Ramdev: ಅಲೋಪತಿ ವೈದ್ಯವನ್ನು ಸ್ಟುಪಿಡ್​ ಅಂದಿದ್ದ ಪತಂಜಲಿ ಬಾಬಾ ರಾಮದೇವ್​​ಗೆ ದೆಹಲಿ ಹೈಕೋರ್ಟ್​ ಸಮನ್ಸ್​

Ramdev stupid science statement: ಇದಕ್ಕೂ ಮುನ್ನ ದೆಹಲಿ ವೈದ್ಯಕೀಯ ಒಕ್ಕೂಟವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೋವಿಡ್​ ಸಾಂಕ್ರಾಮಿಕ ರೋಗದ ಕಾಲದಲ್ಲಿ ವೈದ್ಯಲೋಕ ಅಹಿರ್ನಿಷಿ ದುಡಿಯುತ್ತಿದೆ. ಈ ಉದಾತ್ತ ಸೇವೆಯ ವೇಳೆ ಅನೇಕ ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ವೈದ್ಯಲೋಕವನ್ನು ಅಪಮಾನಿಸುತ್ತಿರುವ ರಾಮದೇವ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿತ್ತು.

Ramdev: ಅಲೋಪತಿ ವೈದ್ಯವನ್ನು ಸ್ಟುಪಿಡ್​ ಅಂದಿದ್ದ ಪತಂಜಲಿ ಬಾಬಾ ರಾಮದೇವ್​​ಗೆ ದೆಹಲಿ ಹೈಕೋರ್ಟ್​ ಸಮನ್ಸ್​
ಯೋಗಗುರು ಬಾಬಾ ರಾಮ್​ದೇವ್ (ಸಂಗ್ರಹ ಚಿತ್ರ)
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 03, 2021 | 4:47 PM

ನವದೆಹಲಿ: ಅಲೋಪತಿ ವೈದ್ಯವನ್ನು ಸ್ಟುಪಿಡ್​ ಅಂದಿದ್ದ ಯೋಗ ಗುರು, ಪತಂಜಲಿ ಬಾಬಾ ರಾಮದೇವ್​​ಗೆ ದೆಹಲಿ ಹೈಕೋರ್ಟ್​ ಸಮನ್ಸ್​ ನೀಡಿದೆ. ಪತಂಜಲಿಯ ಕೊರೊನಿಲ್​ (Patanjali Coronil) ಔಷಧದ ವಿರುದ್ಧ ದೆಹಲಿ ವೈದ್ಯಕೀಯ ಒಕ್ಕೂಟ (Delhi Medical Association -DMA) ಸಲ್ಲಿಸಿದ್ದ ದೂರು ಅಂಗೀಕರಿಸಿದ ದೆಹಲಿ ಹೈಕೋರ್ಟ್ ಸಮನ್ಸ್​ ಜಾರಿ ಮಾಡಿದೆ. ಜೊತೆಗೆ ಮುಂದಿನ ವಿಚಾರಣೆ ಜುಲೈ 13ಕ್ಕೆ ನಿಗದಿಯಾಗಿದ್ದು, ಅಲ್ಲಿಯವರೆಗೂ ಪತಂಜಲಿಯ ಕೊರೊನಿಲ್ ಬಗ್ಗೆ ರಾಮದೇವ್ ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡದಂತೆ ಅವರ ವಕೀಲರ ಮೂಲಕ ಸೂಚನೆ ನೀಡಿದೆ.

ಪತಂಜಲಿಯ ಕೊರೊನಿಲ್​ ಔಷಧವು ಕೊರೊನಾ ವೈರಸ್​​ ರೋಗಕ್ಕೆ (Covid-19) ರಾಮಬಾಣ ಅಂತೆಲ್ಲ ತಪ್ಪು ತಪ್ಪು ಮಾಹಿತಿ ನೀಡಿ, ಯೋಗ ಗುರು ರಾಮದೇವ್ ಪ್ರಚಾರ ಮಾಡುತ್ತಿದ್ದಾರೆ ಎಂದು ದೆಹಲಿ ವೈದ್ಯಕೀಯ ಒಕ್ಕೂಟ ತನ್ನ ದೂರಿನಲ್ಲಿ ಹೈಕೋರ್ಟ್​ ಗಮನ ಸೆಳೆದಿದೆ.

ಯೋಗ ಗುರು ರಾಮದೇವ್ ಅಲೋಪತಿ ವೈದ್ಯವನ್ನು ಸ್ಟುಪಿಡ್​ (stupid science) ಅಂದಿದ್ದಾರೆ. ಅಲ್ಲದೆ ಅಲೋಪತಿ ವೈದ್ಯರನ್ನು ಅವಹೇಳನ ಮಾಡುತ್ತಿದ್ದಾರೆ. ವಿಜ್ಞಾನ ಮತ್ತು ವೈದ್ಯರ ಬಗ್ಗೆ ಸಾರ್ವಜನಿಕವಾಗಿ ಹಾನಿಕಾರಕ ಮಾತುಗಳನ್ನಾಡುತ್ತಿದ್ದಾರೆ. ಹಾಗಾಗಿ ಇದು ವೈದ್ಯರ ನಾಗರಿಕ ಹಕ್ಕುಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಈ ದೂರು ದಾಖಲಿಸಿದ್ದೇವೆ ಎಂದು DMA ವಕೀಲ ರಾಜೀವ್ ದತ್ತಾ ತಿಳಿಸಿದ್ದಾರೆ.

ಇದಕ್ಕೂ ಮುನ್ನ ದೆಹಲಿ ವೈದ್ಯಕೀಯ ಒಕ್ಕೂಟವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೋವಿಡ್​ ಸಾಂಕ್ರಾಮಿಕ ರೋಗದ ಕಾಲದಲ್ಲಿ ವೈದ್ಯಲೋಕ ಅಹಿರ್ನಿಷಿ ದುಡಿಯುತ್ತಿದೆ. ಈ ಉದಾತ್ತ ಸೇವೆಯ ವೇಳೆ ಅನೇಕ ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ವೈದ್ಯಲೋಕವನ್ನು ಅಪಮಾನಿಸುತ್ತಿರುವ ರಾಮದೇವ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿತ್ತು.

ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್​ ಅವರು ಇದಕ್ಕೆ ಪ್ರತಿಕ್ರಿಯೆಯಾಗಿ ರಾಮದೇವ್ ಗೆ ಪತ್ರ ಬರೆದು ತಮ್ಮ ಮಾತುಗಳು ನಿಜಕ್ಕೂ ದುರದೃಷ್ಟಕರ ಎಂದು ಬಣ್ಣಿಸಿದ್ದರು. ಆರೋಗ್ಯ ಸಚಿವ ಹರ್ಷ ವರ್ಧನ್​ ಪತ್ರಕ್ಕೆ ಪ್ರತಿಕ್ರಿಯಿಸಿದ ರಾಮದೇವ್ ತಮ್ಮ ಮಾತುಗಳನ್ನು ವಾಪಸ್​ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು.

(Delhi high court issues summons to baba Ramdev over Patanjali Coronil and his stupid science statement)

ಅಲೋಪಥಿಕ್​ ವೈದ್ಯಕೀಯ ಪದ್ಧತಿಗೆ ಅಗೌರವ ತೋರಿದ ಆರೋಪ; ಬಾಬಾ ರಾಮ್​ದೇವ್​ ವಿರುದ್ಧ ಎಫ್​ಐಆರ್​

Published On - 4:45 pm, Thu, 3 June 21