ ಅಧಿವೇಶನ; ಸಿಎಂ ಬಸವರಾಜ ಬೊಮ್ಮಾಯಿ

ಸಚಿವ ಸ್ಥಾನ ಅಥವಾ ಡಿಸಿಎಂ ಸ್ಥಾನದ ಆಕಾಂಕ್ಷಿ ನಾನಲ್ಲ: ಬಿ ವೈ ವಿಜಯೇಂದ್ರ

(After CM Basavaraj Bommai warns Dakshina Kannada DC releases Rs 6 lakh grant for purchase of mask and gloves)

Published On - 11:27 pm, Thu, 12 August 21