ನೆರೆ ಸಂತ್ರಸ್ತರಿಗೆ ಗುತ್ತಿಗೆದಾರನ ಬರೆ: ಮನೆ ಕಟ್ಟಿಸಿಕೊಡ್ತಿನಿ ಅಂತಾ ಲಕ್ಷಾಂತರ ರೂ. ಪಡೆದು ‘ನಾಟ್​ ರೀಚಬಲ್​’!

ಮನೆ ಕಟ್ಟಿಸಿಕೊಡ್ತಿನಿ ಅಂತಾ ಸಂತ್ರಸ್ತರ ಬಳಿ ಸರ್ಕಾರ ನೀಡಿದ್ದ ಹಣವನ್ನ ಪಡೆದು ಗುತ್ತಿಗೆದಾರ ಕಣ್ಮರೆಯಾಗಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್​ನಲ್ಲಿ ನಡೆದಿದೆ.

ನೆರೆ ಸಂತ್ರಸ್ತರಿಗೆ ಗುತ್ತಿಗೆದಾರನ ಬರೆ: ಮನೆ ಕಟ್ಟಿಸಿಕೊಡ್ತಿನಿ ಅಂತಾ ಲಕ್ಷಾಂತರ ರೂ. ಪಡೆದು ‘ನಾಟ್​ ರೀಚಬಲ್​’!
ಗುತ್ತಿಗೆದಾರ ಅಬ್ದುಲ್ ಹಮೀದ್ (ಎಡ); ಸಂತ್ರಸ್ತ ಮಹಿಳೆ (ಬಲ)
Follow us
KUSHAL V
|

Updated on:Dec 11, 2020 | 12:16 PM

ಚಿಕ್ಕಮಗಳೂರು : ಮನೆ ಕಟ್ಟಿಸಿಕೊಡ್ತಿನಿ ಅಂತಾ ಸಂತ್ರಸ್ತರ ಬಳಿ ಸರ್ಕಾರ ನೀಡಿದ್ದ ಹಣವನ್ನ ಪಡೆದು ಗುತ್ತಿಗೆದಾರ ಕಣ್ಮರೆಯಾಗಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್​ನಲ್ಲಿ ನಡೆದಿದೆ. ಮಳೆಯಲ್ಲಿ ಮನೆಯನ್ನ ಕಳೆದುಕೊಂಡು ಸಂತ್ರಸ್ತರಿಗೆ ಸರ್ಕಾರ ಮನೆ ಕಟ್ಟಿಕೊಡಲು 5 ಲಕ್ಷ ಪರಿಹಾರ ನೀಡೋದಾಗಿ ಹೇಳಿ, ಬಣಕಲ್​ನಲ್ಲಿ ನಿವೇಶನ ನೀಡಿತ್ತು. ಮೂಡಿಗೆರೆ ತಾಲೂಕಿನ ಮಧುಗುಂಡಿ, ದುರ್ಗದಹಳ್ಳಿ, ಹಲಘಟಕ, ಬಿದಿರುತಳ ಸೇರಿದಂತೆ ಕೆಲ ಗ್ರಾಮಗಳ ಸಂತ್ರಸ್ತರು ನಿವೇಶನಗಳನ್ನ ಪಡೆದುಕೊಂಡಿದ್ದರು.

ಹಣ ಪಡೆದ ಗುತ್ತಿಗೆದಾರ ‘ನಾಟ್​ ರೀಚಬಲ್​’ ತಾವು ಪಡೆದಿದ್ದ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಡಲು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕಲ್ಲುಗುಡ್ಡೆಯ ಅಬ್ದುಲ್ ಹಮೀದ್ ಎಂಬುವವರಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ಸಂತ್ರಸ್ತರಿಂದ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡು ಹೋದ ಈ ಪುಣ್ಯಾತ್ಮ, ಇಲ್ಲಿಯವರೆಗೂ ಈ ಕಡೆ ಮುಖ ಹಾಕಿಲ್ಲವಂತೆ. ಅಲ್ಲದೆ, ಅಬ್ದುಲ್ ಹಮೀದ್ ತನ್ನ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿರೋದು ಸಂತ್ರಸ್ತರ ಆತಂಕಕ್ಕೆ ಕಾರಣವಾಗಿದೆ.

40 ಲಕ್ಷಕ್ಕೂ ಅಧಿಕ ಹಣ ಪಡೆದ ಅಸಾಮಿ ಇದೀಗ ನಾಪತ್ತೆಯಂತೆ! 2019ರಲ್ಲಿ ಕಾಫಿನಾಡಿನಲ್ಲಿ ಹಿಂದೆಂದೂ ಕಾಣದಂತಹ ಮಳೆಗೆ ಜನರು ಕಂಗಲಾಗಿ ಹೋಗಿದ್ರು. ಕೆಲ ಕುಗ್ರಾಮದ ಜನರಂತೂ ಮಹಾ ಮಳೆಯಿಂದ ಮನೆ-ಆಸ್ತಿ ಕಳೆದುಕೊಂಡು ಪ್ರಾಣ ಉಳಿಸಿಕೊಂಡಿದ್ದೇ ಹೆಚ್ಚು. ಆ ವೇಳೆ, ಕಾಳಜಿ ಕೇಂದ್ರಗಳನ್ನ ತೆರೆದ ಸರ್ಕಾರ, ಒಂದೆರಡು ತಿಂಗಳು ಆಶ್ರಯವೇನೋ ಕೊಡ್ತು.

