ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ವಿನಯ್ ಕುಲಕರ್ಣಿ ಬಿಡುಗಡೆಗಾಗಿ ಜಿಲ್ಲೆಯ ಮದಿಹಾಳ ಬಡಾವಣೆಯಲ್ಲಿರುವ ಬಲಮುರಿ ಗಣಪತಿ ದೇಗುಲದಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿದರು.
ಸಿಬಿಐನಿಂದ ಬಂಧನಕ್ಕೊಳಗಾಗಿ ಎರಡು ತಿಂಗಳು ಕಳೆದಿದ್ದು, ವಿನಯ್ ಕುಲಕರ್ಣಿ ಸದ್ಯ ಹಿಂಡಲಗಾ ಜೈಲಿನಲ್ಲಿದ್ದಾರೆ. ನಾಳೆ ಧಾರವಾಡ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ಹಿನ್ನೆಲೆ ಜಾಮೀನು ಸಿಗುವಂತೆ ಕಾಂಗ್ರೆಸ್ ಕಾರ್ಯಕರ್ತರು ಹೋಮ ಮಾಡಿಸಿ, ಜೊತೆಗೆ ಮುತ್ತೈದೆಯರಿಗೆ ಉಡಿ ತುಂಬಿ ಪ್ರಾರ್ಥನೆ ಸಲ್ಲಿಸಿದರು.
ಜೈಲಿನಲ್ಲಿ ಸೊಳ್ಳೆ ಕಾಟ ತಾಳಲಾರದೆ ಒದ್ದಾಡಿದ ಮಾಜಿ ಮಿನಿಸ್ಟರ್, ರಾತ್ರಿ ಇಡೀ ನಿದ್ದೆ ಇಲ್ಲವಂತೆ