AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಮೇಲೂ ಲಸಿಕೆಯ ಪ್ರಯೋಗ ನಡೆಯುತ್ತಿದೆ, ಎಲ್ಲರಿಗೂ ಲಸಿಕೆ ಸಿಗುವವರೆಗೂ ಮಾಸ್ಕ್ ಕಡ್ಡಾಯ; ಸಚಿವ ಡಾ.ಕೆ.ಸುಧಾಕರ್ ಮನವಿ

ಎಲ್ಲರೂ 2 ಡೋಸ್ ಕೊರೊನಾ ಲಸಿಕೆ ಪಡೆಯಬೇಕು. ಅಲ್ಲಿಯವರೆಗೂ ಈ ಕೊರೊನಾ ಮುಂದುವರಿಯಲಿದೆ. ಕೊವಿಡ್ ಲಸಿಕೆಯನ್ನು ಎಲ್ಲರಿಗೂ ಪೂರೈಸಲಾಗುವುದು. ಮಕ್ಕಳ ಮೇಲೂ ಲಸಿಕೆಯ ಪ್ರಯೋಗ ನಡೆಯುತ್ತಿದೆ. ಫಲಿತಾಂಶ ನೋಡಿಕೊಂಡು ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ.

ಮಕ್ಕಳ ಮೇಲೂ ಲಸಿಕೆಯ ಪ್ರಯೋಗ ನಡೆಯುತ್ತಿದೆ, ಎಲ್ಲರಿಗೂ ಲಸಿಕೆ ಸಿಗುವವರೆಗೂ ಮಾಸ್ಕ್ ಕಡ್ಡಾಯ; ಸಚಿವ ಡಾ.ಕೆ.ಸುಧಾಕರ್ ಮನವಿ
ಡಾ.ಕೆ. ಸುಧಾಕರ್​
sandhya thejappa
|

Updated on: May 30, 2021 | 12:45 PM

Share

ಬೆಂಗಳೂರು: ಲಾಕ್​ಡೌನ್​ ಮುಂದುವರೆಸುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸುತ್ತಾರೆ ಎಂದು ತಿಳಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಶೇ.14ರಿಂದ 15ರಷ್ಟು ಕೊವಿಡ್ ಪಾಸಿಟಿವಿಟಿ ಇದೆ. 15 ದಿನಗಳ ಅಂತರದಲ್ಲಿ ಪಾಸಿಟಿವಿಟಿ ಕಡಿಮೆಯಾಗಿದೆ. ಕೆಲವು ರಾಜ್ಯಗಳಲ್ಲಿ ಕೊವಿಡ್ ಪಾಸಿಟಿವಿಟಿ ಶೇಕಡಾ 8ಕ್ಕೆ ಇಳಿದಿದೆ. ಇದನ್ನು ಆಧರಿಸಿ ತಾಂತ್ರಿಕ ಸಲಹಾ ಸಮಿತಿ ವರದಿ ನೀಡುತ್ತದೆ. ವರದಿ ಆಧರಿಸಿ ಲಾಕ್​ಡೌನ್​ ಬಗ್ಗೆ ಸಿಎಂ ತೀರ್ಮಾನಿಸುತ್ತಾರೆ ಎಂದು ಹೇಳಿದರು.

ಎಲ್ಲರೂ 2 ಡೋಸ್ ಕೊರೊನಾ ಲಸಿಕೆ ಪಡೆಯಬೇಕು. ಅಲ್ಲಿಯವರೆಗೂ ಈ ಕೊರೊನಾ ಮುಂದುವರಿಯಲಿದೆ. ಕೊವಿಡ್ ಲಸಿಕೆಯನ್ನು ಎಲ್ಲರಿಗೂ ಪೂರೈಸಲಾಗುವುದು. ಮಕ್ಕಳ ಮೇಲೂ ಲಸಿಕೆಯ ಪ್ರಯೋಗ ನಡೆಯುತ್ತಿದೆ. ಫಲಿತಾಂಶ ನೋಡಿಕೊಂಡು ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ. ಎಲ್ಲರಿಗೂ ಲಸಿಕೆ ಸಿಗುವವರೆಗೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಸಚಿವರು ಸೂಚಿಸಿದರು.

ಬ್ಲ್ಯಾಕ್ ಫಂಗಸ್​ಗೆ ಔಷಧ ಕೊಡಿಸಲು ಸದಾನಂದಗೌಡ ಪ್ರಯತ್ನಿಸುತ್ತಿದ್ದಾರೆ. 8ಕ್ಕೂ ಹೆಚ್ಚು ಕಂಪನಿ ಜೊತೆ ಚರ್ಚಿಸಿ ಸಿದ್ಧತೆ ಮಾಡಿಕೊಂಡಿದ್ದಾರೆ. ದೇಶಾದ್ಯಂತ 80 ಸಾವಿರ ವಯಲ್ಸ್ ಮಾರುಕಟ್ಟೆಗೆ ಬಂದಿದೆ. ರಾಜ್ಯಕ್ಕೂ 8ರಿಂದ 10 ಸಾವಿರ ವಯಲ್ಸ್ ಔಷಧ ಪೂರೈಸಿದ್ದಾರೆ. ರಾಜ್ಯದಲ್ಲಿ 1,250 ಬ್ಲ್ಯಾಕ್ ಫಂಗಸ್ ಪ್ರಕರಣಗಳಿವೆ. ಬ್ಲ್ಯಾಕ್ ಫಂಗಸ್ಗೆ 30-35 ಜನ ಮೃತಪಟ್ಟಿರುವ ಮಾಹಿತಿಯಿದೆ. ಆದರೆ ಡೆತ್ ಆಡಿಟ್ ಮಾಡಿ ನಿಖರ ವರದಿ ನೀಡಲು ಹೇಳಿದ್ದೇನೆ. ಬ್ಲ್ಯಾಕ್ ಫಂಗಸ್​ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಇನ್ನೂ ದರ ನಿಗದಿಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ರೆಮ್​ಡಿಸಿವಿರ್ ಪೂರೈಕೆ ಮಾಡಲು ಕಂಪನಿಗಳು ಮುಂದಾಗಿವೆ. ಆ ಕಾರಣಕ್ಕೆ ಕೇಂದ್ರ ನಾವು ರಾಜ್ಯದ ನಿರ್ಧಾರಕ್ಕೆ ತಲೆ ಹಾಕಲ್ಲ ಅಂತ ಹೇಳಿದೆ. ಇಂಜೆಕ್ಷನ್ ಖರೀದಿ ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಿಟ್ಟಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಇದನ್ನೂ ಓದಿ

ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಎಲ್​ಕೆಜಿಯಿಂದ ಇಂಜಿನಿಯರಿಂಗ್​ವರೆಗೂ ಉಚಿತ ಶಿಕ್ಷಣ: ಶ್ರೀ ಸಿದ್ಧರಾಮ ಸ್ವಾಮೀಜಿ

ಬೆಂಗಳೂರಿನ 27 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊವಾಕ್ಸಿನ್ 2ನೇ ಡೋಸ್ ಲಭ್ಯ

(Dr K Sudhakar has requested the mandatory wearing of mask until everyone is vaccinated)