ಶಿಲ್ಪಾ ನಾಗ್ ರಾಜೀನಾಮೆ ಹಿಂತೆಗೆದುಕೊಳ್ಳುವವರೆಗೆ ಪಾಲಿಕೆ ನೌಕರರು ಕೆಲಸ ಮಾಡಲ್ಲ: ಮೈಸೂರು ಮೇಯರ್

Shilpa Nag: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿದ ನಂತರವೇ ತನಿಖೆ ಆಗಬೇಕು. ಶಿಲ್ಪಾ ನಾಗ್ ಅವರು ಪಾಲಿಕೆ ಆಯುಕ್ತೆ ಸ್ಥಾನಕ್ಕೆ ರಾಜೀನಾಮೆ ಹಿಂಪಡೆಯುವವರೆಗೂ ನಾವೂ ಕೆಲಸ ಮಾಡಲ್ಲ ಎಂದು ಮೈಸೂರಲ್ಲಿ ಮಾಜಿ‌ ಮೇಯರ್ ಅಯೂಬ್ ಖಾನ್ ತಿಳಿಸಿದರು.

ಶಿಲ್ಪಾ ನಾಗ್ ರಾಜೀನಾಮೆ ಹಿಂತೆಗೆದುಕೊಳ್ಳುವವರೆಗೆ ಪಾಲಿಕೆ ನೌಕರರು ಕೆಲಸ ಮಾಡಲ್ಲ: ಮೈಸೂರು ಮೇಯರ್
ರೋಹಿಣಿ ಸಿಂಧೂರಿ ಮತ್ತು ಶಿಲ್ಪಾ ನಾಗ್
Follow us
TV9 Web
| Updated By: guruganesh bhat

Updated on:Jun 03, 2021 | 8:38 PM

ಮೈಸೂರು: ಅರಮನೆ ನಗರಿಯ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ರಾಜೀನಾಮೆ ಅಂಗೀಕರಿಸಬಾರದು ಎಂದು ಸಾಮೂಹಿಕವಾಗಿ ಸರ್ವಪಕ್ಷಗಳ ಕಾರ್ಪೋರೆಟರ್​ಗಳು ಸುದ್ದಿಗೋಷ್ಠಿ ಕರೆದು ಆಗ್ರಹಿಸಿದರು. ಅಲ್ಲದೇ ಮೈಸೂರು ಪಾಲಿಕೆ ಟಾಸ್ಕ್ ಪೋರ್ಸ್ ಕಮಿಟಿಯೂ ನಾಳೆಯಿಂದ ಕೆಲಸ ಮಾಡುವುದಿಲ್ಲ ಎಂದು ಸರ್ವಪಕ್ಷಗಳ ಪಾಲಿಕೆ ಆಯುಕ್ತರು ಆಗ್ರಹಿಸಿದರು. ಜತೆಗೆ ಮೈಸೂರಿನ ಮಾಜಿ‌ ಮೇಯರ್ ಅಯೂಬ್ ಖಾನ್, ನಾಳೆಯಿಂದ ಪೌರಕಾರ್ಮಿಕರು ಯಾರೂ ಕೆಲಸ ಮಾಡಲ್ಲ. ಕೊವಿಡ್ ಕರ್ತವ್ಯಕ್ಕೆ ಹಾಕಿದವರು ಸಹ ಕೆಲಸ ಮಾಡುವುದಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ನಾಳೆ ಜಿಲ್ಲೆಗೆ ಬರುತ್ತಾರೆ. ಅವರು ಕೊವಿಡ್​ ರಿವ್ಯೂಗೆ ಬಂದರೆ ನಮ್ಮ ತಕರಾರಿಲ್ಲ. ಆದರೆ, ಶಿಲ್ಪಾ ನಾಗ್ ಬಗ್ಗೆ ತನಿಖೆಗೆ ಬಂದ್ರೆ ಗೋಬ್ಯಾಕ್​​ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿದ ನಂತರವೇ ತನಿಖೆ ಆಗಬೇಕು. ಶಿಲ್ಪಾ ನಾಗ್ ಅವರು ಪಾಲಿಕೆ ಆಯುಕ್ತೆ ಸ್ಥಾನಕ್ಕೆ ರಾಜೀನಾಮೆ ಹಿಂಪಡೆಯುವವರೆಗೂ ನಾವೂ ಕೆಲಸ ಮಾಡಲ್ಲ ಎಂದು ಮೈಸೂರಲ್ಲಿ ಮಾಜಿ‌ ಮೇಯರ್ ಅಯೂಬ್ ಖಾನ್ ತಿಳಿಸಿದರು.

