AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸೋಂಕಿತನ ತಪ್ಪು ಗ್ರಹಿಕೆಯಿಂದ ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು ರಂಪಾಟ!

ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಹಾಗೂ ಬೆಡ್​ಗಳಿಗೆ ಯಾವುದೆ ಕೊರತೆಯಿಲ್ಲ. ಆಸ್ಪತ್ರೆಯಲ್ಲಿ ಇನ್ನೂ 40 ಬೆಡ್​ಗಳು ಖಾಲಿ ಇವೆ. ಇನ್ನೂ ಆಸ್ಪತ್ರೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಇದೆ. ಸಾಲದೆಂದು ಮತ್ತೆ ನೂರು ಜಂಬು ಆಕ್ಸಿಜನ್ ಸಿಲಿಂಡರ್ ಇವೆ.

ಕೊರೊನಾ ಸೋಂಕಿತನ ತಪ್ಪು ಗ್ರಹಿಕೆಯಿಂದ ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು ರಂಪಾಟ!
ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಯ ಸಂಬಂಧಿಕನಿಂದ ಗಲಾಟೆ
sandhya thejappa
|

Updated on: Apr 29, 2021 | 10:48 AM

Share

ಚಿಕ್ಕಬಳ್ಳಾಪುರ: ಸರ್ಕಾರಿ ಜಿಲ್ಲಾ ಕೊವಿಡ್ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತ ವ್ಯಕ್ತಿಗೆ ಸರಗವಾಗಿ ಉಸಿರಾಡಲು ಸಾಧ್ಯವಾಗಿಲ್ಲ. ಇದರಿಂದ ಭಯಭೀತನಾಗಿ ಕೊರೊನಾ ಸೋಂಕಿತ ವ್ಯಕ್ತಿ ತಾನು ಉಸಿರಾಡಲು ಬೇಕಾಗುವಷ್ಟು ಆಕ್ಸಿಜನ್ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ. ಮೊದಲು ಇಲ್ಲಿಂದ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಇಲ್ಲಾ ಆಕ್ಸಿಜನ್ ಸಿಲಿಂಡರ್ ತನ್ನಿ ಅಂತ ಹೇಳಿದ್ದೆ ತಡ, ಇದರಿಂದ ಗಾಬರಿಗೊಂಡ ರೋಗಿಯ ಸಂಬಂಧಿಗಳು ಬೆಂಗಳೂರಿನಿಂದ ಆಕ್ಸಿಜನ್ ಸಿಲಿಂಡರ್ ತಂದರು. ಸಿಲಿಂಡರ್ ತಂದ ಬಳಿಕ ಸಂಬಂಧಿಕರು ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ದೊಡ್ಡ ರಂಪಾಟವನ್ನೆ ಮಾಡಿದ್ದರು.

