ಸ್ಲಂ, ಬಡ ಜನರು ವಾಸಿಸುವ ಪ್ರದೇಶಗಳಲ್ಲಿ ತ್ವರಿತವಾಗಿ ಲಸಿಕೆ ವಿತರಿಸಿ: ಹೈಕೋರ್ಟ್​ನಿಂದ ರಾಜ್ಯ ಸರ್ಕಾರಕ್ಕೆ ಸೂಚನೆ

ಎಎಜಿ ಧ್ಯಾನ್ ಚಿನ್ನಪ್ಪರು ತಿಳಿಸಿದ ಮಾಹಿತಿಗೆ ಪ್ರತಿಕ್ರಿಯೆ ನೀಡಿದ ಹೈಕೋರ್ಟ್​, ಮುನ್ನೆಚ್ಚರಿಕೆ ದೃಷ್ಟಿಯಿಂದ ಆಕ್ಸಿಜನ್ ಲಭ್ಯತೆಯ ಸಿದ್ಧತೆ ನಡೆಸಿ. ಆಕ್ಸಿಜನ್ ಉತ್ಪಾದನೆ, ಸಂಗ್ರಹಕ್ಕೆ ಕ್ರಮ ಕೈಗೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತು.

ಸ್ಲಂ, ಬಡ ಜನರು ವಾಸಿಸುವ ಪ್ರದೇಶಗಳಲ್ಲಿ ತ್ವರಿತವಾಗಿ ಲಸಿಕೆ ವಿತರಿಸಿ: ಹೈಕೋರ್ಟ್​ನಿಂದ ರಾಜ್ಯ ಸರ್ಕಾರಕ್ಕೆ ಸೂಚನೆ
ಕರ್ನಾಟಕ ಹೈಕೋರ್ಟ್
Follow us
TV9 Web
| Updated By: guruganesh bhat

Updated on: Jun 03, 2021 | 9:07 PM

ಬೆಂಗಳೂರು: ಸ್ಲಮ್, ಬಡಜನರಿರುವ ಪ್ರದೇಶಗಳಲ್ಲಿ ವಾಸವಿರುವ ಸಾರ್ವಜನಿಕರಿಗೆ ಎನ್​ಜಿಒಗಳ ಸಹಕಾರ ಪಡೆದು ಕೊವಿಡ್ ಲಸಿಕೆ ವಿತರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಪೌರ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು, ಆದ್ಯತಾ ವಲಯಗಳಿಗೆ ಮತ್ತು ಈ ಗುಂಪುಗಳ ಕುಟುಂಬಗಳಿಗೆ ತ್ವರಿತವಾಗಿ ಲಸಿಕೆ ವಿತರಿಸಿ. ಇದಕ್ಕಾಗಿ ನಡೆಸಿದ ವಿಶೇಷ ಅಭಿಯಾನಗಳು ಮತ್ತು ವಿಶೇಷ ಚೇತನರಿಗೆ ಲಸಿಕೆ ನೀಡಿದ ಕುರಿತು ಮಾಹಿತಿ ನೀಡಿ ಎಂದು ಹೈಕೋರ್ಟ್​ ನಿರ್ದೇಶನ ನೀಡಿದೆ.

ಕರ್ನಾಟಕದಲ್ಲಿ ಕೊವಿಡ್ ತಡೆ ಮತ್ತು ನಿರ್ವಹಣೆ ಬಗ್ಗೆ ಸ್ವಯಂ ಪ್ರೇರಿತ ದೂರಿನ ವಿಚಾರಣೆ ನಡೆಸಿದ ಹೈಕೋರ್ಟ್ ಈ ಸೂಚನೆ ನೀಡಿದೆ. ವಿಚಾರಣೆಯ ವೇಳೆ ಹೈಕೋರ್ಟ್​ಗೆ ಆಕ್ಸಿಜನ್ ಲಭ್ಯತೆಯ ಕುರಿತು ಮಾಹಿತಿ ನೀಡಿದ ಎಎಜಿ ಧ್ಯಾನ್ ಚಿನ್ನಪ್ಪ, ರಾಜ್ಯದಲ್ಲಿ ಸದ್ಯಕ್ಕೆ ಆಕ್ಸಿಜನ್ ಕೊರತೆಯಿಲ್ಲ. ಹೆಚ್ಚುವರಿ ಬಫರ್ ಸ್ಟಾಕ್ ಲಭ್ಯವಿರುವುದಾಗಿ ತಿಳಿಸಿದರು. ಜಿಂದಾಲ್​ನ ಎರಡು ಘಟಕಗಳಿಂದ ದುರಸ್ತಿ ಕಾರಣದಿಂದ ಆಕ್ಸಿಜನ್ ಸಿಗುತ್ತಿಲ್ಲ. ಸದ್ಯ ಆಕ್ಸಿಜನ್ ಬೇಡಿಕೆ ಕಡಿಮೆಯಾಗಿದ್ದರಿಂದ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ಎಎಜಿ ಧ್ಯಾನ್ ಚಿನ್ನಪ್ಪರು ತಿಳಿಸಿದ ಮಾಹಿತಿಗೆ ಪ್ರತಿಕ್ರಿಯೆ ನೀಡಿದ ಹೈಕೋರ್ಟ್​, ಮುನ್ನೆಚ್ಚರಿಕೆ ದೃಷ್ಟಿಯಿಂದ ಆಕ್ಸಿಜನ್ ಲಭ್ಯತೆಯ ಸಿದ್ಧತೆ ನಡೆಸಿ. ಆಕ್ಸಿಜನ್ ಉತ್ಪಾದನೆ, ಸಂಗ್ರಹಕ್ಕೆ ಕ್ರಮ ಕೈಗೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತು.

