ಮದ್ಯಪಾನ ಏನು ಪರಿಣಾಮ ಬೀರುತ್ತದೆ? ಕುಡಿದ ಮೇಲೆ ದೇಹದೊಳಗೆ ಏನಾಗುತ್ತದೆ?

ಮದ್ಯಪಾನದಿಂದಾಗಿ ಬಹುತೇಕ ಜನರಿಗೆ ಕಾಡುವ ಸಮಸ್ಯೆ ಎಂದರೆ ಅದು ಲಿವರ್​ನದ್ದು. ಹೆಚ್ಚು ಕುಡಿತದ ಅಭ್ಯಾಸ ಹೊಂದಿರುವ ವ್ಯಕ್ತಿಗೆ ಲಿವರ್ ಸಮಸ್ಯೆ ಕಂಡುಬರಬಹುದು.

ಮದ್ಯಪಾನ ಏನು ಪರಿಣಾಮ ಬೀರುತ್ತದೆ? ಕುಡಿದ ಮೇಲೆ ದೇಹದೊಳಗೆ ಏನಾಗುತ್ತದೆ?
ಮದ್ಯಪಾನ
Follow us
TV9 Web
| Updated By: ganapathi bhat

Updated on:Aug 14, 2021 | 1:09 PM

ಮದ್ಯಪಾನ ಸೇವನೆಯ ಅನುಭವ ಎಲ್ಲರಿಗೂ ಇರಲಾರದು. ಆದರೆ, ಮದ್ಯಪಾನ ಮಾಡಿದವರನ್ನು ನೋಡಿಯಂತೂ ಗೊತ್ತಿರುತ್ತದೆ. ಕುಡಿತದ ಬಳಿಕ ಅವರಲ್ಲಾಗುವ ಬದಲಾವಣೆ, ಅದರ ಪರಿಣಾಮ, ಪ್ರಭಾವ ಇತ್ಯಾದಿ ತಿಳಿದೇ ಇರುತ್ತದೆ. ಒಬ್ಬ ವ್ಯಕ್ತಿ ಮದ್ಯಪಾನ ಮಾಡಿದಾಗ ಸ್ವಲ್ಪ ಹೊತ್ತಿನವರೆಗೆ ಏನೂ ಆಗುವುದಿಲ್ಲ. ಕೆಲ ಹೊತ್ತಿನ ಬಳಿಕ ಧ್ವನಿಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ನಡೆಯಲೂ ಕಷ್ಟವಾಗುವುದು ಆಗುತ್ತದೆ. ತನ್ನ ದೇಹದ ಮೇಲೆ ಸ್ಥಿಮಿತ ತಪ್ಪಿ ಹೋಗುತ್ತದೆ. ಹೀಗೇಕಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಮಧ್ಯಪಾನ ದೇಹದಲ್ಲಿ ಏನು ಮಾಡುತ್ತದೆ ಎಂದು ಗೊತ್ತಿದೆಯೇ? ದೇಹದ ಯಾವ ಅಂಗಕ್ಕೆ ಹೆಚ್ಚು ಹಾನಿ ಮಾಡುತ್ತದೆ? ಇಲ್ಲಿದೆ ವಿವರ.

ನೀವು ಮದ್ಯಪಾನ ಮಾಡಿ, ಅದು ದೇಹದ ಒಳಕ್ಕೆ ಪ್ರವೇಶ ಪಡೆದಾಗ ಪರಿಣಾಮ ಬೀರಲು ಆರಂಭವಾಗುತ್ತದೆ. ಮೊದಲು ಹೊಟ್ಟೆಯೊಳಕ್ಕೆ ಸೇರುವ ಮಧ್ಯ ಗ್ಯಾಸ್ಟ್ರಿಕ್ ಅಂಶವನ್ನು ಸೃಷ್ಟಿಸುತ್ತದೆ. ಬಳಿಕ, ಕರುಳು ಮಧ್ಯವನ್ನು ಹೀರಿಕೊಳ್ಳುತ್ತದೆ. ಆ ಮೂಲಕವಾಗಿ ಲಿವರ್​ನ್ನು ಸೇರುತ್ತದೆ.

ಒಂದು ವರದಿಯ ಪ್ರಕಾರ, ಲಿವರ್ ಬಹುತೇಕ ಮದ್ಯದ ಅಂಶವನ್ನು ಕಡಿಮೆ ಅಥವಾ ನಾಶ ಮಾಡುತ್ತದೆ. ಹಾಗೂ ಲಿವರ್​ಗೆ ನಾಶ ಮಾಡಲು ಸಾಧ್ಯವಾಗದೇ ಉಳಿದ ಮದ್ಯದ ಅಂಶವು ಮೆದುಳನ್ನು ತಲುಪುತ್ತದೆ. ಈ ವೇಳೆಗೆ ಮದ್ಯಪಾನವು ದೇಹದ ಮೇಲೆ ಪರಿಣಾಮ ಬೀರಲು ಶುರುವಾಗುತ್ತದೆ. ಮದ್ಯವು ಮೆದುಳಿನ ಮೂಲಕ ನರಗಳ ಮೇಲೆ ಪರಿಣಾಮ ಬೀರುತ್ತದೆ. ಅದರಿಂದಾಗಿ ಮೆದುಳಿನ ಕಣಗಳ ಕೆಲಸ ನಿಧಾನವಾಗುತ್ತದೆ ಹಾಗೂ ದೇಹದ ಮೇಲೆಯೂ ಪರಿಣಾಮ ಹೆಚ್ಚಾಗುತ್ತದೆ. ದೇಹದ ಮೇಲೆ ಹಿಡಿತವನ್ನೇ ಕಳೆದುಕೊಳ್ಳುವಂತೆಯೂ ಮಾಡುತ್ತದೆ.

