ತನಿಷ್ಕ್ ಜ್ಯೂವೆಲ್ಸ್​ನಲ್ಲಿ 1.30 ಕೋಟಿ ಮೌಲ್ಯದ ಚಿನ್ನ ದೋಚಿದ್ದ ಖದೀಮರು ಅಂದರ್.. ಆದ್ರೆ ಸಿಕ್ಕಿದ್ದು ಮಾತ್ರ..

| Updated By: KUSHAL V

Updated on: Dec 07, 2020 | 2:04 PM

ಆರೋಪಿಗಳು ಕಳೆದ ಜೂನ್ 19ರಂದು ಅಂಗಡಿಯಲ್ಲಿ ನಕಲಿ ಚಿನ್ನಾಭರಣಗಳನ್ನು ಇಟ್ಟು ಅದರ ಬದಲಿಗೆ 2.470 ಕೆ.ಜಿ ಅಸಲಿ ಚಿನ್ನವನ್ನು ದೋಚಿ ಪರಾರಿಯಾಗಿದ್ದರು. ಸದ್ಯ, ಬಂಧಿತರಿಂದ 1.854 ಕೆ.ಜಿ ಚಿನ್ನಾಭರಣ ಹಾಗೂ 4,05,000 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

ತನಿಷ್ಕ್ ಜ್ಯೂವೆಲ್ಸ್​ನಲ್ಲಿ 1.30 ಕೋಟಿ ಮೌಲ್ಯದ ಚಿನ್ನ ದೋಚಿದ್ದ ಖದೀಮರು ಅಂದರ್.. ಆದ್ರೆ ಸಿಕ್ಕಿದ್ದು ಮಾತ್ರ..
ಖಾಕಿಗಳ ಭರ್ಜರಿ ಕಾರ್ಯಾಚರಣೆ
Follow us on

ತುಮಕೂರು: ಜೂನ್ 19 ರಂದು ನಗರದಲ್ಲಿ ನಡೆದಿದ್ದ ತನಿಷ್ಕ್​ ಜ್ಯೂವೆಲ್ಸ್​ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆಭರಣ ಮಳಿಗೆಯ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಂಗಡಿ ಮಾಲೀಕ ಪ್ರಕಾಶ್ ಕುಮಾರ್ ನೀಡಿದ್ದ ದೂರಿನನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿದ್ದಾರೆ

ತನಿಷ್ಕ್ ಜ್ಯೂವೆಲ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೇರಿ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಆದಿಲ್, ರಿತೇಶ್ ಕುರುಪ್, ಮಹೇಶ್, ಮೀನಾಕ್ಷಿ ಹಾಗೂ ರುಕ್ಸಾನಾ ಬಂಧಿತ ಆರೋಪಿಗಳು.

ಆರೋಪಿಗಳು ಕಳೆದ ಜೂನ್ 19ರಂದು ಅಂಗಡಿಯಲ್ಲಿ ನಕಲಿ ಚಿನ್ನಾಭರಣಗಳನ್ನು ಇಟ್ಟು ಅದರ ಬದಲಿಗೆ 2.470 ಕೆ.ಜಿ ಅಸಲಿ ಚಿನ್ನವನ್ನು ದೋಚಿ ಪರಾರಿಯಾಗಿದ್ದರು. ಸದ್ಯ, ಬಂಧಿತರಿಂದ 1.854 ಕೆ.ಜಿ ಚಿನ್ನಾಭರಣ ಹಾಗೂ 4,05,000 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

ಖದೀಮರು ಅಂದಾಜು 1.30 ಕೋಟಿ ರೂಪಾಯಿ ಬೆಲೆಬಾಳುವ ಚಿನ್ನಾಭರಣವನ್ನು ದೋಚಿದ್ದರು ಎಂದು ಹೇಳಲಾಗಿದೆ. ಚಿನ್ನಾಭರಣದ ಆಡಿಟ್ ನಡೆಸಿದಾಗ ಕಳುವು ಬಯಲಾಗಿತ್ತು.

ಬಳ್ಳಾರಿ: ಕಡಿಮೆ ಬೆಲೆಗೆ ಚಿನ್ನ ಸಿಗುತ್ತೆ ಅಂತಾ.. ಆಸೆ ಬಿದ್ದು ಬಂದವರಿಗೆ ಸಿಕ್ಕಿದ್ದು ಮಾತ್ರ ಸಿಕ್ಕಾಪಟ್ಟೆ ಗೂಸಾ

ಅಸಲಿ ಚಿನ್ನ ತೋರಿಸಿ ನಕಲಿ ಚಿನ್ನ ನೀಡಿದ ಐನಾತಿ ಕಳ್ಳರ ಬಂಧನ, ಎಲ್ಲಿ?

Published On - 2:02 pm, Mon, 7 December 20