ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ; ಕೇಂದ್ರ ಸಚಿವ ಡಿ.ವಿ.ಸದಾನಂದಗೌಡಗೆ ಮುತ್ತಿಗೆ
ಚೋಳನಾಯಕನಲ್ಲಿಹಳಿ ಬಿಬಿಎಂಪಿ ಸಹಯೋಗದೊಂದಿಗೆ 100 ಹಾಸಿಗೆ ಆಸ್ಪತ್ರೆ ನಿರ್ಮಾಣ ಮಾಡಲಾಗಿತ್ತು. ಆಸ್ಪತ್ರೆ ನಿರ್ಮಾಣಕ್ಕೆ ಭೈರತಿ ಸುರೇಶ್ 70 ಲಕ್ಷ ರೂ. ಮತ್ತು ಬಿಬಿಎಂಪಿ 30 ಲಕ್ಷ ರೂ. ನೀಡಿತ್ತು. ಆಸ್ಪತ್ರೆಯಲ್ಲಿ ರಾಜೀವ್ ಗಾಂಧಿ ಫೋಟೋ ಅಳವಡಿಕೆಯ ಬಗ್ಗೆ ದೂರು ಬಂದಿತ್ತು.
ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡಗೆ ಮುತ್ತಿಗೆ ಹಾಕಿದ್ದಾರೆ. ಈ ಘಟನೆ ಬೆಂಗಳೂರಿನ ಚೋಳನಾಯಕನಹಳ್ಳಿಯಲ್ಲಿ ನಡೆದಿದೆ. ಸಚಿವ ಡಿ.ವಿ.ಸದಾನಂದಗೌಡರ ಜೊತೆಗೆ ಎಂಎಲ್ಸಿ ನಾರಾಯಣಸ್ವಾಮಿಗೂ ಮುತ್ತಿಗೆ ಹಾಕಿದ್ದಾರೆ.
ಚೋಳನಾಯಕನಹಳ್ಳಿಯಲ್ಲಿ ಬಿಬಿಎಂಪಿ ಸಹಯೋಗದೊಂದಿಗೆ 100 ಹಾಸಿಗೆ ಆಸ್ಪತ್ರೆ ನಿರ್ಮಾಣ ಮಾಡಲಾಗಿತ್ತು. ಆಸ್ಪತ್ರೆ ನಿರ್ಮಾಣಕ್ಕೆ ಭೈರತಿ ಸುರೇಶ್ 70 ಲಕ್ಷ ರೂ. ಮತ್ತು ಬಿಬಿಎಂಪಿ 30 ಲಕ್ಷ ರೂ. ನೀಡಿದೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯಲ್ಲಿ ರಾಜೀವ್ ಗಾಂಧಿ ಫೋಟೋ ಅಳವಡಿಕೆಯ ಬಗ್ಗೆ ದೂರು ಬಂದ ಹಿನ್ನೆಲೆ ಸದಾನಂದಗೌಡ, ನಾರಾಯಣಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ.
ಬಿಬಿಎಂಪಿಯಿಂದ ಆಸ್ಪತ್ರೆಗೆ ಯಾವುದೇ ಹಣ ಬಂದಿಲ್ಲ. ಭೈರತಿ ಸುರೇಶ್ ಸ್ವಂತ ಖರ್ಚಿನಲ್ಲಿ ಆಸ್ಪತ್ರೆ ನಿರ್ಮಿಸಿದ್ದಾರೆ. ಹೀಗಾಗಿ ರಾಜೀವ್ ಗಾಂಧಿ ಫೋಟೋ ಅಳವಡಿಸಲಾಗಿದೆ. ಇದರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸ್ಥಳಕ್ಕೆ ಬಂದ ಸದಾನಂದಗೌಡ ವಿರುದ್ಧ ಕೈ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಡಿ.ವಿ.ಸದಾನಂದಗೌಡ ಗೌರವ್ ಗುಪ್ತಾಗೆ ಕರೆ ಮಾಡಿದ್ದರು. ಹೀಗಾಗಿ ಕಾರ್ಯಕರ್ತರು ಮತ್ತಷ್ಟು ಆಕ್ರೋಶ ಹೊರಹಾಕಿದರು. ಬಿಬಿಎಂಪಿ ಆಸ್ಪತ್ರೆಗಾಗಿ ಒಂದು ಪೈಸೆಯನ್ನೂ ಕೊಟ್ಟಿಲ್ಲ. ಕೇವಲ 30 ಲಕ್ಷ ಕೊಡುವುದಾಗಿ ಘೋಷಣೆ ಮಾಡಿದೆ. ಕೇವಲ ಘೋಷಣೆ ಮಾಡಿ ಸುಮ್ಮನಾಗಿದೆ ಎಂದು ಕಿಡಿ ಕಾರಿದ್ದಾರೆ.
ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಎಲ್ಕೆಜಿಯಿಂದ ಇಂಜಿನಿಯರಿಂಗ್ವರೆಗೂ ಉಚಿತ ಶಿಕ್ಷಣ: ಶ್ರೀ ಸಿದ್ಧರಾಮ ಸ್ವಾಮೀಜಿ
(Riots between BJP and Congress activists and Congress workers have besieged Sadananda Gowda in Bengaluru)
Published On - 1:30 pm, Sun, 30 May 21