R Shankar ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ: ಸಚಿವ R.ಶಂಕರ್ ವಿರುದ್ಧ ಹೈಕೋರ್ಟ್ ಮೊರೆಹೋದ ಕಾಂಗ್ರೆಸ್ ಸದಸ್ಯರು
R Shankar: ಮತದಾರರ ಪಟ್ಟಿಯಲ್ಲಿ ಸಚಿವ R.ಶಂಕರ್ ಹೆಸರು ಎರಡು ಕಡೆ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಹೈಕೋರ್ಟ್ ಮೊರೆಹೋಗಿದ್ದಾರೆ. ಫೆ. 24ರಂದು ಪಾಲಿಕೆಯ ಮೇಯರ್ ಚುನಾವಣೆಯಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಸಚಿವರ ಹೆಸರನ್ನು ಎರಡು ಕಡೆ ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು ಹೈಕೋರ್ಟ್ ಮೊರೆಹೋಗಿದ್ದಾರೆ.
ದಾವಣಗೆರೆ: ಮತದಾರರ ಪಟ್ಟಿಯಲ್ಲಿ ಸಚಿವ R.ಶಂಕರ್ ಹೆಸರು ಎರಡು ಕಡೆ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಹೈಕೋರ್ಟ್ ಮೊರೆಹೋಗಿದ್ದಾರೆ. ಫೆ. 24ರಂದು ಪಾಲಿಕೆಯ ಮೇಯರ್ ಚುನಾವಣೆಯಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಸಚಿವರ ಹೆಸರನ್ನು ಎರಡು ಕಡೆ ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು ಹೈಕೋರ್ಟ್ ಮೊರೆಹೋಗಿದ್ದಾರೆ. ಇದೀಗ, ಫೆಬ್ರವರಿ 17ರಂದು ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.
ಅಂದ ಹಾಗೆ, ಸಚಿವ ಆರ್.ಶಂಕರ್ ಹೆಸರು ರಾಣೆಬೆನ್ನೂರು ನಗರಸಭೆ ಮತದಾರರ ಪಟ್ಟಿಯ ಜೊತೆಗೆ ದಾವಣಗೆರೆ ವಿಳಾಸ ನೀಡಿ ನಗರ ಪಾಲಿಕೆ ಮತದಾರರ ಪಟ್ಟಿಯಲ್ಲೂ ಸೇರ್ಪಡೆ ಮಾಡಲಾಗಿದೆ. ಹಾಗಾಗಿ, ಆರ್.ಶಂಕರ್ ಹೆಸರು ಸೇರ್ಪಡೆ ಪ್ರಶ್ನಿಸಿ ತಕರಾರು ಅರ್ಜಿ ಸಲ್ಲಿಕೆಯಾಗಿದೆ. ಇದೀಗ, ಫೆ.17 ರಂದು ಹೈಕೋರ್ಟ್ ನೀಡುವ ತೀರ್ಪಿನ ಮೇಲೆ ಎಲ್ಲರ ಗಮನ ನೆಟ್ಟಿದೆ.
ಇದನ್ನೂ ಓದಿ: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: 6 ಗಂಟೆ ಸ್ತಬ್ಧವಾದ ಒಡಿಶಾ!