AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Assembly Session: ಸೆಪ್ಟೆಂಬರ್​ನಲ್ಲಿ ವಿಧಾನಸಭಾ ಅಧಿವೇಶನ; ಸಿಎಂ ಬಸವರಾಜ ಬೊಮ್ಮಾಯಿ

ಸರ್ಕಾರಿ ಕಾರ್ಯಕ್ರಮದಲ್ಲಿ ಮಾತ್ರ ಹೂಗುಚ್ಚ ಹಾರ ತುರಾಯಿ ಬೇಡ ಎಂದಿದ್ದೇನೆ. ಹೂವಿನ ವ್ಯಾಪಾರವನ್ನು ಖಾಸಗಿಯಾಗಿ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Assembly Session: ಸೆಪ್ಟೆಂಬರ್​ನಲ್ಲಿ ವಿಧಾನಸಭಾ ಅಧಿವೇಶನ; ಸಿಎಂ ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
TV9 Web
| Edited By: |

Updated on:Aug 12, 2021 | 7:25 PM

Share

ಉಡುಪಿ: ಸೆಪ್ಟೆಂಬರ್ ತಿಂಗಳಲ್ಲಿ ವಿಧಾನಸಭಾ ಅಧಿವೇಶನ ನಡೆಸುತ್ತೇವೆ ಎಂದು ಉಡುಪಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.  ಹೂವಿನ ವ್ಯಾಪಾರಿಗಳ ಪ್ರತಿಭಟನೆಯ ಕುರಿತು ಸಹ ಪ್ರತಿಕ್ರಿಯಿಸಿದ ಸಿಎಂ,  ಹೂವಿನ ವ್ಯಾಪಾರಿಗಳಿಗೆ ತೊಂದರೆ ಕೊಡಬೇಕು ಎಂಬುದು ನನ್ನ ಉದ್ದೇಶವಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಮಾತ್ರ ಹೂಗುಚ್ಚ ಹಾರ ತುರಾಯಿ ಬೇಡ ಎಂದಿದ್ದೇನೆ. ಹೂವಿನ ವ್ಯಾಪಾರವನ್ನು ಖಾಸಗಿಯಾಗಿ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸರಕಾರಿ ಜಾಗದಲ್ಲಿ ಗಾರ್ಡ್ ಆಫ್ ಹಾನರ್ ಬೇಡ. ಬೆಂಗಳೂರಿಗೆ ಹೋದ ತಕ್ಷಣ ಆದೇಶವನ್ನು ಹೊರಡಿಸುತ್ತೇನೆ. ಪೊಲೀಸ್ ಸಮಾರಂಭದಲ್ಲಿ ಗೌರವ ವಂದನೆ ಕೊಟ್ಟರೆ ಸಾಕು ಎಂದು ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನನಗೆ ಶುಭಕೋರುವ ಕಟೌಟ್  ಹೋರ್ಡಿಂಗ್ಸ್​ಗಳನ್ನು ಯಾರೂ ಹಾಕಬೇಡಿ. ಪಕ್ಷದವರಿಗೆ ಮತ್ತು ಅಭಿಮಾನಿಗಳಿಗೆ ನಾನು ಮನೆಗೆ ಮಾಡುತ್ತೇನೆ. ನಾನು ಮುಖ್ಯಮಂತ್ರಿಯಾದರೂ ಈ ನಾಡಿನ ಸೇವಕ. ಈ ಭಾವನೆ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

Karnataka Politics: 2023ರ ಚುನಾವಣೆಯಲ್ಲಿ123 ಕ್ಷೇತ್ರ ಗೆಲ್ಲುವುದೇ ಜೆಡಿಎಸ್ ಪಕ್ಷದ ಗುರಿ: ಎಚ್ ಡಿ ಕುಮಾರಸ್ವಾಮಿ ವಿಶ್ವಾಸ ಬೆಂಗಳೂರು: 2023ಕ್ಕೆ ಜೆಡಿಎಸ್ ಪಕ್ಷದ ಗುರಿ ಏನಿದ್ದರೂ ‘123’ ಮಾತ್ರ. 2023ರಲ್ಲಿ ರಾಜ್ಯದಲ್ಲಿ 2023ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ರಾಷ್ಟ್ರೀಯ ಪಕ್ಷಗಳಿಗೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಕಂಡರೆ ಭಯವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಜೆಡಿಎಸ್ ಪಕ್ಷ ನಶಿಸಿಹೋಗಿದೆ ಎನ್ನುವವರಿಗೆ ಮುಂದಿನ ರಾಜ್ಯ ರಾಜಕಾರಣ ಜೆಡಿಎಸ್​ನಿಂದಲೇ ಉಳಿಯಲಿದೆ ಎಂದು ಉತ್ತರ ಕೊಡಬಯಸುತ್ತೇನೆ. ರಾಜ್ಯದ ಮುಂದಿನ ರಾಜಕಾರಣ ಈಗಲೂ ಜೆಡಿಎಸ್​ ಪಕ್ಷದಿಂದಲೇ ಉಳಿಯಲಿದೆ ಎಂಬ ಭಾವನೆ ರಾಜ್ಯದ ಜನರಲ್ಲಿದೆ ಅವರು ದೃಢವಾಗಿ ಹೇಳಿದರು.

ಇದನ್ನೂ ಓದಿ: 

ನನ್ನ ಪ್ರಗತಿ ಪರಿಶೀಲನೆ ಸ್ಟೈಲ್ ಬೇರೆ ರೀತಿ; ಮಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ನಿಮಗೆ ಪ್ರವಾಸೋದ್ಯಮ ಖಾತೆ ಬೇಡ, ನಮಗೆ ನೀವೇ ಬೇಡ; ಸಾಮಾಜಿಕ ಜಾಲತಾಣಗಳಲ್ಲಿ ಆನಂದ್ ಸಿಂಗ್ ವಿರುದ್ಧ ಅಭಿಯಾನ

(CM Basavaraj Bommai says Karnataka Assembly session held in september)

Published On - 6:37 pm, Thu, 12 August 21