ಕೊರೊನಾ ಎರಡನೇ ಅಲೆ ಭೀತಿ ಬೆನ್ನಲ್ಲೇ ರಾಜ್ಯದಲ್ಲಿ ಇಳಿಮುಖವಾಯ್ತು ಕೊವಿಡ್ ಪ್ರಕರಣ

|

Updated on: Dec 23, 2020 | 9:40 PM

ಇಂಗ್ಲೆಡ್​ನಲ್ಲಿ ಕೊರೊನಾ ವೈರಾಣು ರೂಪ ಬದಲಿಸಿದೆ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಇಂಗ್ಲೆಂಡ್​ನಿಂದ ಬೆಂಗಳೂರಿಗೆ ಬಂದವರಲ್ಲೂ ಕೊರೊನಾ ಕಾಣಿಸಿಕೊಂಡಿದ್ದು ಸಾಕಷ್ಟು ಆತಂಕ ಸೃಷ್ಟಿಸಿದೆ. ಹೀಗಿರುವಾಗಲೇ ರಾಜ್ಯದಲ್ಲಿ ಕೊರೊನಾ ಪ್ರಕರಣ ತೀವ್ರ ಇಳಿಮುಖ ಕಂಡಿದೆ.

ಕೊರೊನಾ ಎರಡನೇ ಅಲೆ ಭೀತಿ ಬೆನ್ನಲ್ಲೇ ರಾಜ್ಯದಲ್ಲಿ ಇಳಿಮುಖವಾಯ್ತು ಕೊವಿಡ್ ಪ್ರಕರಣ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಇಂಗ್ಲೆಡ್​ನಲ್ಲಿ ಕೊರೊನಾ ವೈರಾಣು ರೂಪ ಬದಲಿಸಿದೆ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಇಂಗ್ಲೆಂಡ್​ನಿಂದ ಬೆಂಗಳೂರಿಗೆ ಬಂದವರಲ್ಲೂ ಕೊರೊನಾ ಕಾಣಿಸಿಕೊಂಡಿದ್ದು ಸಾಕಷ್ಟು ಆತಂಕ ಸೃಷ್ಟಿಸಿದೆ. ಹೀಗಿರುವಾಗಲೇ ರಾಜ್ಯದಲ್ಲಿ ಕೊರೊನಾ ಪ್ರಕರಣ ತೀವ್ರ ಇಳಿಮುಖ ಕಂಡಿದೆ.

ಕಳೆದ ಕೆಲ ವಾರಗಳಿಂದ ರಾಜ್ಯದಲ್ಲಿ ಸಾವಿರದ ಆಸುಪಾಸಿನಲ್ಲಿ ಹೊಸ ಪ್ರಕರಣ ಪತ್ತೆ ಆಗುತ್ತಿವೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 958 ಜನರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 9,12,340 ಕ್ಕೇರಿದೆ.

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 9 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದು ನಿಟ್ಟುಸಿರು ಬಿಡುವಂತೆ ಆಗಿದೆ.

ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 12,038 ಜನರ ಸಾವನಪ್ಪಿದ್ದಾರೆ. ಸೋಂಕಿತರ ಪೈಕಿ 8,86,547 ಜನ ಗುಣಮುಖರಾಗಿ ಡಿಸ್​ಚಾರ್ಜ್ ಆಗಿದ್ದಾರೆ. 13,736 ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 217  ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯ ರಾಜ್ಯದಲ್ಲಿ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ ಕೂಡ ಕಡಿಮೆ ಆಗುತ್ತಿರುವುದು ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಬೆಂಗಳೂರಿನಲ್ಲಿಂದು 550 ಹೊಸ ಕೊರೊನಾ ಕೇಸ್ ಪತ್ತೆ ಆಗಿದೆ. ಒಂಬತ್ತು ಜನರ ಪೈಕಿ ಇಬ್ಬರು ಬೆಂಗಳೂರಿನಲ್ಲೇ ಮೃತಪಟ್ಟಿದ್ದಾರೆ. ಬಾಗಲಕೋಟೆ, ಕೊಡಗು ಕೋಲಾರದಲ್ಲಿ ಅತಿ ಕಡಿಮೆ ಎಂದರೆ 1 ಕೊರೊನಾ ಕೇಸ್​ ಪತ್ತೆ ಆಗಿದೆ.

ಸರ್ಕಾರದ ಮಾರ್ಗಸೂಚಿ: ನಾಳೆಯಿಂದ ನೈಟ್​ ಕರ್ಫ್ಯೂ ಜಾರಿ: ಸಮಯದಲ್ಲೂ ಬದಲಾವಣೆ

Published On - 9:38 pm, Wed, 23 December 20