ಬಸವೇಶ್ವರ ನಡೆದಾಡಿದ ನೆಲದಲ್ಲಿ ಮಿನಿ ಪಾರ್ಲಿಮೆಂಟ್ ನಿರ್ಮಾಣ: ಎಲ್ಲಿ ಗೊತ್ತಾ?

| Updated By: ರಶ್ಮಿ ಕಲ್ಲಕಟ್ಟ

Updated on: Jan 03, 2021 | 11:44 AM

ಜನವರಿ 6 ರಂದು ಮುಖ್ಯಮಂತ್ರಿ ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ. 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಂಟಪ 72 ಎಕರೆಯಲ್ಲಿ , 182 ಅಡಿ ಎತ್ತರವಿರಲಿದೆ.

ಬಸವೇಶ್ವರ ನಡೆದಾಡಿದ ನೆಲದಲ್ಲಿ ಮಿನಿ ಪಾರ್ಲಿಮೆಂಟ್ ನಿರ್ಮಾಣ: ಎಲ್ಲಿ ಗೊತ್ತಾ?
ಬಸವಕಲ್ಯಾಣದಲ್ಲಿ ಸಚಿವ ಪ್ರಭು ಚೌಹಾಣ್
Follow us on

ಬೀದರ್: ಅನುಭವ ಮಂಟಪವನ್ನು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ 2 ವರ್ಷದ ಅವಧಿಯಲ್ಲಿ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿಕೆ ನೀಡಿದ್ದಾರೆ.

ಜನವರಿ 6 ರಂದು ಮುಖ್ಯಮಂತ್ರಿ ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ. 600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಂಟಪ 72 ಎಕರೆಯಲ್ಲಿ , 182 ಅಡಿ ಎತ್ತರವಿರಲಿದೆ. ವಿಶ್ವಗುರು ಬಸವೇಶ್ವರ ನಡೆದಾಡಿದ ನೆಲದಲ್ಲಿ ಮಿನಿ ಪಾರ್ಲಿಮೆಂಟ್ ಆಗುತ್ತಿದ್ದು, ಈ ಅನುಭವ ಮಂಟಪ ನಿರ್ಮಾಣದಿಂದ ಬಸವಕಲ್ಯಾಣ ವಿಶ್ವ ಮಟ್ಟದಲ್ಲಿ ಪರಿಚಯವಾಗಲಿದೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.

ಅನುಭವ ಮಂಟಪ ನಿರ್ಮಾಣಕ್ಕೆ ಸಿದ್ಧತೆ

71ನೇ ಗಣರಾಜ್ಯೋತ್ಸವ ಸಂಭ್ರಮ: ರಾಜ್​ಪಥ್​ನಲ್ಲಿ ರಾರಾಜಿಸಿದ ಅನುಭವ ಮಂಟಪ ಸ್ತಬ್ಧ ಚಿತ್ರ