ಬೆಂಗಳೂರು: ರಾಜ್ಯ ಕೋವಿಡ್ ತಜ್ಞರ ಸಮಿತಿಯೇ ಹೇಳಿದ್ರು ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿದೆಯೇ ಎಂಬ ಅನುಮಾನ ತಲೆದೋರಿದೆ. ಸರ್ಕಾರ ರಚಿಸಿದ 14 ಜನ ತಜ್ಞರ ಸಮಿತಿ ಮಾರ್ಚ್ 19 ರಂದೇ ಅಪಾರ್ಟ್ಮೆಟ್ಗಳ ಪಾರ್ಟಿ ಹಾಲ್, ರೀಡಿಂಗ್ ರೂಮ್, ಜಿಮ್,ಇಂಡೋರ್ ಸ್ಪೋರ್ಟ್ಸ್,ಸ್ವಿಮಿಂಗ್ ಪೂಲ್ ಸೇರಿದಂತೆ ಉಳಿದ ಪ್ರದೇಶಗಳನ್ನು ಸ್ಥಗಿತಗೊಳಿಸಲು ಸಲಹೆ ನೀಡಿದೆ. ಎಲ್ಲಾ ಬಗೆಯ ಜಿಮ್ಗಳನ್ನು ಕ್ಲೋಸ್ ಮಾಡುವಂತೆ ಸೂಚಿಸಿದೆ. ಅಲ್ಲದೇ ಬಹು ಮುಖ್ಯವಾಗಿ ಸಿನಿಮಾ ಮಂದಿರಗಳಲ್ಲಿ ಶೇ 50 ರಷ್ಟು ಮಾತ್ರ ಪ್ರವೇಶ ನೀಡುವಂತೆ ಎಚ್ಚರಿಕೆ ನೀಡಿದೆ. 10ನೇ ತರಗತಿ, 12 ನೇ ತರಗತಿ, ಡಿಗ್ರಿ ಕಾಲೇಜುಗಳನ್ನು ಸ್ಥಗಿತಗೊಳಿಸಲು ಸೂಚನೆ ನೀಡಿದ್ದು, ಮೆಡಿಕಲ್ ವಿದ್ಯಾರ್ಥಿಗಳನ್ನ ಹೊರತುಪಡಿಸಿ ಉಳಿದವರಿಗೆ ಆನ್ಲೈನ್ ಕ್ಲಾಸ್ ಶುರುಮಾಡುವಂತೆ ತಿಳಿಸಿದೆ. ಸಾವು,ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಕೇವಲ 20 ಜನರಿಗೆ ಅವಕಾಶ ನೀಡಬೇಕು. ಒಳಾಂಗಣ ಕಾರ್ಯಕ್ರಮ, ಮದುವೆಯಂತಹ ಸಮಾರಂಭಗಳಿಗೆ 100 ಜನರಿಗೆ ಅವಕಾಶ, ತೆರೆದ ಆವರಣದ ಸಮಾರಂಭವಾದರೆ 200 ಜನರಿಗೆ ಅವಕಾಶ ನೀಡಬೇಕು ಎಂದು ತಜ್ಞರ ಸಮಿತಿ ಮಾರ್ಚ್ 19ರಂದೇ ತಿಳಿಸಿದೆ. ಆದರೆ ತಜ್ಞರ ಮಿತಿಯ ಈ ಸಲಹೆಗಳು ಜಾರಿಗೆ ಬರದಿರುವುದು ಕೊರೊನಾ ಕುರಿತು ಸರ್ಕಾರವೇ ನಿರ್ಲಕ್ಷ್ಯ ತೋರಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
Published On - 6:18 pm, Thu, 25 March 21