ಜೂನ್​ನಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ 45.09 ಲಕ್ಷ ಡೋಸ್ ಲಸಿಕೆ ನೀಡಿಕೆ ಭರವಸೆ ಕರ್ನಾಟಕ ರಾಜ್ಯಕ್ಕೆ ಜೂನ್ ತಿಂಗಳಲ್ಲಿ 45.09 ಲಕ್ಷ ಡೋಸ್ ಲಸಿಕೆ ಉಚಿತವಾಗಿ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಕರ್ನಾಟಕ ಸರ್ಕಾರವು ಲಸಿಕಾ ಕಂಪನಿಗಳಿಂದ ನೇರವಾಗಿ 13.71 ಲಕ್ಷ ಡೋಸ್ ಖರೀದಿ ಮಾಡಲಿದೆ. ಜೂನ್ ತಿಂಗಳಲ್ಲಿ ಒಟ್ಟು ಕರ್ನಾಟಕಕ್ಕೆ 58.80 ಲಕ್ಷ ಡೋಸ್ ಲಸಿಕೆ ಸಿಗಲಿದೆ. ಕೇಂದ್ರದ ಕೋಟಾದಿಂದ ರಾಜ್ಯಕ್ಕೆ 37.60 ಲಕ್ಷ ಡೋಸ್ ಕೊವಿಶೀಲ್ಡ್, 7.40 ಲಕ್ಷ ಡೋಸ್ ಕೊವ್ಯಾಕ್ಸಿನ್ ಬರಲಿದೆ. ಕರ್ನಾಟಕ ಸರ್ಕಾರದಿಂದ 10.86 ಲಕ್ಷ ಡೋಸ್ ಕೊವಿಶೀಲ್ಡ್, 2.84 ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆಗಳು ಲಸಿಕಾ ಕೇಂದ್ರಗಳಿಗೆ ತಲುಪಲಿದೆ.

ಕೇಂದ್ರ ಸರ್ಕಾರದಿಂದ ಲಸಿಕೆ ಪೂರೈಕೆಯಾಗುತ್ತಿರುವ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ. ‘ಜೂನ್ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ ಪೂರೈಕೆಯಾಗಲಿರುವ 45 ಲಕ್ಷ ಡೋಸ್ ಲಸಿಕೆ ಮತ್ತು ರಾಜ್ಯ ಸರ್ಕಾರ ಖರೀದಿಸುತ್ತಿರುವ ಲಸಿಕೆ ಪೈಕಿ 13.7 ಲಕ್ಷ ಡೋಸ್ ಸೇರಿದಂತೆ ಒಟ್ಟು 58.71 ಲಕ್ಷ ಡೋಸ್ ಕೊರೊನಾ ಲಸಿಕೆ ರಾಜ್ಯಕ್ಕೆ ಪೂರೈಕೆಯಾಗಲಿದೆ. ಎಲ್ಲ ಕನ್ನಡಿಗರಿಗೂ ಲಸಿಕೆ ಒದಗಿಸಲು ಕೇಂದ್ರ ಸರ್ಕಾರ ನೀಡುತ್ತಿರುವ ನಿರಂತರ ಸಹಕಾರ ಶ್ಲಾಘನೀಯ’  ಎಂದು ಸುಧಾಕರ್ ಹೇಳಿದ್ದಾರೆ.

‘ಭಾರತದಲ್ಲಿ ಅತ್ಯಂತ ವೇಗವಾಗಿ ಲಸಿಕೆ ನೀಡಲಾಗುತ್ತಿರುವ ನಗರಗಳಲ್ಲಿ ಬೆಂಗಳೂರು ಸೇರಿದೆ. ಈವರೆಗೆ 28.3 ಲಕ್ಷ ಜನರಿಗೆ ಒಂದು ಡೋಸ್​ ಆದರೂ ಲಸಿಕೆ ಸಿಕ್ಕಿದೆ. ನಗರದ ಶೇ 28.6ರಷ್ಟು ಜನರಿಗೆ ಲಸಿಕೆ ಸಿಕ್ಕಿದೆ’ ಎಂದು ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ನಿನ್ನೆ ರಾತ್ರಿ 11.45ಕ್ಕೆ ಗುಜರಾತಿನ ಜಾಮ್​ನಗರದಿಂದ 110.83 ಟನ್ ಆಕ್ಸಿಜನ್ ಹೊತ್ತ ರೈಲು ಬೆಂಗಳೂರಿಗೆ ಬಂದಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ‘ಸಕಾಲಕ್ಕೆ ಆಕ್ಸಿಜನ್ ಪೂರೈಸುವ ಮೂಲಕ ಈ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳ ಕೈಹಿಡಿದಿದೆ’ ಎಂದು ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿ: ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಯಾವುದೇ ತೀರ್ಮಾನ ಮಾಡಿಲ್ಲ: ಸಿಎಂ ಯಡಿಯೂರಪ್ಪ

ಶಿಲ್ಪಾ ನಾಗ್ ರಾಜೀನಾಮೆ ಹಿಂತೆಗೆದುಕೊಳ್ಳುವವರೆಗೆ ಪಾಲಿಕೆ ನೌಕರರು ಕೆಲಸ ಮಾಡಲ್ಲ: ಮೈಸೂರು ಮೇಯರ್ (Karnataka High Court directs distribute vaccination to the slums and poor areas to Karnataka Govt)