ಕೊನೆಗೆ, ಮಳೆ ಬಿಡುತ್ತಲೇ ಅವರೆಲ್ಲರನ್ನ ಊರಿಗೆ ಕಳುಹಿಸಿದ ಸರ್ಕಾರ, 5 ಲಕ್ಷ ಹಣವನ್ನ ಕಂತಿನಲ್ಲಿ ಕೊಟ್ಟು ಮನೆ ನಿರ್ಮಿಸಿಕೊಳ್ಳುವಂತೆ ಸೂಚಿಸಿತ್ತು. ಮನೆ ನಿರ್ಮಿಸಿಕೊಡ್ತೀನಿ ಅಂತಾ ಸಂತ್ರಸ್ತರ ಬಳಿ ಹಣ ಪಡೆದ ಗುತ್ತಿಗೆದಾರ ಹಮೀದ್ ಸದ್ಯ ಕಾಣೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಬರೋಬ್ಬರಿ 20ಕ್ಕೂ ಹೆಚ್ಚು ಸಂತ್ರಸ್ತರಿಂದ 40 ಲಕ್ಷಕ್ಕೂ ಅಧಿಕ ಹಣ ಪಡೆದ ಅಸಾಮಿ ಇದೀಗ ನಾಪತ್ತೆಯಂತೆ!

ಸಂತ್ರಸ್ತರ ಗೋಳು ನೂರಾರು ಕಳೆದ 6 ತಿಂಗಳಿಂದ ಹಣ ತೆಗೆದುಕೊಂಡ ಹೋದವನ ಸುಳಿವಿಲ್ಲ. ಸಂತ್ರಸ್ತರು ಪ್ರತಿನಿತ್ಯ ಆಟೋ ಮಾಡಿಕೊಂಡು ನಿವೇಶನದತ್ತ ಬರೋದು, ಹೋಗೋದು ಮಾತ್ರ ಮಾಡ್ತಿದ್ದಾರೆ. ಕೆಲವು ಸಂತ್ರಸ್ತರ ನಿವೇಶನಗಳಲ್ಲಿ ಅಡಿಪಾಯ ಹಾಕಿದ್ರೂ, ಆ ಫೌಂಡೇಶನ್ ಈಗಾಗ್ಲೇ ಅರ್ಧ ಅಡಿಯಷ್ಟು ಕುಸಿದಿರೋದು ಸಂತ್ರಸ್ತರಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿದೆ. ಹಾಗಾಗಿ, ಸಂತ್ರಸ್ತರು ಅಕ್ಷರಶಃ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಇನ್ನು ಕಂತಿನಲ್ಲಿ ಹಣ ಕೊಟ್ಟು ಕೈತೊಳೆದುಕೊಂಡಿರೋ ಸರ್ಕಾರವಾಗಲಿ, ಅಧಿಕಾರಗಳಾಗಲಿ ಈ ಬಗ್ಗೆ ತಲೆಕೆಡಿಸಿಕೊಳ್ತಿಲ್ಲ. ಇದೀಗ, ದುಡ್ಡು ಕೊಟ್ಟು ಮೋಸ ಹೋಗಿರೋ ಸಂತ್ರಸ್ತರು ಹೇಗಾದ್ರೂ ಮಾಡಿ ನಮ್ಮ ದುಡ್ಡನ್ನ ನಮಗೆ ವಾಪಸ್​ ಕೊಡಿಸಿ ಅಂತಾ ಅಲವತ್ತುಕೊಳ್ತಿದ್ದಾರೆ.

ಮೊದಲೇ ಮನೆ, ಮಠ ಕಳೆದುಕೊಂಡು ಕಂಗಲಾಗಿದ್ದ ಸಂತ್ರಸ್ತರು ಇದೀಗ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿ ನೋವು ಅನುಭವಿಸುತ್ತಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನಾಪತ್ತೆಯಾಗಿರೋ ಅಸಾಮಿಯನ್ನ ಕರೆತಂದು ಸಂತ್ರಸ್ತರ ಸೂರುಗಳನ್ನು ಸುಸೂತ್ರವಾಗಿ ಕಟ್ಟಿಸಿಕೊಡಲು ನೆರವಾಗಬೇಕಿದೆ. -ಪ್ರಶಾಂತ್

ವೈದ್ಯನ ಕೈಗುಣ ಚೆನ್ನಾಗಿದೆ ಅಂತಾ.. ಕ್ಲಿನಿಕ್​ ಎದುರು ಸಾಲುಗಟ್ಟಿ ನಿಲ್ತಿದ್ದ ರೋಗಿಗಳಿಗೆ ಸಿಕ್ತು ದೊಡ್ಡ ಶಾಕ್​!

Published On - 11:47 am, Fri, 11 December 20

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