ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ (ಜೂನ್ 3) ಒಟ್ಟು 18,324 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 514 ಮಂದಿ ಕೊವಿಡ್-19ರಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚು ಅಂದರೆ 3,533 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 347 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 26,53,446ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 23,36,096 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ ಈವರೆಗೆ 30,531 ಜನರು ಸಾವನ್ನಪ್ಪಿದ್ದಾರೆ. 2,86,798 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು ಮಹಾನಗರದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 11,74,275ಕ್ಕೆ ಏರಿಕೆಯಾಗಿದೆ. ಈ ಪೈಕಿ 10,25,614 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ನಗರದಲ್ಲಿ ಕೊರೊನಾದಿಂದ ಈವರೆಗೆ ಒಟ್ಟು 14,276 ಜನರು ಸಾವನ್ನಪ್ಪಿದ್ದಾರೆ. 1,34,384 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ರಾಜ್ಯದಲ್ಲಿಂದು ಹೊಸದಾಗಿ 18,324 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 3533 ಜನರಲ್ಲಿ ಸೋಂಕು ದೃಢಪಟ್ಟಿದೆ. ಹಾಸನ 2078, ಮೈಸೂರು 1573, ತುಮಕೂರು 979, ಬೆಳಗಾವಿ 839, ಬೆಂಗಳೂರು ಗ್ರಾಮಾಂತರ 760, ಚಿಕ್ಕಮಗಳೂರು 742, ಶಿವಮೊಗ್ಗ 767, ಮಂಡ್ಯ 623, ದಕ್ಷಿಣ ಕನ್ನಡ 598, ಉತ್ತರ ಕನ್ನಡ 588, ಉಡುಪಿ 580, ದಾವಣಗೆರೆ 559, ಬಳ್ಳಾರಿ 503, ಚಿಕ್ಕಬಳ್ಳಾಪುರ 486, ಚಿತ್ರದುರ್ಗ 379, ಕೋಲಾರ 317, ಚಾಮರಾಜನಗರ 313, ಕೊಡಗು 310, ರಾಯಚೂರು 271, ಗದಗ 250, ಕೊಪ್ಪಳ 237, ಧಾರವಾಡ 221, ಬಾಗಲಕೋಟೆ 194, ವಿಜಯಪುರ 192, ಹಾವೇರಿ 146, ಕಲಬುರಗಿ 119, ಯಾದಗಿರಿ 78, ರಾಮನಗರ 62, ಬೀದರ್ ಜಿಲ್ಲೆಗಳಲ್ಲಿ 27 ಜನರಿಗೆ ಕೊರೊನಾ ದೃಢಪಟ್ಟಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಕರ್ನಾಟಕದಲ್ಲಿ ಇಂದು ಕೊರೊನಾ ಸೋಂಕಿನಿಂದ 514 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚು, ಅಂದರೆ 347 ಜನರು ಮೃತಪಟ್ಟಿದ್ದಾರೆ. ಹಾಸನ, ಮಂಡ್ಯದಲ್ಲಿ ತಲಾ 14, ಮೈಸೂರು 12, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡದಲ್ಲಿ ತಲಾ 11, ಬೆಳಗಾವಿ, ಚಾಮರಾಜನಗರ, ಕೊಪ್ಪಳದಲ್ಲಿ ತಲಾ 10, ಹಾವೇರಿ 8, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ತುಮಕೂರಿನಲ್ಲಿ ತಲಾ 7, ದಕ್ಷಿಣ ಕನ್ನಡ 5, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ತಲಾ 4, ಬಾಗಲಕೋಟೆಯಲ್ಲಿ 3, ಬೀದರ್, ಕೋಲಾರ, ಚಿಕ್ಕಮಗಳೂರು, ಕಲಬುರಗಿಯಲ್ಲಿ ತಲಾ 2, ಚಿತ್ರದುರ್ಗ, ಕೊಡಗು, ರಾಮನಗರ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನಿಂದ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 30,531ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ತಿಳಿಸಿದೆ.
(Coronavirus cases decreasing in Karnataka district wise covid data of june 3)
ಇದನ್ನೂ ಓದಿ: ಕೊವಿಡ್ ಲಸಿಕೆಯ ಅಭಾವ, ಮೇ ತಿಂಗಳಲ್ಲಿ ಏರ್ ಇಂಡಿಯಾದ ಐವರು ಸೀನಿಯರ್ ಪೈಲಟ್ಗಳು ಸೋಂಕಿಗೆ ಬಲಿ
Published On - 8:53 pm, Thu, 3 June 21