AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದ್ದೆಯಲ್ಲಿ ಜರ್ಬೆರ: ಹೊಸ ಪ್ರಯೋಗಕ್ಕೆ ಮುಂದಾದ ಬೀದರ್​ ರೈತ!

ಅರ್ಧ ಎಕರೆಯಲ್ಲಿ ಕಲರ್ ಕಲರ್ ಜರಬೇರಾ ಹೂವೂ ಬೆಳೆಯುವುದರ ಮೂಲಕ ಹಣ ಗಳಿಸುತ್ತಿದ್ದಾರೆ. ಇಲ್ಲಿ ಬೆಳೆದ ಹೂವು ರಾಜ್ಯದಲ್ಲಿ ಮಾತ್ರವಲ್ಲ ನೆರೆಯ ಆಂಧ್ರ-ಮಹಾರಾಷ್ಟ್ರ ರಾಜ್ಯಕ್ಕೂ ರವಾನೆ ಆಗುತ್ತಿರುವುದು ಈ ಯುವ ರೈತನ ಯಶೋಗಾಥೆಗೆ ಇಡೀ ಊರಿಗೆ ಊರೇ ಬೇರಗಾಗಿ ನೋಡುತ್ತಿದೆ.

ಗದ್ದೆಯಲ್ಲಿ ಜರ್ಬೆರ:  ಹೊಸ ಪ್ರಯೋಗಕ್ಕೆ ಮುಂದಾದ ಬೀದರ್​ ರೈತ!
ಯುವ ರೈತ ವಿಜಯ್ ಸೂರ್ಯವಂಶಿ
sandhya thejappa
| Updated By: ರಾಜೇಶ್ ದುಗ್ಗುಮನೆ|

Updated on: Dec 23, 2020 | 10:21 PM

Share

ಬೀದರ್: ಗಡಿ ಜಿಲ್ಲೆ ಬೀದರ್ ಅಂದ್ರೆ ಸಾಕು ಮೊದಲಿಗೆ ನೆನಪಿಗೆ ಬರೋದು ಬರ. ಸದಾ ಸಂಕಷ್ಟದಲ್ಲಿ ಬದುಕು ಸಾಗಿಸುವ ಇಲ್ಲಿನ ರೈತರ ಗೋಳು ಹೇಳತೀರದು. ಜೊತೆಗೆ ಆಗಾಗ ಸಾಲದ ಬಾಧೆಗೆ ನೇಣಿಗೆ ಕೊರಳು ಕೊಡೊ ಇಲ್ಲಿನ ರೈತರ ಗೋಳು ಮಾತ್ರ ಜನ ಪ್ರತಿನಿಧಿಗಳಿಗೆ ಕೇಳಿಸೋದೆ ಇಲ್ಲ. ಆದ್ರೆ ಇಲ್ಲೋಬ್ಬ ರೈತ ಇಂಥಾ ಹತ್ತಾರು ಸಮಸ್ಯೆಗಳ ನಡುವೆ ಕೃಷಿಯಲ್ಲೂ ನಿರಂತರ ಗಳಿಕೆ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ಅರ್ಧ ಎಕರೆಯಲ್ಲಿ ಕಲರ್ ಕಲರ್ ಜರ್ಬೆರ ಹೂ ಬೆಳೆಯುವುದರ ಮೂಲಕ ಹಣ ಗಳಿಸುತ್ತಿದ್ದಾರೆ. ಇಲ್ಲಿ ಬೆಳೆದ ಹೂ ರಾಜ್ಯದಲ್ಲಿ ಮಾತ್ರವಲ್ಲ ನೆರೆಯ ಆಂಧ್ರ-ಮಹಾರಾಷ್ಟ್ರ ರಾಜ್ಯಕ್ಕೂ ರಫ್ತಾಗುತ್ತಿದೆ. ಈ ಯುವ ರೈತನ ಯಶೋಗಾಥೆಗೆ ಇಡೀ ಊರಿಗೆ ಊರೇ ಬೇರಗಾಗಿ ನೋಡುತ್ತಿದೆ.