ಮದ್ಯಪಾನದಿಂದಾಗಿ ಬಹುತೇಕ ಜನರಿಗೆ ಕಾಡುವ ಸಮಸ್ಯೆ ಎಂದರೆ ಅದು ಲಿವರ್​ನದ್ದು. ಹೆಚ್ಚು ಕುಡಿತದ ಅಭ್ಯಾಸ ಹೊಂದಿರುವ ವ್ಯಕ್ತಿಗೆ ಲಿವರ್ ಸಮಸ್ಯೆ ಕಂಡುಬರಬಹುದು. ಹಾಗೆಂದು ಲಿವರ್ ಸಮಸ್ಯೆಯು ನೋವು ಮುಂತಾದ ಸೂಚನೆಗಳ ಮೂಲಕ ತಿಳಿದುಬರುವುದಿಲ್ಲ. ಬದಲಾಗಿ, ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡಾಗ ತಿಳಿದುಬರಬಹುದು. ಹಾಗಾಗಿ, ಅತಿಯಾಗಿ ಮದ್ಯಪಾನ ಸೇವನೆ ಮಾಡುವುದು ಲಿವರ್ ಸಮಸ್ಯೆಗೆ ಕಾರಣವಾಗಬಹುದು.

ಕುಡಿತದ ನಂತರ ಮತ್ತೆ ಸಹಜ ಸ್ಥಿತಿಗೆ ಬರುವುದು ಹೇಗೆ? ಕುಡಿತ ಮುಗಿಸಿದ ನಂತರ ಸ್ವಲ್ಪ ಸ್ವಲ್ಪವೇ ಅದರ ಪರಿಣಾಮವೂ ಇಳಿಕೆಯಾಗುತ್ತದೆ. ಮಾತು, ನಡತೆಯನ್ನು ನಿಯಂತ್ರಿಸುವ ಮೆದುಳಿನ ಭಾಗದಿಂದ ಮದ್ಯದ ಪರಿಣಾಮ ಕಡಿಮೆ ಆಗುತ್ತಾ ಬರುತ್ತದೆ. ಸುಮಾರು 8ರಿಂದ 10 ಗಂಟೆಯವರೆಗೂ ಕುಡಿತದ ಪ್ರಭಾವ ಕಂಡುಬರಬಹುದು. ಆ ಬಳಿಕ, ವ್ಯಕ್ತಿ ಸರಿಯಾಗಿ ಮಾತನಾಡಲು, ನಡೆಯಲು ತೊಡಗುತ್ತಾನೆ. ಕುಡಿತವನ್ನು ಪರಿಪೂರ್ಣವಾಗಿ ಬಿಟ್ಟಮೇಲೆ ಮೆದುಳು ಸಹಜಸ್ಥಿತಿಗೆ ಬರುತ್ತದೆ. ಹೊಟ್ಟೆ ಸರಿಯಾಗಲು 2 ತಿಂಗಳು ಬೇಕಾಗುವ ಸಂಭವವೂ ಇದೆ. ಆದರೆ, ಲಿವರ್​ಗೆ ಮಾತ್ರ ಸಮರ್ಪಕವಾಗಿ ಕೆಲಸ ಮಾಡಲು ಬಹಳಷ್ಟು ಸಮಯ ಬೇಕಾಗಬಹುದು ಅಥವಾ ಮತ್ತೆ ಮೊದಲಿನಂತೆ ಆಗುವುದು ಸಾಧ್ಯವೇ ಇಲ್ಲ ಎನ್ನಬಹುದು.

ಇದನ್ನೂ ಓದಿ: ಡಾಬಾದಲ್ಲಿ ಮದ್ಯಪಾನ, ಯುವತಿಯರ ಜೊತೆ ಅಸಭ್ಯ ವರ್ತನೆ: ಬಿಜೆಪಿ ತಾಲೂಕು ಅಧ್ಯಕ್ಷನ ವಿಡಿಯೋ ವೈರಲ್

Health Tips: ಗೋಡಂಬಿ ಸೇವನೆಯಿಂದ ಉತ್ತಮ ಅರೋಗ್ಯ; ನಿಯಮಿತವಾಗಿ ಬಳಸಿ ಕಾಯಿಲೆಗಳಿಂದ ದೂರವಿರಿ

Published On - 4:16 pm, Sat, 29 May 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