ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಸೋಂಕಿತ ಮಕ್ಕಳಿಗಿಲ್ಲ ಚಿಕಿತ್ಸೆ; 500 ಬೆಡ್​ಗಳಿರುವ ಆಸ್ಪತ್ರೆಯನ್ನು ಕೊವಿಡ್ ಆಸ್ಪತ್ರೆಯಾಗಿಸಿಲ್ಲ ಏಕೆ?

| Updated By: Skanda

Updated on: May 11, 2021 | 1:50 PM

ಸರ್ಕಾರಿ ಆಸ್ಪತ್ರೆಯಲ್ಲೇ 500 ಬೆಡ್ಗಳ ಸುಸಜ್ಜಿತ ವ್ಯವಸ್ಥೆ ಇದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಬರೋಬ್ಬರಿ 7.7 ಎಕರೆಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿ ಬೆಡ್ಗಳು ಖಾಲಿ ಇದ್ದರೂ ಕೊವಿಡ್ಗೆ ಬಳಕೆ ಮಾಡಿಕೊಳ್ಳುತ್ತಿಲ್ಲ. ನಗರದಲ್ಲಿ ಬೆಡ್ಗಳಿಲ್ಲದೆ ಜನರು ಆಂಬ್ಯುಲೆನ್ಸ್ಗಳಲ್ಲಿ, ರಸ್ತೆಗಳಲ್ಲಿ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಕೊವಿಡ್ ಆಸ್ಪತ್ರೆಯಾಗಿ ಮಾಡದೆ ನಾನ್ ಕೊವಿಡ್ ಆಸ್ಪತ್ರೆಯಾಗಿ ಬಿಟ್ಟಿರುವುದು ಎಷ್ಟು ಸರಿ?

ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಸೋಂಕಿತ ಮಕ್ಕಳಿಗಿಲ್ಲ ಚಿಕಿತ್ಸೆ; 500 ಬೆಡ್​ಗಳಿರುವ ಆಸ್ಪತ್ರೆಯನ್ನು ಕೊವಿಡ್ ಆಸ್ಪತ್ರೆಯಾಗಿಸಿಲ್ಲ ಏಕೆ?
ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಸರ್ಕಾರಿ ಆಸ್ಪತ್ರೆ
Follow us on

ಬೆಂಗಳೂರು: ಮಕ್ಕಳಿಗೆಂದೇ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಅತ್ಯಾಧುನಿಕ ಸಲಕರಣೆಗಳನ್ನ ಒಳಗೊಂಡ ರಾಜ್ಯದ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬರುವ ಕೊವಿಡ್ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ಸಿಗ್ತಿಲ್ಲ. ಈ ಆಸ್ಪತ್ರೆಯಲ್ಲಿ ಸೋಂಕಿತ ಮಕ್ಕಳಿಗೆ ಕೊವಿಡ್ ಚೆಕ್ ಅಪ್ ಕೂಡ ಮಾಡುತ್ತಿಲ್ಲವೆಂಬ ಮಾತು ಕೇಳಿಬಂದಿದೆ. ಅಲ್ಲದೇ ಚಿಕಿತ್ಸೆಗೆಂದು ಬಂದ ಮಕ್ಕಳನ್ನ ವಾಣಿ ವಿಲಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಿಬ್ಬಂದಿ ಸೂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸರ್ಕಾರಿ ಆಸ್ಪತ್ರೆಯಲ್ಲೇ 500 ಬೆಡ್​ಗಳ ಸುಸಜ್ಜಿತ ವ್ಯವಸ್ಥೆ ಇದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಬರೋಬ್ಬರಿ 7.7 ಎಕರೆಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿ ಬೆಡ್​ಗಳು ಖಾಲಿ ಇದ್ದರೂ ಕೊವಿಡ್​ಗೆ ಬಳಕೆ ಮಾಡಿಕೊಳ್ಳುತ್ತಿಲ್ಲ. ನಗರದಲ್ಲಿ ಬೆಡ್​ಗಳಿಲ್ಲದೆ ಜನರು ಆಂಬ್ಯುಲೆನ್ಸ್​ಗಳಲ್ಲಿ, ರಸ್ತೆಗಳಲ್ಲಿ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಕೊವಿಡ್ ಆಸ್ಪತ್ರೆಯಾಗಿ ಮಾಡದೆ ನಾನ್ ಕೊವಿಡ್ ಆಸ್ಪತ್ರೆಯಾಗಿ ಬಿಟ್ಟಿರುವುದು ಎಷ್ಟು ಸರಿ. ಮುಂದೆ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ರೆ ಚಿಕಿತ್ಸೆ ಹೇಗೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಆಸ್ಪತ್ರೆ ಕಾರ್ಯ ನಿರ್ವಹಣೆ ಬಜೆಟ್ ವೆಚ್ಚ ವಾರ್ಷಿಕ ಬರೋಬ್ಬರಿ 40 ಕೋಟಿ ಇದೆ. ಸದ್ಯ ಕೇವಲ 15 ಜನ ಮಕ್ಕಳಿಗೆ ಮಾತ್ರ ಚಿಕಿತ್ಸೆ ನೀಡ್ತಿರುವುದಾಗಿ ಆಸ್ಪತ್ರೆ ಮಂಡಳಿ ಮಾಹಿತಿ ನೀಡಿದೆ. ಇಂಥ ಸುಸಜ್ಜಿತ ಆಸ್ಪತ್ರೆ ಇದ್ದರು ಕೊವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಆಸ್ಪತ್ರೆಯನ್ನು ಬಳಕೆಗಿಲ್ಲವಾಗಿಸಿದ ಸರ್ಕಾರದ ನಡೆ ಮಾತ್ರ ನಿಗೂಢವಾಗಿದೆ.