ನಗರ ಜೀವನಕ್ಕೆ ವಿದಾಯ ಕಂಪ್ಯೂಟರ್ ಇಂಜನಿಯರ್ ಓದಿದ ಇವರು ಕಂಪನಿಯಲ್ಲಿ ಸಾವಿರಾರು ರೂಪಾಯಿ ಸಂಬಳ ಪಡೆದು ನಗರದಲ್ಲಿ ಜೀವನ ನಡೆಸಬೇಕಾಗಿದ್ದ ಜೀವನಕ್ಕೆ ವಿದಾಯ ಹೇಳಿದ್ದಾರೆ. ಸ್ವಾವಲಂಬಿ ಜೀವನ ಸಾಗಿಸಬೇಕು, ಸಂತಸದ ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರದಿಂದ ಕಳೆದೆರಡು ವರ್ಷಗಳಿಂದ ಜರ್ಬೆರ ಹೂವು ಬೆಳೆದು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಇವರೇ ಯುವ ರೈತ ವಿಜಯ್ ಸೂರ್ಯವಂಶಿ. ಬರೀ ಗೋವಿನ ಜೋಳ, ಜೋಳ, ಕಬ್ಬಿನ ಬೆಳೆಯನ್ನು ನೆಚ್ಚದೇ ಹೊಸ ಬೆಳೆಗಳನ್ನು ಬೆಳೆದು ಯಶಸ್ವಿಯಾಗಬೇಕೆಂಬ ತುಡಿತ ಇವರಲ್ಲಿ ಇತ್ತು. ಹೀಗಾಗಿ ದೊಡ್ಡ ಕಂಪನಿ ಬಿಟ್ಟು ಪಟ್ಟಣಕ್ಕೆ ಮರಳಿ ಹೂವನ್ನು ಬೆಳೆಯುವ ಮೂಲಕ ಯಶಸ್ಸು ಕಂಡಿದ್ದಾರೆ.

ಪಾಲಿಹೌಸ್ ನಿರ್ಮಾಣ ಇವರ ಬಳಿ ಸುಮಾರು 20 ಎಕರೆಯಷ್ಟು ಕೃಷಿ ಭೂಮಿಯಿದೆ. ಅದರ ಫೈಕಿ ಅರ್ಧ ಎಕರೆಯಲ್ಲಿ ಕೃಷಿ ಭಾಗ್ಯ ಯೋಜನೆಯ ಸೌಲಭ್ಯ ಪಡೆದುಕೊಂಡು ಪಾಲಿಹೌಸ್ ನಿರ್ಮಾಣ ಮಾಡಿದ್ದಾರೆ. ಬಿಳಿ, ಹಳದಿ ಸುಮಾರು ಆರು ಬಣ್ಣಗಳ ಜರ್ಬೆರ ಹೂವುಗಳನ್ನು ಅವರು ಬೆಳೆಯುತ್ತಾರೆ. ಅರ್ದ ಎಕರೆಯ ಪಾಲಿಹೌಸ್ ಕೃಷಿ ನಿರ್ವಹಣೆ ಮಾಡಲು ಇಬ್ಬರು ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ದಿನಕ್ಕೆ ಎರಡು ಸಾವಿರದಷ್ಟು ಹೂಗಳು ಕೊಯ್ಲಿಗೆ ಸಿಗುತ್ತವೆ. ಇವುಗಳನ್ನು ಬಾಕ್ಸ್​ಗಳಲ್ಲಿ ತುಂಬಿ ನಗರದಲ್ಲಿ ಮಾರಾಟ ಮಾಡಿ, ಇನ್ನೂಳಿದ ಹೂವುಗಳನ್ನು ಹೈದರಾಬಾದ್ ಹಾಗೂ ತೆಲಂಗಾಣಕ್ಕೆ ಬಸ್​ಗಳ ಮೂಲಕ ರವಾನೆ ಮಾಡುತ್ತಾರೆ. ಪುನಾದ ಕಂಪನಿಯೊಂದರ ಮೂಲಕ 26 ರೂಪಾಯಿಗೆ ಒಂದು ಜರ್ಬೆರಾ ಸಸಿ ಪಡೆದು 20 ಗುಂಟಯಲ್ಲಿ ಒಟ್ಟು 11.200 ಸಸಿಗಳನ್ನು ಬೆಳೆಸಿದ್ದಾರೆ.