ಏನಿದು ಪ್ರಕರಣ? ಮಹಾನಗರ ಪಾಲಿಕೆಯ ಆಯುಕ್ತೆ ಶಿಲ್ಪಾನಾಗ್ ಅತ್ಯಂತ ದಕ್ಷತೆ, ಪ್ರಾಮಾಣಿಕತೆ ಮತ್ತು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರ ರಾಜಿನಾಮೆಯನ್ನು ಸರ್ಕಾರ ಯಾವ ಕಾರಣಕ್ಕೂ ಅಂಗೀಕಾರ ಮಾಡುವುದಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಮಾತನಾಡುತ್ತೇನೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪತ್ರಿಕಾ ಪ್ರಕಟಣೆ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಶಿಲ್ಪಾನಾಗ್ ಅವರು ಸೇವೆಯಲ್ಲಿ ಮುಂದುವರಿಯುವಂತೆ ಮನವೊಲಿಸಲಾಗುವುದು. ಅವರೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತೇನೆ. ಶುಕ್ರವಾರ ನಾನು ಮೈಸೂರು ಪ್ರವಾಸ ಕೈಗೊಂಡಿದ್ದು, ಆ ವೇಳೆ ಖುದ್ದು ಭೇಟಿಯಾಗಿ ಮಾತನಾಡುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆ ವಿಚಾರವಾಗಿ, ಪಾಲಿಕೆ ಪ್ರಭಾರ ಮೇಯರ್ ಅನ್ವರ್ ಬೇಗ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಕಾರಣಕ್ಕೂ ಆಯುಕ್ತರು ರಾಜೀನಾಮೆ ನೀಡಬಾರದು‌. ಪಾಲಿಕೆಯ 65 ಸದಸ್ಯರು ಶಿಲ್ಪಾನಾಗ್​ರ ಜತೆಗೆ ಇದ್ದೇವೆ. ಜಿಲ್ಲಾಧಿಕಾರಿ ಇಷ್ಟು ಕಿರುಕುಳ ನೀಡಿದ್ದಾರೆ ಅಂತಾ ನಮಗೂ ಗೊತ್ತಿರಲಿಲ್ಲ. ಮೈಸೂರು ಪಾಲಿಕೆಗಷ್ಟೇ ಅಲ್ಲ, ದೇಶಕ್ಕೆ ಈ ರೀತಿಯ ಅಧಿಕಾರಿ ಬೇಕು‌ ಎಂದು ತಿಳಿಸಿದರು.

ಇದನ್ನೂ ಓದಿ: ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಯಾವುದೇ ತೀರ್ಮಾನ ಮಾಡಿಲ್ಲ: ಸಿಎಂ ಯಡಿಯೂರಪ್ಪ

Ramdev: ಅಲೋಪತಿ ವೈದ್ಯವನ್ನು ಸ್ಟುಪಿಡ್​ ಅಂದಿದ್ದ ಪತಂಜಲಿ ಬಾಬಾ ರಾಮದೇವ್​​ಗೆ ದೆಹಲಿ ಹೈಕೋರ್ಟ್​ ಸಮನ್ಸ್​

(Corporate workers did not work till when Shilpa Nag take back her resignation say Mysore Mayor)

Published On - 8:36 pm, Thu, 3 June 21