ಬೆಂಗಳೂರು: ರಾಜ್ಯ ಹಾಗೂ ರಾಜಧಾನಿಗೆ ಕಂಟಕವಾಗಿದ್ದೇ ಜುಲೈ ತಿಂಗಳು. ಹೌದು, ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಅಬ್ಬರಿಸಿದ ಕೊರೊನಾ ಜುಲೈ ತಿಂಗಳಲ್ಲಿ ದಾಖಲಾದ ಸೋಂಕಿತರ ಸಂಖ್ಯೆ 1,08,873. ಈ ಪೈಕಿ ಬೆಂಗಳೂರಲ್ಲಿ 50,989 ಕೊರೊನಾ ಕೇಸ್ ಪತ್ತೆಯಾಗಿತ್ತು. ಹಾಗಾಗಿ, ರಾಜ್ಯದ ಸೋಂಕಿತರ ಪೈಕಿ ಅರ್ಧಪಾಲು ಬೆಂಗಳೂರಿನದ್ದೇ.
ಇನ್ನು, ಜುಲೈನಲ್ಲಿ ಮೃತಪಟ್ಟವರ ಸಂಖ್ಯೆಯೂ ಗಣನೀಯ ಏರಿಕೆ ಕಂಡಿತ್ತು. ರಾಜ್ಯದಲ್ಲಿ ಜುಲೈ ತಿಂಗಳಲ್ಲಿ ಮೃತಪಟ್ಟವರ ಸಂಖ್ಯೆ 2,068. ಇದರಲ್ಲಿ ರಾಜಧಾನಿಯಲ್ಲಿ ಮೃತಪಟ್ಟವರ ಸಂಖ್ಯೆ 1,030. ಜೊತೆಗೆ, ಗಮನಾರ್ಹ ವಿಷಯವೆಂದರೆ ಕಳೆದ ಜೂನ್ ತಿಂಗಳಲ್ಲಿ ಕೇವಲ 83 ಜನ ಮೃತಪಟ್ಟಿದ್ರು.
ಹಾಗಾಗಿ, ಆಗಸ್ಟ್ ತಿಂಗಳಿನಲ್ಲಿ ಕೊರೊನಾ ಮತ್ತಷ್ಟು ಉಲ್ಬಣಗೊಳ್ಳುವ ಆತಂಕ ಶುರುವಾಗಿದೆ. ರಾಜ್ಯದಲ್ಲಿ ಕೆಲದಿನಗಳಿಂದ 5-6 ಸಾವಿರ ಕೇಸ್ ದಾಖಲಾಗುತ್ತಿದ್ದು ಇದರ ಪ್ರಮಾಣ ಆಗಸ್ಟ್ನಲ್ಲಿ ಹೆಚ್ಚುವ ಸಾಧ್ಯತೆ ಬಹಳಷ್ಟು ಇದೆ. ಹೀಗಾಗಿ, ಡೆಡ್ಲಿ ಜುಲೈ ನಂತರ ಆಗಸ್ಟ್ನಲ್ಲಿ ಮುಂದೇನಾಗುತ್ತೋ ಅನ್ನೋ ಭೀತಿ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸೋಂಕಿನ ಪ್ರವಾಹ ಸುನಾಮಿಯಂತೆ ಬಂದು ರಾಜ್ಯಕ್ಕೆ ಅಪ್ಪಳಿಸುತ್ತಾ ಎನ್ನುವ ಚಿಂತೆ ಕಾಡುತ್ತಿದೆ.
Published On - 1:04 pm, Sat, 1 August 20