ಎಲ್ಲಾ ಕಾಲಕ್ಕೂ ಬೇಡಿಕೆ 2018 ಆಗಸ್ಟ್​ನಲ್ಲಿ ಸಸಿಗಳನ್ನು ನಾಟಿ ಮಾಡಿದ್ದು 2018ರ ನವೆಂಬರ್​ನಿಂದ  ಹೂಗಳ ಉತ್ಪಾದನೆ ಆರಂಭವಾಗಿದೆ. ನಾಟಿ ಮಾಡಿದ ಎರಡೂವರೆಯಿಂದ 3 ತಿಂಗಳಲ್ಲಿ ಹೂ ಬಿಡಲು ಆರಂಭವಾಗುತ್ತದೆ. ಒಮ್ಮೆ ನಾಟಿ ಮಾಡಿದ ಗಿಡಗಳಿಂದ ಮೂರು ವರ್ಷಗಳವರೆಗೆ ಉತ್ತಮ ಹೂವಿನ ಇಳುವರಿ ಪಡೆಯಲು ಅವಕಾಶ ಇದೆ. ಸಸಿಗಳ ಪೋಷಣೆಗೆ ನಾನಾ ಔಷಧಗಳನ್ನು ಬಳಕೆ ಮಾಡುತ್ತಾರೆ. ನಗರ ಪ್ರದೇಶದಲ್ಲಿ ಸಭೆ, ಸಮಾರಂಭಗಳಲ್ಲಿ ಶುಭಾಶಯ ಕೋರಲು, ಸನ್ಮಾನ, ಮದುವೆಗಳಲ್ಲಿ ಮಾಡುವ ಹೂವಿನ ಅಲಂಕಾರ, ಧಾರ್ಮಿಕ ಕಾರ್ಯಕ್ರಮ ಹೀಗೆ ನಾನಾ ಕಡೆಗಳಲ್ಲಿ ಜರ್ಬೆರ ಬಳಕೆ ಮಾಡಲಾಗುತ್ತದೆ. ಹೀಗಾಗಿ ಈ ಹೂಗೆ ವರ್ಷದ ಎಲ್ಲ ಕಾಲದಲ್ಲೂ ಬೇಡಿಕೆಯಿದೆ.

ಕಂಪನಿಯೊಂದರಲ್ಲಿ ಎಂಟು ವರ್ಷ ಕೆಲಸ ಮಾಡಿದೆ. ನಗರದ ಒತ್ತಡದ ಜೀವನಕ್ಕೆ ಬಾಯ್ ಹೇಳಿ ನನ್ನದೇ ಆದ ಜಮೀನಿನಲ್ಲಿ ಹೂವು ಬೆಳೆಯುತ್ತಿದ್ದೇನೆ. ಇದು ನನ್ನ ಮನಸ್ಸಿಗೆ ಸಂತಸ ಹಾಗೂ ತೃಪ್ತಿ ತಂದಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳೆಲ್ಲರೂ ಸಹಕಾರ ನೀಡಿದ್ದಾರೆ. ತಂದೆಯ ಪ್ರೇರಣೆಯಿಂದ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದು ಯುವ ರೈತ ವಿಜಯ್ ಸೂರ್ಯವಂಶಿ ತಿಳಿಸಿದ್ದಾರೆ.

National Farmers Day 2020 ಹೊಸ ಹೊಸ ಪ್ರಯೋಗಗಳೊಂದಿಗೆ ಮಾದರಿಯಾದ ರೈತ.. ಯಾರದು?