ಸರಿಯಾದ ಸಮಯಕ್ಕೆ ಆಕ್ಸಿಜನ್ ಕೊಟ್ಟಿದ್ದರೆ ಬದುಕುಳಿಯುತ್ತಿದ್ದ, ತಮ್ಮನ ಸಾವಿಗೆ ಮಿಮ್ಸ್ ಆಸ್ಪತ್ರೆ ವೈದ್ಯರೇ ಕಾರಣ; ಅಣ್ಣನ ಕಣ್ಣೀರು

|

Updated on: May 05, 2021 | 12:19 PM

ಮಂಡ್ಯದ ಹಾಲಹಳ್ಳಿಯ ನಿವಾಸಿ 45 ವರ್ಷದ ಧನಂಜಯ್ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಹದಿನೈದು ದಿನಗಳ ಹಿಂದೆ ಮೃತ ಧನಂಜಯ್ ಸಹೋದರನಿಗೆ ಕೊವಿಡ್ ದೃಢಪಟ್ಟಿತ್ತು. ನಂತರ ಮನೆಯವರೆಲ್ಲರೂ ಪರೀಕ್ಷೆಗೊಳಪಟ್ಟಾಗ ಧನಂಜಯ್ ಸೇರಿ ಮೂವರಿಗೆ ಸೋಂಕು ದೃಢಪಟ್ಟಿತ್ತು.

ಸರಿಯಾದ ಸಮಯಕ್ಕೆ ಆಕ್ಸಿಜನ್ ಕೊಟ್ಟಿದ್ದರೆ ಬದುಕುಳಿಯುತ್ತಿದ್ದ, ತಮ್ಮನ ಸಾವಿಗೆ ಮಿಮ್ಸ್ ಆಸ್ಪತ್ರೆ ವೈದ್ಯರೇ ಕಾರಣ; ಅಣ್ಣನ ಕಣ್ಣೀರು
ಸಂಗ್ರಹ ಚಿತ್ರ
Follow us on

ಮಂಡ್ಯ: ಸರಿಯಾದ ವೇಳೆಗೆ ಆಕ್ಸಿಜನ್ ಸಿಗದೆ ನರಳಾಡಿ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಮಿಮ್ಸ್ ಆಸ್ಪತ್ರೆ ವೈದ್ಯರ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಹಿಂದೆ ಮಂಡ್ಯದಲ್ಲಿ ಧನಂಜಯ್ ಎಂಬ ವ್ಯಕ್ತಿ ಆಕ್ಸಿಜನ್ ಸಿಗದೆ ನರಳಾಡಿ ಸಾವನ್ನಪ್ಪಿದ್ದರು ಎಂದು ಹೇಳಲಾಗುತ್ತಿತ್ತು. ಈ ಸಾವಿಗೆ ವೈದ್ಯರೆ ಕಾರಣ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ನಮ್ಮ ಧನಂಜಯ್ನ ಸಾವಿಗೆ ಮಿಮ್ಸ್ ಆಸ್ಪತ್ರೆ ವೈದ್ಯರೇ ಕಾರಣ. ಸರಿಯಾದ ಸಮಯಕ್ಕೆ ಆಕ್ಸಿಜನ್ ನೀಡಿ ಚಿಕಿತ್ಸೆ ಕೊಟ್ಟಿದ್ದರೆ ಧನಂಜಯ್ ಬದುಕುಳಿಯುತ್ತಿದ್ದ ಎಂದು ಕಣ್ಣೀರು ಹಾಕಿದ್ದಾರೆ.

ಮಂಡ್ಯದ ಹಾಲಹಳ್ಳಿಯ ನಿವಾಸಿ 45 ವರ್ಷದ ಧನಂಜಯ್ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಹದಿನೈದು ದಿನಗಳ ಹಿಂದೆ ಮೃತ ಧನಂಜಯ್ ಸಹೋದರನಿಗೆ ಕೊವಿಡ್ ದೃಢಪಟ್ಟಿತ್ತು. ನಂತರ ಮನೆಯವರೆಲ್ಲರೂ ಪರೀಕ್ಷೆಗೊಳಪಟ್ಟಾಗ ಧನಂಜಯ್ ಸೇರಿ ಮೂವರಿಗೆ ಸೋಂಕು ದೃಢಪಟ್ಟಿತ್ತು. ವೈದ್ಯರ ಸೂಚನೆಯಿಂದ ಧನಂಜಯ್ ಹೋಮ್ ಕ್ವಾರಂಟೈನ್​ನಲ್ಲಿದ್ದರು. ಶುಕ್ರವಾರದ ಸಂಜೆ ವೇಳೆಗೆ ಉಸಿರಾಟದ ಸಮಸ್ಯೆ ಉಲ್ಬಣವಾಯಿತು.

ಮೃತ ವ್ಯಕ್ತಿ ಮಿಮ್ಸ್ನಲ್ಲಿ ಬೆಡ್ ಸಿಗದ ಕಾರಣ ಕೀಲಾರ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮತ್ತೆ ಉಸಿರಾಟದ ಸಮಸ್ಯೆ ಹಿನ್ನಲೆಯಲ್ಲಿ ಕೀಲಾರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮಿಮ್ಸ್​ಗೆ ಕಳುಹಿಸಿಕೊಟ್ಟಿದ್ದರು. ಆದರೆ ಮಿಮ್ಸ್ ವೈದ್ಯರು, ಆಕ್ಸಿಜನ್ ಬೆಡ್ ಇಲ್ಲಾ ಎಂದು ಹೇಳಿ ದಾಖಲಿಸಿಕೊಂಡಿರಲಿಲ್ಲ. ಮನೆಯವರು ಹಲವು ಗಂಟೆಗಳ ಕಾಲ ಖಾಸಗಿ ಆಂಬುಲೆನ್ಸ್​ನಲ್ಲಿ ರಸ್ತೆಯಲ್ಲೇ ಆಕ್ಸಿಜನ್ ನೀಡಿದ್ದಾರೆ. ನಂತರ ಪರಿಚಯಸ್ಥರ ಸಹಾಯದಿಂದ ನಾಗಮಂಗಲ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಧನಂಜಯ್ ಸಾವನ್ನಪ್ಪಿದ್ದಾರೆ. ಈ ಸಾವಿಗೆ ಮಿಮ್ಸ್ ಆಸ್ಪತ್ರೆ ವೈದ್ಯರೇ ಕಾರಣ ಎಂದು ಸಂಬಂಧಿಕರು ಹೇಳುತ್ತಿದ್ದಾರೆ.

ಇದನ್ನೂ ಓದಿ

ರಾಜ್ಯ ಮಟ್ಟದ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸದೆ, ಪಕ್ಕದ ಜಿಲ್ಲಾಧಿಕಾರಿಯನ್ನ ದೂಷಿಸುವುದು ಸರ್ವತಾ ಸಾಧುವಲ್ಲ: ರೋಹಿಣಿ

ಚಾಮರಾಜನಗರ: ಜಿಲ್ಲಾಡಳಿತ ನಿರ್ಲಕ್ಷ್ಯದಿಂದ 24 ವರ್ಷದ ಯುವಕ ಸಾವು ಎಂಬ ಗಂಭೀರ ಆರೋಪ

(corona Infected family members have expressed outrage against mims hospital doctors in mandya)