ನಿಮಗೆ ಪ್ರವಾಸೋದ್ಯಮ ಖಾತೆ ಬೇಡ, ನಮಗೆ ನೀವೇ ಬೇಡ; ಸಾಮಾಜಿಕ ಜಾಲತಾಣಗಳಲ್ಲಿ ಆನಂದ್ ಸಿಂಗ್ ವಿರುದ್ಧ ಅಭಿಯಾನ

We Don’t Want Anand Singh: ನಂದ್ ಸಿಂಗ್ ಪ್ರವಾಸೋದ್ಯಮ ಸಚಿವರಾಗಿ ನಮಗೆ ಬೇಡ ಎಂದು ರಾಜ್ಯ ಪ್ರವಾಸೋದ್ಯಮ ಒಕ್ಕೂಟದಿಂದ ಅಭಿಯಾನ ಶುರುವಾಗಿದೆ. ‘ವೀ ಡೋಂಟ್ ವಾಂಟ್ ಆನಂದ್ ಸಿಂಗ್’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿ ಅಭಿಯಾನ ನಡೆಸಲಾಗುತ್ತಿದೆ.

ನಿಮಗೆ ಪ್ರವಾಸೋದ್ಯಮ ಖಾತೆ ಬೇಡ, ನಮಗೆ ನೀವೇ ಬೇಡ; ಸಾಮಾಜಿಕ ಜಾಲತಾಣಗಳಲ್ಲಿ ಆನಂದ್ ಸಿಂಗ್ ವಿರುದ್ಧ ಅಭಿಯಾನ
ಸಾಮಾಜಿಕ ಜಾಲತಾಣಗಳಲ್ಲಿ ಆನಂದ್ ಸಿಂಗ್ ವಿರುದ್ಧ ಅಭಿಯಾನ
Follow us
TV9 Web
| Updated By: ಆಯೇಷಾ ಬಾನು

Updated on: Aug 12, 2021 | 11:12 AM

ಮೈಸೂರು: ಪ್ರವಾಸೋದ್ಯಮ ಖಾತೆ ಬಗ್ಗೆ ಆನಂದ್ ಸಿಂಗ್ ಕ್ಯಾತೆ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಪ್ರವಾಸೋದ್ಯಮ ಸಚಿವರಾಗಿ ನಮಗೆ ಬೇಡ ಎಂದು ರಾಜ್ಯ ಪ್ರವಾಸೋದ್ಯಮ ಒಕ್ಕೂಟದಿಂದ ಅಭಿಯಾನ ಶುರುವಾಗಿದೆ. ‘ವೀ ಡೋಂಟ್ ವಾಂಟ್ ಆನಂದ್ ಸಿಂಗ್’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿ ಅಭಿಯಾನ ನಡೆಸಲಾಗುತ್ತಿದೆ.

ಕೇಳಿದ ಖಾತೆ ಸಿಗದ ಸಿಟ್ಟು.. ರಾಜೀನಾಮೆಗೆ ಸಜ್ಜಾದ್ರಾ ಆನಂದ್ ಸಿಂಗ್? ಒಂದು ಕಾಲದಲ್ಲಿ ಕೈ ಪಾಳೆಯದ ಕಟ್ಟಾಳಾಗಿದ್ದ ಆನಂದ್ ಸಿಂಗ್.. ಕಳೆದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ, ಹೊರ ನಡೆದ ಮೊದಲಿಗರು. ಹೀಗಾಗೇ, ಬಿಜೆಪಿ ಬಾವುಟ ಹಿಡಿದ ಆನಂದ್ಗೆ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಅರಣ್ಯ ಸಚಿವ ಸ್ಥಾನ ಸಿಕ್ಕಿತ್ತು. ಒಲ್ಲದ ಮನಸ್ಸಲ್ಲೇ ಮಂತ್ರಿಗಿರಿ ನಿಭಾಯಿಸಿದ್ರು. ಆದ್ರೀಗ, ಬೊಮ್ಮಾಯಿ ಸರ್ಕಾರದಲ್ಲಿ ಪ್ರವಾಸೋದ್ಯಮ, ಪರಿಸರ ಇಲಾಖೆ ಹೊಣೆ ಸಿಕ್ಕಿದ್ದು ಅಸಮಾಧಾನ ಸ್ಫೋಟವಾಗಿದೆ. ಪ್ರಭಾವಿ ಖಾತೆಗಾಗಿ ಆನಂದ್ ಪಟ್ಟು ಹಿಡಿದಿದ್ದು, ಬಹಿರಂಗವಾಗೇ ಬೇಸರ ಹೊರಹಾಕಿದ್ದಾರೆ. ಆದರೆ ಇದರ ನಡುವೆ ಈಗ ನಿಮಗೆ ಪ್ರವಾಸೋದ್ಯಮ ಖಾತೆ ಬೇಡ, ನಮಗೆ ನೀವೇ ಬೇಡ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ.

ಇನ್ನು ಮತ್ತೊಂದು ಕಡೆ ಹೊಸಪೇಟೆಯ ರಾಣಿಪೇಟೆಯಲ್ಲಿದ್ದ ಶಾಸಕರ ಕಚೇರಿಯನ್ನ ಆನಂದ್ ಸಿಂಗ್ ತೆರವುಗೊಳಿಸಿದ್ದಾರೆ. ಹೀಗಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಾರೆ ಅನ್ನೋ ಚರ್ಚೆ ಹುಟ್ಟುಹಾಕಿದೆ. ಹಾಗೂ ಕುಟುಂಬದ ಆರಾಧ್ಯ ದೈವ ವೇಣುಗೋಪಾಲ ದೇಗುಲದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಆನಂದ್ ಸಿಂಗ್.. ಹೋಮ-ಹವನದ ವೇಳೆ ಹರಕೆ ಚೀಟಿಯನ್ನು ಸಲ್ಲಿಸಿದ್ರು. ರಾಜೀನಾಮೆ ವಿಷ್ಯದ ಬಗ್ಗೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಇಲ್ಲೇ, ಅಂತ್ಯವೂ ಇಲ್ಲೇ ಆಗಬಹುದು ಅಂತ ಬಾಂಬ್ ಸಿಡಿಸಿದ್ರು. ಹಾಗೆ, ನನಗೆ ರಕ್ಷಣೆ ಸಿಗುತ್ತೆ ಅನ್ನೋ ಆಸೆ ಕಳ್ಕೊಂಡಿದ್ದೇನೆ.. ಬ್ಲ್ಯಾಕ್ಮೆಲ್ ತಂತ್ರ ಮಾಡಲ್ಲ ಅಂತಂದ್ರು.

ಇದನ್ನೂ ಓದಿ: ಸಂಧಾನ ಸಭೆ ಸಕ್ಸಸ್; ಸಚಿವ ಆನಂದ್ ಸಿಂಗ್​ ಆನಂದದಲ್ಲಿ ಇನ್ನು ವ್ಯತ್ಯಯವಿಲ್ಲ: ಸಿಎಂ ಬೊಮ್ಮಾಯಿ