ಈಗ ಹೆಚ್ಚು ಪ್ರಚಲಿತ ಇರುವ ಶಬ್ದವೇ ಆಕ್ಸಿಜನ್. ಪ್ರಾಣವಾಯು, ಜೀವವಾಯು, ಗಂಭೀರ ಕೊರೊನಾ ರೋಗಿಗಳಿಗೆ ಜೀವಾಮೃತವಾಗಿರುವ ಆಕ್ಸಿಜನ್ನಿಂದ ಸಕಾಲಕ್ಕೆ ಸಿಗದೆ ಸಾವಿರಾರು ಜನ ಮೃತಪಟ್ಟಿದ್ದಾರೆ. ಆದರೆ ಸ್ವತಃ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತವರು ಕ್ಷೇತ್ರ ಚಿಕ್ಕಬಳ್ಳಾಪುರದ ಸರ್ಕಾರಿ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತ ವ್ಯಕ್ತಿಯೊರ್ವ ತನಗೆ ಉಸಿರಾಡಲು ಬೇಕಾಗುವಷ್ಟು ಆಕ್ಸಿಜನ್ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ. ಮೊದಲು ಇಲ್ಲಿಂದ ಬೇರೆ ಕಡೆ ಶಿಫ್ಟ್ ಮಾಡಿ. ಇಲ್ಲಾ ಆಕ್ಸಿಜನ್ ಸಿಲಿಂಡರ್ ತಂದು ಕೊಡಿ ಅಂತ ಹೇಳಿದ್ದರು. ತಕ್ಷಣ ರೋಗಿಯ ಸಂಬಂಧಿಗಳು ಬೆಂಗಳೂರಿನಿಂದ ಆಕ್ಸಿಜನ್ ಸಿಲಿಂಡರ್ ಆಸ್ಪತ್ರೆಗೆ ತಂದು, ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಆಕ್ಸಿಜನ್ ಹಾಗೂ ಬೆಡ್​ಗಳ ಕೊರತೆಯಿಲ್ಲ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಹಾಗೂ ಬೆಡ್​ಗಳಿಗೆ ಯಾವುದೆ ಕೊರತೆಯಿಲ್ಲ. ಆಸ್ಪತ್ರೆಯಲ್ಲಿ ಇನ್ನೂ 40 ಬೆಡ್​ಗಳು ಖಾಲಿ ಇವೆ. ಇನ್ನೂ ಆಸ್ಪತ್ರೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಇದೆ. ಸಾಲದೆಂದು ಮತ್ತೆ ನೂರು ಜಂಬು ಆಕ್ಸಿಜನ್ ಸಿಲಿಂಡರ್ ಇವೆ. ಐ.ಸಿ.ಯುನಲ್ಲಿರುವ ಕೊರೊನಾ ಸೋಂಕಿತ ವ್ಯಕ್ತಿಗೆ ಕೆಲವೊಮ್ಮೆ ಉಸಿರಾಡಲು ಕಷ್ಟ ಆಗುತ್ತದೆ. ಅದನ್ನು ಅರ್ಥ ಮಾಡಿಕೊಳ್ಳದೆ ವೈದ್ಯರ ಬಳಿ ಮಾಹಿತಿ ಪಡೆಯದೆ ತಪ್ಪು ಗ್ರಹಿಕೆಯಿಂದ ಕೊರೊನಾ ಸೋಂಕಿತ ವ್ಯಕ್ತಿ ಸಂಬಂಧಿಗಳಿಗೆ ಮಾಹಿತಿ ನೀಡಿದ್ದಾನೆ. ಇದರಿಂದ ಗೊಂದಲ ಉಂಟಾಗಿದೆ. ಆದರೆ ರೋಗಿಯ ಸಂಬಂಧಿಗಳನ್ನೆ ಕರೆದುಕೊಂಡು ಹೋಗಿ ಆಸ್ಪತ್ರೆ ಸಿಬ್ಬಂದಿ ಆಕ್ಸಿಜನ್ ಪ್ಲಾಂಟ್ ಹಾಗೂ ಸರಬರಾಜು ವ್ಯವಸ್ಥೆಯನ್ನು ತೋರಿಸಿದೆ.

ಮೊದಲೇ ಕೊರೊನಾ ಸೋಂಕಿತ ವ್ಯಕ್ತಿಗಳು ಭಯದಲ್ಲಿ ಜೀವ ಹಿಡಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿಯೊಬ್ಬ ಕೊರೊನಾ ಸೋಂಕಿತ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲವೆಂದು ಹೆದರಿಸಿದ್ದಾನಂತೆ. ಇದರಿಂದ ಭಯಗೊಂಡ ಕೊರೊನಾ ಸೋಂಕಿತ ವ್ಯಕ್ತಿ, ಸಂಬಂಧಿಗಳಿಗೆ ಮಾಹಿತಿ ನೀಡಿದ ಕಾರಣ ಆಸ್ಪತ್ರೆಯಲ್ಲಿ ಕೆಲಕಾಲ ದೊಡ್ಡ ರಂಪಾಟ ಗೊಂದಲ ಗಲಾಟೆ ಆಗಿದೆ. ಕೊನೆಗೆ ಸತ್ಯ ಮನವರಿಕೆಯಾದ ಮೇಲೆ ಎಲ್ಲರೂ ಸಮಧಾನವಾಗಿದ್ದಾರೆ.

ಇದನ್ನೂ ಓದಿ

ಇಷ್ಟ ಇದ್ರೆ ತಗೋಳಿ, ಇಲ್ಲ ಅಂದ್ರೆ ಹೋಗಿ ಅನ್ನುತ್ತಿರುವ ವ್ಯಾಪಾರಿಗಳು: ತರಕಾರಿ ಬೆಲೆ ಏರಿಕೆ ವಿರುದ್ಧ ಗ್ರಾಹಕರು ಕಂಗಾಲು

ಕೊರೊನಾದಿಂದ ಕೋಲಾರದ ಐತಿಹಾಸಿಕ ಆಸ್ಪತ್ರೆಗೆ ಸಿಕ್ತು ಕಾಯಕಲ್ಪ

(Corona infected relatives express outrage at government hospital for misinformation about oxygen deficiency in Chikkaballapur)