ಈ ಆಸ್ಪತ್ರೆಯಲ್ಲಿ ಇರುವ 65 ಪಿ.ಜಿ ಸ್ಟೂಡೆಂಟ್ಸ್ಗಳೇ ಆಸ್ಪತ್ರೆಯಲ್ಲಿ ಬಹುಪಾಲು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇಲ್ಲಿನ ವೈದ್ಯರು ಆಸ್ಪತ್ರೆಗೆ ಬರದೇ ಪ್ರತಿ ತಿಂಗಳು ಲಕ್ಷ-ಲಕ್ಷ ಸಂಬಳ ಜೇಬಿಗಿಳಿಸಿಕೊಳ್ತಿದ್ದಾರೆ. ಮಕ್ಕಳಿಗೆಂದೇ 50 ಕ್ಕೂ ಹೆಚ್ಚು ವೆಂಟಿಲೇಟರ್ಗಳಿದ್ದರು ಯಾವುದೇ ಪ್ರಯೋಜನವಾಗುತ್ತಿಲ್ಲ. 500 ಬೆಡ್ಗಳ ಆಸ್ಪತ್ರೆ ಕೊವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಲಭ್ಯವಿಲ್ಲ. ಕೊರೊನಾ ಸೋಂಕಿತ ಮಕ್ಕಳ ಸಂಖ್ಯೆ ಹೆಚ್ಚಾದರೆ ಗತಿಯೇನು? ಹೀಗಾಗಿ ಈ ಬಗ್ಗೆ ಗಮನ ಹರಿಸಿ ನಮ್ಮಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲೇ ಬಳಸಿಕೊಂಡು ಕೊವಿಡ್ ಆಸ್ಪತ್ರೆಗಳಾಗಿ ಮಾಡಿ ಬೆಂಗಳೂರಿನಲ್ಲಿ ಎದುರಾಗಿರುವ ಬೆಡ್ ಸಮಸ್ಯೆಯನ್ನು ನೀಗಿಸಬೇಕಿದೆ. ಹಾಗೂ ಮುಂದಿನ ಭವಿಷ್ಯ ರೂಪಿಸಲಿರುವ ಮಕ್ಕಳಿಗೆ ಕೊರೊನಾ ಹೆಮ್ಮಾರಿ ಬಂದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಬೇಕಾದ ತಯಾರಿಯನ್ನು ಈಗಲೇ ಮಾಡಿಕೊಳ್ಳಬೇಕಾಗಿದೆ.

ಇದನ್ನೂ ಓದಿ:  ಫೈಜರ್ ಕೊವಿಡ್​ ಲಸಿಕೆಯ​ನ್ನು ಮಕ್ಕಳಿಗೆ ನೀಡಲು ಅಮೇರಿಕದ ಔಷಧ ಪ್ರಾಧಿಕಾರ ಒಪ್ಪಿಗೆ