ಲಾಕ್ಡೌನ್ ಎಫೆಕ್ಟ್; ಮೇ ತಿಂಗಳಲ್ಲಿ ಕುಸಿತ ಕಂಡ ಮದ್ಯ ಮಾರಾಟ

|

Updated on: May 30, 2021 | 2:43 PM

ಕೊರೊನಾ ಲಾಕ್ಡೌನ್ನಿಂದಾಗಿ ಮೇ ತಿಂಗಳಲ್ಲಿ ಅಬಕಾರಿ ಇಲಾಖೆ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಮದ್ಯ ಮಾರಾಟ ಕುಸಿತ ಕಂಡಿದೆ ಎಂಬ ಮಾಹಿತಿ ಸಿಕ್ಕಿದೆ. ಅದರಲ್ಲೂ ಬಿಯರ್ ಮಾರಾಟ ರಾಜ್ಯದಲ್ಲಿ ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ.

ಲಾಕ್ಡೌನ್ ಎಫೆಕ್ಟ್; ಮೇ ತಿಂಗಳಲ್ಲಿ ಕುಸಿತ ಕಂಡ ಮದ್ಯ ಮಾರಾಟ
ಸಂಗ್ರಹ ಚಿತ್ರ
Follow us on

ಬೆಂಗಳೂರು: ಮಹಾಮಾರಿ ಕೊರೊನಾದಿಂದ ರಾಜ್ಯದಲ್ಲಿ ಮದ್ಯ ಮಾರಾಟ ಕುಸಿದಿದೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಲಾಕ್‌ಡೌನ್ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಲಾಕ್ಡೌನ್ನಿಂದ ರಾಜ್ಯ ಸರ್ಕಾರದ ಆದಾಯ ನೆಲಕಚ್ಚಿದೆ.

ಕೊರೊನಾ ಲಾಕ್ಡೌನ್ನಿಂದಾಗಿ ಮೇ ತಿಂಗಳಲ್ಲಿ ಅಬಕಾರಿ ಇಲಾಖೆ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಮದ್ಯ ಮಾರಾಟ ಕುಸಿತ ಕಂಡಿದೆ ಎಂಬ ಮಾಹಿತಿ ಸಿಕ್ಕಿದೆ. ಅದರಲ್ಲೂ ಬಿಯರ್ ಮಾರಾಟ ರಾಜ್ಯದಲ್ಲಿ ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ. ಲಾಕ್ಡೌನ್ ವೇಳೆ ಪಾರ್ಸೆಲ್ಗೆ ಅವಕಾಶ ನೀಡಿದ್ರು ರಾಜ್ಯದಲ್ಲಿ ಮದ್ಯ ಮಾರಾಟ ಕುಸಿದಿದೆ. ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಈ ಬಾರಿ ಕಡಿಮೆ ಆದಾಯ ಬಂದಿದೆ.

ಮೇ ತಿಂಗಳ ಆದಾಯವೆಷ್ಟು?
ಮೇ ತಿಂಗಳಲ್ಲಿ ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಕೇವಲ 1388.16 ಕೋಟಿ ರೂ. ಆದಾಯ ಬಂದಿದೆ. ಏಪ್ರಿಲ್‌ನಲ್ಲಿ 3593.82 ಕೋಟಿ ರೂ. ಆದಾಯ ಬಂದಿತ್ತು. ಕಳೆದ ತಿಂಗಳಿಗೆ ಹೋಲಿಕೆ ಮಾಡಿದ್ರೆ ಈ ತಿಂಗಳು 2,205 ಕೋಟಿ ನಷವಾಗಿದೆ. ಅಂದ್ರೆ ರಾಜ್ಯದಲ್ಲಿ ಮದ್ಯ ಮಾರಾಟ ಅರ್ಧದಷ್ಟು ಕುಸಿತ ಕಂಡಿದೆ. ಮೇ3 ರಿಂದ ಮೇ 29ರ ವರೆಗೆ ರಾಜ್ಯದಲ್ಲಿ ಐಎಂಎಲ್ ಸೇಲ್ ಆಗಿರೋದು 39.50 ಲಕ್ಷ ಬಾಕ್ಸ್. ಮೇ ತಿಂಗಳಲ್ಲಿ ಬಿಯರ್ ಮಾರಾಟ ಆಗಿರೋದು ಕೇವಲ 6.88 ಲಕ್ಷ ಬಾಕ್ಸ್. ಏಪ್ರಿಲ್ ತಿಂಗಳಲ್ಲಿ ಐಎಂಎಲ್ 39.50 ಲಕ್ಷ ಬಾಕ್ಸ್. ಬಿಯರ್ 32.60 ಲಕ್ಷ ಬಾಕ್ಸ್ ಸೇಲ್ ಆಗಿತ್ತು. ರಾಜ್ಯದಲ್ಲಿ ಲಾಕ್ಡೌನ್ ಅವಧಿಯಲ್ಲಿ ಬಿಯರ್ ಮಾರಾಟ ಭಾರಿ ಕುಸಿತ ಕಂಡಿದೆ.

ಮದ್ಯ ಮಾರಾಟ ಕುಸಿತಕ್ಕೆ ಕಾರಣವೇನು?
ಬೆಳಗ್ಗೆ 6 ರಿಂದ 10 ವರಿಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಬಿಯರ್ ಖರೀದಿಸಿ ಮನೆಯಲ್ಲಿ ಸ್ಟಾಕ್ ಇಡಲು ಆಗುವುದಿಲ್ಲ. ಕೆಲವರ ಮನೆಯಲ್ಲಿ ಪ್ರಿಡ್ಜ್ ಇರುವುದಿಲ್ಲ. ಲಾಕ್ಡೌನ್ ಅವಧಿಯಲ್ಲಿ ಪಾರ್ಟಿ ಮೋಜು ಮಸ್ತಿಗೆ ಬ್ರೇಕ್ ಹಾಕಲಾಗಿತ್ತು. ಬಾರ್ ಅಂಡ್ ರೆಸ್ಟೋರೆಂಟ್ನಲ್ಲೂ ಮದ್ಯದ ಸೇವನೆಗೆ ಅವಕಾಶವಿರಲಿಲ್ಲ. ಹೀಗಾಗಿ ರಾಜ್ಯದಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ ಕಂಡಿದೆ. ಇನ್ನು ಬಿಯರ್ಕ್ಕಿಂತ ಐಎಂಎಲ್ ವಹಿವಾಟು ಜಾಸ್ತಿಯಾಗಿದೆ.

ಇದನ್ನೂ ಓದಿ: ಮದ್ಯಪಾನ ಏನು ಪರಿಣಾಮ ಬೀರುತ್ತದೆ? ಕುಡಿದ ಮೇಲೆ ದೇಹದೊಳಗೆ ಏನಾಗುತ್ತದೆ?