ಪ್ರೇಮ ಸಂಬಂಧಕ್ಕೆ ವಿರೋಧ: ಯುವತಿಯ ಕುಟುಂಬದವರಿಂದ ಪ್ರಿಯಕರನ ಕೊಲೆ ಶಂಕೆ
ಯುವಕ ಮತ್ತು ಯುವತಿ ಜಿಲ್ಲೆಯ ಶಹಾಪುರ ಗ್ರಾಮದವರಾಗಿದ್ದು, ಕಳೆದ ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರು ಜೊತೆಯಾಗಿ ಶಹಾಪುರದಲ್ಲಿ ಡಿಗ್ರಿ ಓದುತ್ತಿದ್ದರು.
ಯಾದಗಿರಿ: ಪ್ರೀತಿಸುವ ವಿಚಾರ ಯುವತಿ ಮನೆಯಲ್ಲಿ ಗೊತ್ತಾಗಿ ಯುವತಿಯ ಕುಟುಂಬಸ್ಥರು ಪ್ರಿಯಕರನ ಕೊಲೆ ಮಾಡಿದ್ದಾರೆಂಬ ಶಂಕೆ ವ್ಯಕ್ತವಾಗಿದ್ದು, ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಮತ್ತು ಯುವತಿ ಜಿಲ್ಲೆಯ ಶಹಾಪುರ ಗ್ರಾಮದವರಾಗಿದ್ದು, ಕಳೆದ ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರು ಜೊತೆಯಾಗಿ ಶಹಾಪುರದಲ್ಲಿ ಡಿಗ್ರಿ ಓದುತ್ತಿದ್ದರು. ಸಂತೋಷ್ ಎಂಬವನು ವಿಡಿಯೋ ಕಾಲ್ ಮಾಡಿದ್ದಾಗ ಯುವತಿ ಮನೆಯವರಿಗೆ ಪ್ರೀತಿ ವಿಚಾರ ತಿಳಿದಿದೆ. ಹೀಗಾಗಿ ಸಂತೋಷ್ ಎಂಬಾತನಿಗೆ ಬುದ್ಧಿಮಾತು ಹೇಳಲು ಕರೆಸಿದ ಯುವತಿ ಪೋಷಕರು ಹತ್ಯೆಗೈದು, ಶವದ ಪಕ್ಕ ಕ್ರಿಮಿನಾಶಕದ ಬಾಟಲ್ ಇಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಬಿಂಬಿಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರಿ ಬಾಲಕರ ಹಾಸ್ಟೇಲ್ ಹಿಂಬದಿಯಲ್ಲಿ ಶವ ಪತ್ತೆಯಾಗಿದೆ.
ಸ್ತ್ರೀರೋಗ ತಜ್ಞೆ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ.. ಅಶ್ಲೀಲ ವಿಡಿಯೋ ಕಳಿಸಿ ಎಂದ ಕಿರಾತಕರು!